ಕೇರಳ ಸಂರಕ್ಷಣಾ ಉತ್ತರ ವಲಯ ಜಾಥಾ ಆರಂಭ
0
ಫೆಬ್ರವರಿ 16, 2019
ಹಿಂದೂ ಮುಸಲ್ಮಾನರ ಮಧ್ಯೆ ವಿಷ ಬೀಜವನ್ನು ಬಿತ್ತಿ ರಾಜಕೀಯ ಲಾಭ ಪಡೆಯುತ್ತಿರುವ ಮೋದಿ ಸರಕಾರವನ್ನು ಉಚ್ಚಾಟಿಸಬೇಕಾಗಿದೆ: ಸೀತರಾಂ ಯಚೂರಿ
ಉಪ್ಪಳ: ಹಿಂದೂ ಮುಸಲ್ಮಾನರ ಮಧ್ಯೆ ವಿಷ ಬೀಜವನ್ನು ಬಿತ್ತುವ ಮೋದಿ ಸರಕಾರವನ್ನು ಕೇಂದ್ರದಿಂದ ಹೊರದಬ್ಬಬೇಕಾಗಿದೆ. ದೇಶದ ಸಂಪತ್ತನ್ನು ಲೂಟಿ ಮಾಡಿ, ಕೋಮು ವೈಷಮ್ಯ ಬಿಗಡಾಯಿಸುವಂತೆ ಜನರನ್ನು ವಿಭಜಿಸುತಯ್ತಿರುವ ಮೋದಿ ನೇತೃತ್ವದ ಕೇಂದ್ರ ಸರಕಾರ ಬಹು ಸಂಸ್ಕøತಿಯ, ಧರ್ಮ ನಿರಪೇಕ್ಷ ಭಾರತಕ್ಕೆ ಅಪಾಯಕಾರಿ. ಕೇಂದ್ರದಲ್ಲಿ ಉತ್ತಮ ಸರಕಾರವೊಂದನ್ನು ಆಡಳಿತಕ್ಕೆ ತರಬೇಕಾಗಿದೆ ಎಂದು ಸಿಪಿಐ (ಎಂ) ಪೊಲಿಟ್ ಬ್ಯುರೋ ಪ್ರಧಾನ ಕಾರ್ಯುದರ್ಶಿ ಸೀತಾರಾಮ್ ಯಚೂರಿ ಹೇಳಿದರು.
ಅವರು ಶನಿವಾರದಂದು ಉಪ್ಪಳದಲ್ಲಿ ನಡೆದ ಕೇರಳ ಸಂರಕ್ಷಣಾ ಉತ್ತರವಲಯ ಜಾಥಕ್ಕೆ ಚಾಲನೆ ನೀಡಿ ಮಾತನಾಡುತಿದ್ದರು.
ಕೇವಲ ಬಣ್ಣದ ಮಾತುಗಳ ಮೂಲಕ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗಿದೆ ಎಂದು ಬೀಗುವ ಕೇಂದ್ರ ಸರಕಾರ ನೈಜ ಜನಸಾಮಾನ್ಯರ ಬಳಿಗೆ ಅಂತಹ ಯೋಜನೆಯನ್ನು ತಲಪಿಸುವಲ್ಲಿ ಸೋತಿದೆ. ಬಹುರಾಷ್ಟ್ರೀಯ ಕಂಪೆನಿಗಳು ಮತ್ತು ವಿದೇಶಿ ಐಶಾರಾಮಿ ವ್ಯಕ್ತಿಗಳೊಂದಿಗೆ ಶಾಮೀಲಾಗಿರುವ ಕೇಂದ್ರ ಸರಕಾರ ದೇಶದ ಬಡ ಜನತೆಯನ್ನು ಕೊಳ್ಳೆಹೊಡೆಯುತ್ತಿದೆ. ಈ ನಿಟ್ಟಿನಲ್ಲಿ ಪರ್ಯಾಯ ಆಡಳಿತ ವ್ಯವಸ್ಥೆಯೊಂದರ ನಿರ್ಧಾರಕ್ಕೆ ಕಾಲ ಸಮೀಪಿಸುತ್ತಿದೆ ಎಂದು ಅವರು ತಯಿಳಿಸಿದರು.
ಸಿಪಿಐ ರಾಜ್ಯ ಕಾರ್ಯದರ್ಶಿ ಕಾನಂ ರಾಜೇಂದ್ರನ್ ಜಾಥಾಕ್ಕೆ ನೇತೃತ್ವ ನೀಡಿದರು. ಎಲ್ ಡಿ ಎಫ್ ರಾಜ್ಯ ಘಟಕದಲ್ಲಿರುವ ಹತ್ತು ಪಕ್ಷಗಳ ನೇತಾರರು ಜಾಥಾದಲ್ಲಿ ಭಾಗವಹಿಸಿದರು.
ಕೇರಳ ಸಂರಕ್ಷಣಾ ಯಾತ್ರೆ ಎಂಬ ನಾಮಧೇಯದಲ್ಲಿ ಬಿಜೆಪಿಯನ್ನು ಹೊರದಬ್ಬಿರಿ ರಾಷ್ಟ್ರವನ್ನು ರಕ್ಷಿಸಿರಿ ಎಡ ಪಕ್ಷ ಜನಪಕ್ಷ ಎಂಬ ಘೋಷಣೆಯೊಂದಿಗೆ ಜಾಥಾ ಪ್ರಯಾಣವನ್ನು ಆರಂಭಿಸಿತು.
ಫೆಬ್ರವರಿ 23 ರಂದು ಜಾಥಾ ತ್ರಿಶೂರಿನಲ್ಲಿ ಸಮಾಪ್ತಿಗೊಳ್ಳಲಿದೆ. ಇದರ ಜೊತೆಯಾಗಿ ತಿರವನಂತಪುರದಿಂದ ಸಿಪಿಐ ರಾಷ್ಟ್ರೀಯ ಕಾರ್ಯದರ್ಶಿ ಎಸ್ ಸುಧಾಕರ ರೆಡ್ಡಿ ಚಾಲನೆ ನೀಡಿದ ದಕ್ಷಿಣ ವಲಯ ಜಾಥಾ ಕೂಡಾ ತ್ರಿಶೂರಿನಲ್ಲಿ ಸಮಾಪ್ತಿಗೊಳ್ಳಲಿದೆ.

