ಜಿಲ್ಲಾ ಪಂಚಾಯತ್ ಬಜೆಟ್ ಮಂಡನೆ ಕನ್ನಡ ವಲಯಕ್ಕೆ ಅಂಗೀಕಾರ: ಕಯ್ಯಾರ ಸ್ಮಾರಕಕ್ಕೆ ಮೊಬಲಗು ಮೀಸಲು
0
ಫೆಬ್ರವರಿ 14, 2019
ಕಾಸರಗೋಡು: ಸೇವಾ ವಲಯ, ಆರೋಗ್ಯ-ಶಿಕ್ಷಣ, ಸಾರಿಗೆ, ಕಲ್ಯಾಣ ವಲಯಗಳಿಗೆ ವಿಶೇಷ ಆದ್ಯತೆ ನೀಡಿ ಜಿಲ್ಲಾ ಪಂಚಾಯತ್ ಮುಂಗಡಪತ್ರ ನಿನ್ನೆ ಮಂಡನೆಗೊಂಡಿದೆ.
ಶಿಕ್ಷಣ ವಲಯದಲ್ಲಿ ಪ್ಲಸ್ ಟು ಸಮತ್ವ ತರಬೇತಿಯಲ್ಲಿ ಕನ್ನಡ ಕಲಿಕಾರ್ಥಿಗಳನ್ನು ಸೇರ್ಪಡೆ ಮಾಡಿದ್ದು, ಕನ್ನಡ ಶಿಕ್ಷಣ ಸಾಮಾಗ್ರಿಗಳ ಲಭ್ಯತೆಗೆ ಮೊಬಲಗು ಮೀಸಲಿರಿಸಿರುವುದು ಜಿಲ್ಲೆಯ ಕನ್ನಡಿಗರ ವಲಯಕ್ಕೆ ನೀಡಿದ ಅಂಗೀಕಾರವಾಗಿದೆ. ಕನ್ನಡದ ಹಿರಿಯ ಚೇತನ,ನಾಡೋಜ ಡಾ.ಕಯ್ಯಾರ ಕಿಂ?ಂಣ್ಣ ರೈ ಅವರ ಸ್ಮಾರಕ ಸಾಕಾರಗೊಳಿಸುವ ನಿಟ್ಟಿನಲ್ಲಿ ಮೊಬಲಗನ್ನು ಮೀಸಲಿರಿಸಿರುವುದು ಗಮನಾರ್ಹವಾಗಿದೆ.
ಗುರುವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಅಧ್ಯಕ್ಷ ಎ.ಜಿ.ಸಿ.ಬಶೀರ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಶಾಂತಮ್ಮ ಫಿಲಿಪ್ ಮುಂಗಡಪತ್ರ ಮಂಡನೆ ಮಾಡಿದರು. 108,02,54,629 ರೂ. ಆದಾಯ, 99,19,00,000 ರೂ.ವೆಚ್ಚ, 8,83,54,629 ರೂ. ಮಿಗತೆ ನಿರೀಕ್ಷಿಸುವ ಬಜೆಟ್ ಮಂಡಿಸಲಾಗಿದೆ.
ಹೈನು ಕೃಷಿಕರಿಗೆ ಆರ್ಥಿಕ ಸಹಾಯ ನೀಡುವ ಯೋಜನೆಗೆ 1.75 ಕೋಟಿ ರೂ.ಮೀಸಲಿರಿಸಲಾಗಿದೆ. ಭತ್ತದ ಕೃಷಿ, ಬೀಜೋತ್ಪಾದನೆ ವಲಯಕ್ಕೆ ಮೊಬಲಗು ಮೀಸಲಿರಿಸಲಾಗಿದೆ. ಆನಿವಾಸಿ ಭಾರತೀಯರ ಕಲ್ಯಾಣಕ್ಕೆ ಆನಿವಾಸಿ ಸ್ವ-ಸಹಾಯ ಸಂಘಗಳ ಉದ್ದಿಮೆಗೆ ಆರ್ಥಿಕ ಸಹಾಯ , ಖಾದಿ ಕೈಗಾರಿಕೆ, ಮಹಿಳಾ ಸಬಲೀಕರಣಕ್ಕೆ ಗುರಿ ಇರಿಸಲಾಗಿದೆ. ಪರಿಸರ ಸಂರಕ್ಷಣೆ ನಿಟ್ಟಿನಲ್ಲಿ ಜೈವಿಕ ವೈವಿಧ್ಯ ಸಂರಕ್ಷಣೆ, ನದಿ ಸಂರಕ್ಷಣೆಗೆ ಮೊಬಲಗು ಮೀಸಲಿರಿಸಲಾಗಿದೆ. ಜಲಸಂರಕ್ಷಣೆಗೆ ಜಲಜೀವನ ಯೋಜನೆಗಾಗಿ ಒಂದು ಕೋಟಿ ರೂ. ಮೀಸಲಿರಿಸಲಾಗಿದೆ.
