ಲಿಟಲ್ ಕೈಟ್ಸ್ ಶಿಬಿರ ಆರಂಭ
0
ಫೆಬ್ರವರಿ 16, 2019
ಕಾಸರಗೋಡು: ಲಿಟಲ್ ಕೈಟ್ಸ್ ಜಿಲ್ಲಾ ಮಟ್ಟದ ಶಿಬಿರ ಆರಂಭಗೊಂಡಿದೆ.
ಅತ್ಯಾಧುನಿಕ ತಾಂತ್ರಿಕ ಸೌಲಭ್ಯಗಳಾದ ಇಂಟರ್‍ನೆಟ್ ಆಫ್ ತಿಂಗ್ಸ್(ಐ.ಒ.ಟಿ) ತ್ರೀಡಿ ಕ್ಯಾರೆಕ್ಟರ್ ಮಾಡೆಲಿಂಗ್ ಇತ್ಯದಿಗಳ ಬಗ್ಗೆ ಶಾಲಾ ಮಕ್ಕಳಿಗೆ ಮಾಹಿತಿ ನೀಡುವ ನಿಟ್ಟಿನಲ್ಲಿ ಎರಡು ದಿನಗಳ ಕಾಲ ಚೆರ್ಕಳ ಮಾರ್ತೋಮಾ ಕಿವುಡರ ವಿದ್ಯಾಲಯದಲ್ಲಿ ನಡೆಯುವ ಲಿಟಲ್ ಕೈಟ್ಸ್ ಶಿಬಿರ ಶನಿವಾರ ಆರಂಭಗೊಂಡಿದೆ.
ಕೈಟ್ಸ್ ಉಪಾಧ್ಯಕ್ಷ ಮತ್ತು ಕಾರ್ಯಕಾರಿ ನಿರ್ದೇಶಕ ಕೆ.ಅನ್ವರ್ ಸಾದತ್ ವೀಡಿಯೋ ಕಾನ್‍ಫೆರೆನ್ಸ್ ಮೂಲಕ ಶಿಬಿರವನ್ನು ಉದ್ಘಾಟಿಸಿದರು.ಐ.ಒ.ಟಿ., ಬಿಗ್ ಡಾಟಾ ಅನಾಲಿಸಿಸ್ ಇತ್ಯಾದಿ ನೂತನ ತಂತ್ರಜ್ಞಾನ ಮೂಲಕ ಮಕ್ಕಳ ಏಳಿಗೆ ಸಾಧ್ಯ ಎಂದು ಅವರು ಈ ವೇಳೆ ಅಭಿಪ್ರಾಯಪಟ್ಟರು.
ಕಳೆದವರ್ಷ ಡಿಸೆಂರ್ ತಿಂಗಳಲ್ಲಿ ನಡೆಸಿದ ಉಪಜಿಲ್ಲಾ ಶಿಬಿರಗಳಲ್ಲಿ ಭಾಗವಹಿಸಿದ್ದ 700 ಮಂದಿಯಿಂದ 80 ಮಂದಿಯನ್ನು ಆಯ್ಕೆ ಮಾಡಿ ಕೈಟ್(ಕೇರಳ ಇನ್ಫ್ರಾ ಸ್ಟ್ರಕ್ಚರ್ ಆಂಡ್ ಟೆಕ್ನಾಲಜಿ ಫೋರ್ ಎಜ್ಯುಕೇಶನ್)ನೇತೃತ್ವದಲ್ಲಿ ನಡೆಸುತ್ತಿರುವ ಶಿಬಿರ ಇದಾಗಿದೆ. ಶಿಬಿರ ಇಂದು(ಫೆ.17) ಸಮಾರೋಪಗೊಳ್ಳಲಿದೆ. ಇದರ ಅಂಗವಾಗಿ ಮಕ್ಕಳು ಸಿದ್ಧಗೊಳಿಸಿರುವ ಉತ್ಪನ್ನಗಳ ಪ್ರದರ್ಶನನಡೆಯಲಿದೆ.

