ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಸಭೆ
0
ಫೆಬ್ರವರಿ 16, 2019
ಕಾಸರಗೋಡು: ಕಾಶ್ಮೀರದ ಪುಲ್ವಾಮಾದಲ್ಲಿ ಆತ್ಮಾಹುತಿ ಉಗ್ರದಾಳಿಗೆ ಹುತಾತ್ಮರಾದ ಸಿ ಆರ್ ಪಿ ಎಫ್ ಯೋಧರಿಗೆ ನುಳ್ಳಿಪಾಡಿ ಹವ್ಯಕಭವನದಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಕಾಸರಗೋಡಿನ ಹಿರಿಯ ದಂತವೈದ್ಯ ಡಾ.ಗಣಪತಿ ಭಟ್ ಕುಳಮರ್ವ ಅಧ್ಯಕ್ಷತೆ ವಹಿಸಿದ್ದರು. ಬದಿಬಾಗಿಲು ಪ್ರೆಂಡ್ಸ್ ನುಳ್ಳಿಪಾಡಿ ಇದರ ಅಧ್ಯಕ್ಷ ದಾಮೋದರ ನುಳ್ಳಿಪಾಡಿ, ಲಯನ್ಸ್ ಕ್ಲಬ್ ನ ಅಧ್ಯಕ್ಷ ಡಾ.ರಾಘವೇಂದ್ರ ಭಟ್,ಹವ್ಯಕಸಭಾದ ಅಧ್ಯಕ್ಷ ಡಾ.ವೆಂಕಟಗಿರಿ,ಗಣೇಶ ಅಮೈ,ಚೈತನ್ಯಯೋಗದ ಡಾ.ಜಯಶ್ರೀ ನಾಗರಾಜ್ ಮತ್ತು ಗಮಕಕಲಾಪರಿಷತ್ತಿನ ಟಿ.ಶಂಕರನಾರಾಯಣ ಭಟ್ ಸಹಿತ ಎಲ್ಲರೂ ಉಗ್ರರ ಕೃತ್ಯವನ್ನು ಖಂಡಿಸಿದರು.ಹುತಾತ್ಮರಾದ ಯೋಧರ ಕುಟುಂಬಕ್ಕೆ ದುಃಖವನ್ನು ಹೋಗಲಾಡಿಸುವ ಶಕ್ತಿ ಪರಮಾತ್ಮನು ಕರಣಿಸಲಿ.ಉಗ್ರರನ್ನು ದಮನಿಸುವಲ್ಲಿ ಸರಕಾರ ಯಶಸ್ವಿಯಾಗಲಿ ಎಂದರು.ಅಗಲಿದ ಯೋಧರ ಆತ್ಮಕ್ಕೆ ಸದ್ಗತಿ ಸಿಗಲೆಂದು ಎರಡುನಿಮಿಷ ಮೌನ ಪ್ರಾರ್ಥನೆ ಮಾಡಲಾಯಿತು.ಆರಂಭದಲ್ಲಿ ರಮೇಶಭಟ್ ವೈ.ವಿ.ಸ್ವಾಗತಿಸಿ ಕೊನೆಯಲ್ಲಿ ಕೃಷ್ಣಪ್ರಸಾದ ಕೋಟೆಕಣಿ ವಂದಿಸಿದರು.