ಕೋಳಿ ಮರಿ ಉತ್ಪಾದನೆಗೆ ಯೋಜನೆ, ಮೀನುಗಾರರ ಕಾರಿಕ ಗ್ರೂಪ್ ಗಳಿಗೆ ಫೈಬರ್ ದೋಣಿ ಖರೀದಿಗೆ ಆರ್ಥಿಕ ಸಹಾಯನೀಡುವ ಯೋಜನೆ, ನೀರಾವರಿ ಮೂಲ ಮತ್ತು ತತ್ಸಂಬಧಿ ಚೆಕ್ ಡ್ಯಾಂ ಸಹಿತ ಕಾಮಗಾರಿಗಳಿಗೆ 2 ಕೋಟಿ ರೂ.ಮೀಸಲಿರಿಸಲಾಗಿದೆ.
ಉತ್ಪಾದನೆ ವಲಯದಲ್ಲಿ ಅನೇಕ ಯೋಜನೆಗಳಿದ್ದು, 50 ಕೋಟಿ ರೂ. ವೆಚ್ಚದಲ್ಲಿ ಚಟ್ಟಂಚಾಲ್ ಗ್ಯಾಸ್ ಆಧಾರಿತ ಪವರ್ ಪ್ಲಾಂಟ್ ಸ್ಥಾಪನೆ, ಗೈಲ್ ಪೈಪ್ ಲೈನ್ ಸ್ಥಾಪನೆ ಕುರಿತು ಉಲ್ಲೇಖಿಸಲಾಗಿದೆ. ಹಿಂದಿನ ಮುಂಗಡಪತ್ರದಲ್ಲಿ ತಿಳಿಸಲದ ಪೆರಿಯ ಕಿರು ವಿಮಾನನಿಲ್ದಾಣದ ಕುರಿತು ಚರ್ಚಿಸಲಾಗಿದೆ.
ಜಿಲ್ಲಾ ಆಸ್ಪತ್ರೆಗೆ ಕಾಯಲ್ಪ ಪ್ರಶಸ್ತಿ ಒಲಿದು ಬಂದಿರುವುದು ಅಭಿಮಾನಕರ ವಿಚಾರ ಎಂದವರು ನುಡಿದರು. ಬಡರೋಗಿಗಳಿಗೆ ಡಯಾಲಿಸಿಸ್ ಚಿಕಿತ್ಸೆ ಸಹಾಯ ಯೋಜನೆಗೆ 25 ಲಕ್ಷ ರೂ. ಮೀಸಲಿರಿಸಲಾಗಿದೆ. ಕ್ಯಾನ್ಸರ್ ಬಾಧಿತರ ಸಹಾಯಕ್ಕೆ ಯೋಜನೆ ಸಿದ್ಧವಾಗುತ್ತಿದೆ. ಸಾಂತ್ವ ಚಿಕಿತ್ಸಾ ರಂಗದಲ್ಲಿ ಪಾಲಿಯೇಟಿವ್ ಆರೈಕೆ ಸೇರಿದಂತಯೆ 95 ಲಕ್ಷ ರೂ. ಮೀಸಲಿರಿಸಲಾಗಿದೆ. ಎಚ್.ಐ.ವಿ. ಬಾಧಿತರಿಗೆ ಪೌಷ್ಠಿಕಾಹಾರ ನೀಡಲು, ಟಿ.ಬಿ.ರೋಗಿಗಳ ಸರಂರಕ್ಷಣೆ ಇತ್ಯಾದಿಗಳಿಗಿರುವ ಕೈತಾಂ?? (ಕೈಯಾಸರೆ) ಯೋಜನೆಯನ್ನು ಮುಂದುವರಿಸುವುದಾಗಿ ಅವರು ತಿಳಿಸಿದರು. ವಯೋವೃದ್ಧರ ಸಂರಕ್ಷಣೆಗೆ ಹಗಲು ವಿಶ್ರಾಂತಿ ಕೇಂದ್ರಗಳು, ವಯೋಮಿತ್ರ, ಸರಕಾರಿ ಅಂಗೀಕೃತ ವಯೋಜನ ಸಂಸ್ಥೆಗಳಿಗೆ ಸಹಾಯ ಯೋಜನೆಗಳಿಗಾಗಿ ಒಂದು ಕೋಟಿ ರೂ.ಮೀಸಲಿರಿಸಲಾಗಿದೆ.
