ನೆಹರೂ ಯುವಕೇಂದ್ರದಲ್ಲಿ ರಾಷ್ಟ್ರೀಯ ಯುವ ಸ್ವಯಂಸೇವಕರ ನೇಮಕಾತಿ
0
ಫೆಬ್ರವರಿ 16, 2019
ಕಾಸರಗೋಡು: ಕೇಂದ್ರ ಯುವಜನ ಕಲ್ಯಾಣ-ಕ್ರೀಡಾ ಮಂತ್ರಾಲಯ ವ್ಯಾಪ್ತಿಯಲ್ಲಿ ನೆಹರೂ ಯುವ ಕೇಂದ್ರದಲ್ಲಿ ರಾಷ್ಟ್ರೀಯ ಯುವ ಸ್ವಯಂಸೇವಕರ ನೇಮಕಾತಿ ಸಂಬಂಧ ಅರ್ಜಿಕೋರಲಾಗಿದೆ.
ನೆಹರೂ ಯುವ ಕೇಂದ್ರ ಜಾರಿಗೊಳಿಸುವ ಯುವಜನಕಲ್ಯಾಣ ಕಾರ್ಯಕ್ರಮ ಸಂಯೋಜಿಸುವ ನಿಟ್ಟಿನಲ್ಲಿ ನೇತೃತ್ವ ವಹಿಸುವುದು. ಯೂತ್ ಕ್ಲಬ್ ಗಳ ಚಟುವಟಿಕೆಗಳನ್ನು ಏಕೀಕರಣಗೊಳಿಸುವುದು ಈ ಸ್ವಯಂಸೇವಕರ ಪ್ರಧಾನಹೊಣೆಯಾಗಿದೆ. ಜಿಲ್ಲೆಯ 6 ಬ್ಲಾಕ್ ಗಳಲ್ಲಿ 14 ಯುವಕ-ಯುವತಿಯರಿಗೆ ಸ್ವಯಂಸೇವಕರಾಗುವ ಅವಕಾಶವಿದೆ. ತರಬೇತಿಯ ನಂತರ ಬ್ಲಾಕ್ ಮಟ್ಟದಲ್ಲಿ ನೇಮಿಸಲಾಗುವ ಸ್ವಯಂಸೇವಕರಿಗೆ ಪ್ರತಿತಿಂಗಳು ತಲಾ 5 ಸವಿರ ರೂ. ಗೌರವಧನ ಲಭಿಸಲಿದೆ. ಎಸ್.ಎಸ್.ಎಲ್.ಸಿ. ತೇರ್ಗಡೆಹೊಂದಿರಬೇಕಾದುದು ಮೂಲ ಶಿಕ್ಷಣಾರ್ಹತೆಯಾಗಿದೆ. ಉನ್ನತ ಶಿಕ್ಷಣ ಪಡೆದವರು, ಕಂಪ್ಯೂಟರ್ ಜ್ಞಾನ ಹೊಂದಿರುವವರು, ನೆಹರೂ ಯುವ ಕೇಂದ್ರದಲ್ಲಿ ಅಫಿಲಿಯೇಟ್ ನಡೆಸಿದ ಯೂತ್ ಕ್ಲಬ್ ಗಳ ಸದಸ್ತನ ವಿದ್ದವರಿಗೆ ಆದ್ಯತೆಯಿದೆ. 2018 ಏ. 1ನೇ ತಾರೀಕಿಗೆ 18ರಿಂದ 25 ವರ್ಷ ಪ್ರಾಯದವರಾಗಿರಬೇಕು. ಜಿಲ್ಲೆಯ ಶಾಶ್ವತ ನಿವಾಸಿಗಳಾಗಿರಬೇಕು. ರೆಗ್ಯುಲರ್ ಕೋರ್ಸ್ ಗಳಲ್ಲಿಕಲಿಕೆ ನಡೆಸುವವರು ಅರ್ಜಿ ಸಲ್ಲಿಕೆಗೆ ಅರ್ಹರಲ್ಲ. ಅರ್ಜಿಯನ್ನು ಆನ್ ಲೈನ್ ಮೂಲಕ ಸಮರ್ಪಿಸುವ ನಿಟ್ಟಿನಲ್ಲಿ ನೆಹರೂ ಯುವಕೇಂದ್ರ ಸಂಘಟನ್ ವೆಬ್ ಸೈಟ್ ನ್ನು ಸಂದರ್ಶಿಸಬಹುದು. ಮಾಹಿತಿಗೆ ವಿದ್ಯಾನಗರ ಸಿವಿಲ್ ಸ್ಟೇಷನ್ ನಲ್ಲಿರುವ ನೆಹರೂ ಯುವ ಕೇಂದ್ರ ಜಿಲ್ಲಾ ಯುವ ಸಂಯೋಜನಾಧಿಕಾರಿ ಅವರ ಕಚೇರಿಯನ್ನು ಸಂಪರ್ಕಿಸಬಹುದು. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 04994-255144 ಸಂಪರ್ಕಿಸಬಹುದು.

