ತುಳು ಕೃತಿಗಳಿಗೆ ಆಹ್ವಾನ
0
ಫೆಬ್ರವರಿ 14, 2019
ಕಾಸರಗೋಡು: ಕೇರಳ ತುಳು ಅಕಾಡೆಮಿಯ ತ್ರೈಮಾಸ ಪತ್ರಿಕೆ "ತೆಂಬೆರೆ"ಯ ನೂತನ ಆವೃತ್ತಿ ಫೆ.27ರಂದು ಪ್ರಕಟಗೊಳ್ಳಲಿದೆ. ಈ ಪತ್ರಿಕೆಗಾಗಿ ತುಳು ಭಾಷೆ-ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಲೇಖನಗಳನ್ನು, ಕವನಗಳನ್ನು, ಕತೆಗಳನ್ನು ಆಹ್ವಾನಿಸಲಾಗಿದೆ.
ಆಸಕ್ತರು ಫೆ.16ರ ಮುಂಚಿತವಾಗಿ "ಕಾರ್ಯದರ್ಶಿ, ಕೇರಳ ತುಳು ಅಕಾಡೆಮಿ, ಸಿವಿಲ್ ಸ್ಟೇಷನ್, ವಿದ್ಯಾನಗರ-671123" ಎಂಬ ವಿಳಾಸಕ್ಕೆ ಕಳುಹಿಸಬಹುದಾಗಿದೆ ಎಂದು ಅಕಾಡೆಮಿಯ ಸಂಬಂಧಪಟ್ಟ ಅಧಿಕೃತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