ಮಹಿಳೆಯರ ಸಬಲೀಕರಣ ಸಂಬಂಧ ನಗರ ಪ್ರದೇಶಗಳಲ್ಲಿ ಶೌಚಾಲಯ ಸಹಿತ ಫೀಲಾಂಜ್ ವಿಶ್ರಾಂತಿಕೊಠಡಿಗಳ ನಿರ್ಮಾಣ ಮಾಡಲಾಗುವುದು. ಮಹಿಳಾ ಸಹಕಾರಿ ಸಂಘಗಳಿಗೆ ಸಹಯ ಒದಗಿಸುವ ನಿಟ್ಟಿನಲ್ಲೊಇ 85 ಲಕ್ಷ ರೂ. ಮೀಸಲಿರಿಸಲಾಗಿದೆ. ವಿದ್ಯಾರ್ಥಿನಿಯರಿಗೆ ಬೆಂಬಲ ನೀಡುವ ನಿಟ್ಟಿನಲ್ಲಿ ಮಹಿಳಾಸ್ನೇಹಿ ಕೇಂದ್ರಗಳ ಸ್ಥಾಪನೆ ಮುಂದುವರಿಸಲಾಗುವುದು. ಅಲ್ಪಸಂಖ್ಯಾತ ವಿಭಾಗ ಟ್ರಾನ್ಸ್ ಜೆಂಡರ್ಸ್ ಅವರ ಅಭಿವೃದ್ಧಿಗಾಗಿ ಯೋಜನೆಗಳಿಗೆ ಮೊಬಲಗು ಮೀಸಲಿರಿಸಿದೆ.
ಸ್ಥಳೀಯಾಡಳಿತ ಸಂಸ್ಥೆಗಳ ಜೊತೆಸೇರಿ ಸಂಪೂರ್ಣ ತ್ಯಾಜ್ಯ ಪರಿಷ್ಕರಣೆ ಘಟಕ ಸ್ಥಾಪನೆಗೆ ಒಂದು ಕೋಟಿ ಗೂ ಅಧಿಕ ಮೊಬಲಗುಮೀಸಲಿರಿಸಲಾಗಿದೆ. ಕಿಫ್ ಬಿ ಸಂಸ್ಥೆಯ ಜತೆ ಸೇರಿ ಚಟ್ಟಂಚಾಲ್ ನಲ್ಲಿ ಅಂತಾರಾಷ್ಟ್ರೀಯ
ಗುಣಮಟ್ಟದ ಕಸಾಯಿಖಾನೆಯೊಂದನ್ನು ಸ್ಥಾಪಿಸಲು 10 ಕೋಟಿ ರೂ. ವೆಚ್ಚ ಅಂದಾಜಿಸಿದ್ದು, ಅದಕ್ಕಿರುವ ಯತ್ನ ನಡೆಸಲಾಗುತ್ತಿದೆ. ಬೀದಿ ನಾಯಿಗಳ ಕಾಟ ನಿಯಂತ್ರಣದಲ್ಲಿ ಅನಿಮಲ್ ಬರ್ತ್ ಕಂಟ್ರೋಲ್(ಎ.ಬಿ.ಸಿ.) ಯೋಜನೆ ಯಶಸ್ವಿಯಾಗಿದ್ದು, ಅದನ್ನು ಮುಂದುವರಿಸಲು, ಯೋಜನೆ ವಿಸ್ತಾರ ಅಂಗವಾಗಿ ತ್ರಿಕರಿಪುರದಲ್ಲಿ ಎ.ಬಿ.ಸಿ.ಸೆಂಟರ್ ಆರಂಭಿಸಲು ನಿರ್ಧರಿಸಲಾಗಿದೆ. ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಸಾರ್ವಜನಿಕ ಸ್ಮಶಾನಗಳ ನಿರ್ಮಾಣ ಉದ್ದೇಶವಿದ್ದು,ಮೊಬಲಗು ಮೀಸಲಿರಿಸಲಾಗಿದೆ.
