ಜಿಲ್ಲಾ ಮಟ್ಟದ ಅಡುಗೆ ಸ್ಪರ್ಧೆ
0
ಫೆಬ್ರವರಿ 14, 2019
ಕಾಸರಗೋಡು: ಜಿಲ್ಲಾ ಕುಟುಂಬಶ್ರೀ ವತಿಯಿಂದ ಕ್ಯಾಟರಿಂಗ್ ಘಟಕಗಳಿಗಾಗಿ ಜಿಲ್ಲಾ ಮಟ್ಟದ ಅಡುಗೆ ಸ್ಪರ್ಧೆ ನಡೆಯಲಿದೆ. ಕ್ಯಾಟರಿಂಗ್ ಯೂನಿಟ್ ಗಳ ಅಡುಗೆ ವೈವಿಧ್ಯ ಪ್ರಕಟಿಸುವ, ಅರಿಗೆ ಸೂಕ್ತ ಮಾರುಕಟ್ಟೆ ಒದಗಿಸುವ ಉದ್ದೇಶದಿಂದ ಸ್ಪರ್ಧೆ ಜರುಗಲಿದೆ.
ಪ್ರಥಮಬಹುಮಾನ ರೂಪದಲ್ಲಿ 10 ಸಾವಿರ ರೂ., ದ್ವಿತೀಯ ಬಹುಮಾನ 5 ಸಾವಿರ ರೂ., ತೃತೀಯ ಬಹುಮಾನ 2500 ರೂ. ಲಭಿಸಲಿದೆ. ಪ್ರಥಮ ಹಂತದಲ್ಲಿ ಜಿಲ್ಲಾ ಮಟ್ಟದ ಸ್ಪರ್ಧೆ, ತದನಂತರ ರಾಜ್ಯ ಮಟ್ಟದ ಸ್ಪರ್ಧೆ ಇರುವುದು. ಆಸಕ್ತರು ಕುಟುಂಬಶ್ರೀ ಕ್ಯಾಟರಿಂಗ್ ಯೂನಿಟ್ ನ್ನು ಸಂಪರ್ಕಿಸಬಹುದು. ದೂರವಾಣಿ ಸಂಖ್ಯೆ: 90728-55589 ಸಂಪರ್ಕಿಸಬಹುದು.

