ಲ್ಯಾಪ್ ಟಾಪ್ ಮತ್ತು ಕ್ರೀಡಾಕಿಟ್ ವಿತರಣೆ
0
ಫೆಬ್ರವರಿ 16, 2019
ಮಂಜೇಶ್ವರ: ವರ್ಕಾಡಿ ಗ್ರಾಮಪಂಚಾಯತಿ ವತಿಯಿಂದ ಪರಿಶಿಷ್ಟ ಜಾತಿ-ಪಂಗಡ ವಿದ್ಯಾರ್ಥಿಗಳಿಗಾಗಿ ಗ್ರಾಮ ಪಂಚಾಯತು ವ್ಯಾಪ್ತಿಯ ಎಂ.ಜಿ.ಎಲ್.ಸಿ.ಗಳಿಗೆ ಮತ್ತು ಪಾತೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಲ್ಯಾಪ್ ಟಾಪ್ ಮತ್ತು ಕ್ರೀಡಾ ಕಿಟ್ ವಿತರಣೆ ನಡೆಯಿತು.
2018-19ನೇ ವಾರ್ಷಿಕ ಯೋಜನೆಯಲ್ಲಿ ಅಳವಡಿಸಿ ಈ ಕೊಡುಗೆ ನೀಡಲಾಯಿತು. ಗ್ರಾಮ ಪಂಚಾಯತಿ ಅಧ್ಯಕ್ಷ ಅಬ್ದುಲ್ ಮಜೀದ್ ಬಿ.ಎ. ಕೊಡುಗೆವಿತರಿಸಿದರು. ಸ್ಥಾಯೀ ಸಮಿತಿ ಅಧ್ಯಕ್ಷ ಜೆಸಿಂತಾ ಡಿಸೋಜಾ, ರಹಮತ್ ರಝಾಕ್,ಸದಸ್ಯರಾದ ಗೀತಾ ವಿ.ಸಾಮಾನಿ, ಇಂದಿರಾ, ಭಾರತಿ, ಸೀತಾ, ತುಳಸಿ, ಪೂರ್ಣಿಮಾ ಬಿ., ವಸಂತ, ಗೋಪಾಲಕೃಷ್ಣ ಪಿ., ಆನಂದ ಟಿ., ಸದಾಶಿವ ನಾಯಕ್, ಎಸ್.ಟಿ.ಪ್ರಮೋಟರ್ ಲವೀನಾ ಅಲ್ವಾರಿಸ್, ಎಸ್.ಸಿ.ಪ್ರಮೋಟರ್ ಅಶ್ವಿನಿ, ನಿರ್ವಹಣಾಧೀಕಾರಿ ಸುರೆಶ್ ಬಂಗೇರ, ಎಂ.ಜಿ.ಎಲ್.ಸಿ. ಶಾಲೆಗಳ ಮುಖ್ಯಶಿಕ್ಷಕರು, ರಕ್ಷಕ-ಶಿಕ್ಷಕ ಸಂಘ ಅಧ್ಯಕ್ಷರು, ಪರಿಶಿಷ್ಟ ಜಾತಿ-ಪಂಗಡದ ವಿದ್ಯಾರ್ಥಿಗಳ ಹೆತ್ತವರು ಉಪಸ್ಥಿತರಿದ್ದರು.

