ಮಹಿಳಾ ಆಯೋಗ ಅದಾಲತ್
0
ಫೆಬ್ರವರಿ 24, 2019
ಕಾಸರಗೋಡು: ಮಹಿಳಾ ಆಯೋಗ ನೋಟೀಸು ಕಳುಹಿಸಿಯೂ ಅದಾಲತ್‍ಗೆ ಹಾಜರಾಗದೇ ಇರುವವರನ್ನು ಕಾನೂನು ಕ್ರಮಗಳ ಮೂಲಕ ಹಾಜರುಪಡಿಸಲಾಗುವುದು ಎಂದು ರಾಜ್ಯ ಮಹಿಳಾ ಆಯೋಗ ಸದಸ್ಯೆ ಡಾ.ಶಾಹಿದಾ ಕಮಾಲ್ ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿ ಕಿರು ಸಭಾಂಗಣದಲ್ಲಿ ನಡೆದ ಅದಾಲತ್‍ನಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಇಂಗ್ಲೀಷ್ ಮಾಧ್ಯಮ ಶಾಲೆಯೊಂದರಲ್ಲಿ ನೌಕರಿಯಲ್ಲಿದ್ದ ಯುವತಿಯೊಬ್ಬರನ್ನು ಹಣದ ವಿಚಾರದಲ್ಲಿ ಅವ್ಯವಹಾರ ನಡೆಸಿದ್ದಾರೆ ಎಂಬ ಆರೋಪದಲ್ಲಿ ನೌಕರಿಯಿಂದ ತೆಗೆದುಹಾಕಿದ ಪ್ರಕರಣ ಸಂಬಂಧ ದೂರನ್ನು ಪರಿಶೀಲಿಸಿ ನ್ಯಾಯ ಒದಗಿಸುವುದಾಗಿ ಆಯೋಗ ತಿಳಿಸಿದೆ. ಈ ಸಂಬಂಧ ಶಾಲೆಯ ಅ„ಕಾರಿಗಳಿಂದ ವರದಿಯನ್ನೂ ಯಾಚಿಸಲಾಗಿದೆ.
ಒಟ್ಟು 22 ದೂರುಗಳನ್ನು ಪರಿಶೀಲಿಸಲಾಗಿದ್ದು, 7 ಅಹವಾಲುಗಳಿಗೆ ತೀರ್ಪು ನೀಡಲಾಗಿದೆ. 14 ದೂರುಗಳನ್ನು ಮುಂದಿನ ಅದಾಲತ್‍ನಲ್ಲಿ ಪರಿಶೀಲಿಸುವುದಾಗಿ ತಿಳಿಸಲಾಗಿದೆ.
ಆಯೋಗ ಸದಸ್ಯರಾದ ಇ.ಎನ್.ರಾಧಾ, ನ್ಯಾಯವಾದಿ ಎ.ಪಿ.ಉಷಾ, ನ್ಯಾಯವಾದಿ ಕೆ.ಜಿ.ಬೀನಾ, ಮಹಿಳಾ ಎಸ್.ಐ.ಶಾಂತಾ ಮೊದಲಾದವರು ಉಪಸ್ಥಿತರಿದ್ದರು.