ಜಿಲ್ಲಾ ಮಟ್ಟದಲ್ಲಿ ವಿಶೇಷಚೇತನ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಒದಗಿಸುವ ನಿಟ್ಟಿನಲ್ಲಿ 75 ಲಕ್ಷ ರೂ. ಮೀಸಲಿರಿಸಲಾಗಿದೆ. ಬಡ್ಸ್ ಶಾಲೆಗಳ ಮೂಲಸೌಲಭ್ಯ ಅಭಿವೃದ್ಧಿಗೆ 53 ಲಕ್ಷ ರೂ.ಮೀಸಲಿರಿಸಲಾಗಿದೆ. ಸಾರ್ವಜನಿಕ ಶಿಕ್ಷಣ ಅಭಿಯಾನ ಸಹಿತ ವಿವಿಧ ಶೈಕ್ಷಣಿಕ ಯೋಜನೆಗಳಿಗೆ ಮೊಬಲಗು ಮೀಸಲಿರಿಸಲಾಗಿದೆ. ಎಸ್.ಎಸ್.ಎ. ಯೋಜನೆಗೆ 3 ಕೋಟಿ ರೂ.ಮೀಸಲಿರಿಸಲಾಗಿದೆ. ಶಾಲೆಗಳಲ್ಲಿ ಸೌಸಶಕ್ತಿ ಕೇಂದ್ರ ಸ್ಥಾಪನೆಗೆ 2 ಕೋಟಿ ರೂ.,ಕ್ರೀಡಾ ವಲಯದ ಅಭಿವೃದ್ಧಿಗೆ "ಕುದಿಪ್ "ಯೋಜನೆಗೆ ಮೊಬಲಗು ಮೀಸಲಿರಿಲಾಗಿದೆ. ಪರಿಶಿಷ್ಟ ಜಾತಿ-ಪಂಗಡ ವಿದ್ಯಾರ್ಥಿಗಳಿಗೆ ವಿದ್ಯರ್ಥಿ ವೇತನ ನಿಡುವ ನಿಟ್ಟಿನಲ್ಲಿ 75 ಲಕ್ಷರೂಮೀಸಲಿರಿಸಲಾಗಿದೆ. ಕೊರಗ ಜನಾಂಗಕ್ಕೆ ಪೌಷ್ಠಿಕಾಹಾರ ಪೂರೈಕೆ, ಕಾಲನಿಗಳ ಅಭಿವೃದ್ಧಿ ಇತ್ಯಾದಿಗಳಿಗೆ ಮೊಬಲಗು ಮೀಸಲಿರಿಸಲಾಗಿದೆ. ಈ ಜನಾಂಗದ ಮಕ್ಕಲು ಶಾಲೆಗೆ ತೆರಳಲು ಸಹಾಯ ಮಾಡುವ ಗೋತ್ರವಾಹಿನಿ ಯೋಜನೆ ಮುಂದುವರಿಕೆಗೆ ಮೊಬಲಗು ಮೀಸಲಿರಿಸಲಾಗಿದೆ.
ಜಿಲ್ಲೆಯನ್ನು ವಸತಿರಿತರಿಲ್ಲದ ಪ್ರದೇಶವಾಗಿಸುವ ನಿಟ್ಟಿನಲ್ಲಿ ಲೈಫ್, ಪಿ.ಎಂ.ಎ.ವೈ. ವಸತಿ ನಿರ್ಮಾಣ ಯೋಜನೆಗಾಗಿ 8 ಕೋಟಿ ರೂ. ಮೀಸಲಿರಿಸಲಾಗಿದೆ. ಜಿಲ್ಲಾ ಪಂಚಾಯತ್ ರಸ್ತೆಗಳನ್ನು ಮೆಕ್ ಡಾಂ ಡಾಮರೀಕರಣ ನಡೆಸುವ ಮದರಿ ಯೋಜನೆಗಾಗಿ 9.85 ಕೋಟಿ ರೂ., ಗ್ರಾಮೀಣ ರಸ್ತೆಗಳ ಪುನಶ್ಚೇತನಕ್ಕೆ 14 ಕೋಟಿ ರೂ., ಜಿಲ್ಲಾ ಪಂಚಾಯತ್ ರಸ್ತೆ ಅಭಿವೃದ್ಧಿಗೆ 12 ಕೋಟಿ ರೂ. ಮೀಸಲಿರಿಸಲಾಗಿದೆ.

