ಬಲಿಯಾದ ವೀರ ಯೋಧರಿಗೆ ಶ್ರದ್ದಾಂಜಲಿ
0
ಫೆಬ್ರವರಿ 16, 2019
ಕಾಸರಗೋಡು: ಉಗ್ರರ ದಾಳಿಗೆ ಬಲಿಯಾದ ಭಾರತೀಯ ಸೈನಿಕರಿಗೆ ಶ್ರದ್ದಾಂಜಲಿ ಕಾರ್ಯಕ್ರಮ ಸಿವಿಲ್ ಸ್ಟೇಷನ್ ಆವರಣದಲ್ಲಿ ಶನಿವಾರ ಜರುಗಿತು.
ಅಖಿಲ ಭಾರತೀಯ ಪೂರ್ವ ಸೈನಿಕ್ ಪರಿಷತ್ ಜಿಲ್ಲಾ ಸಮಿತಿ ವತಿಯಿಂದ ಶನಿವಾರ ಸಿವಿಲ್ ಸ್ಟೇಷನ್ ಆವರಣದ ಕಾರ್ಗಿಲ್ ಸ್ಮಾರಕಕ್ಕೆ ಪುಷ್ಪಚಕ್ರ ಸಲ್ಲಿಕೆ, ಪುಷ್ಪಾರಚನೆ ನಡೆಸುವ ಮೂಲಕ ಶ್ರದ್ದಾಂಜಲಿ ಸಲ್ಲಿಸಲಾಯಿತು.
ಸಂಸದ ಪಿ.ಕರುಣಾಕರನ್, ಹೆಚ್ಚುವರಿ ದಂಡನಾಧಿಕಾರಿ ಎನ್.ದೇವಿದಾಸ್, ಸಮಿತಿ ಅಧ್ಯಕ್ಷ ಕುಮಾರ್ ವಿ.ಜಿ., ಕಾರ್ಯದರ್ಶಿ ರಾಜೀವನ್ ಪಾಲೋಟ್, ಉಪಾಧ್ಯಕ್ಷ ಶಶಿ ಕುಮಾರ್, ಬಾಲಕೃಷ್ಣನ್, ಸಮಿತಿ ಸದಸ್ಯರು, ಸಿವಿಲ್ ಸ್ಟೇಷನ್ ಸಿಬ್ಬಂದಿ, ಸಾರ್ವಜನಿಕರು ಭಾಗವಹಿಸಿದರು.

