ಸಾಲ ವಿತರಣೆ ಮೇಳ ಮತ್ತು ಜನಜಾಗೃತಿ ಶಿಬಿರ
0
ಫೆಬ್ರವರಿ 24, 2019
ಕಾಸರಗೋಡು: ರಾಜ್ಯ ಹಿಂದುಳಿದ ಜನಾಂಗ ಅಭಿವೃದ್ಧಿ ನಿಗಮ, ಕಾಸರಗೋಡು ಜಿಲ್ಲಾ ಕಚೇರಿ ವತಿಯಿಂದ ರಾಷ್ಟ್ರೀಯ ಅಲ್ಪಸಂಖ್ಯಾತ ಅಭಿವೃದ್ಧಿ ಹಣಕಾಸು ನಿಗಮದ ಸಹಕಾರದೊಂದಿಗೆ ಸಾಲ ವಿತರಣೆ ಮೇಳ ಮತ್ತು ಜನಜಾಗೃತಿ ಶಿಬಿರ ಜರಗಿತು.
ಕಾಸರಗೋಡು ಜಿಲ್ಲಾ ಸಹಕಾರಿ ಬ್ಯಾಂಕ್ ಸಭಾಂಗಣದಲ್ಲಿ ನಡೆದ ಸಮಾರಂಭವನ್ನು ಸಂಸದ ಪಿ.ಕರುಣಾಕರನ್ ಉದ್ಘಾಟಿಸಿದರು. ಶಾಸಕ ಎನ್.ಎ.ನೆಲ್ಲಿಕುನ್ನು ಅಧ್ಯಕ್ಷತೆ ವಹಿಸಿದ್ದರು. ಕಾಸರಗೋಡು ನಗರಸಭೆ ಅಧ್ಯಕ್ಷೆ ಬಿಫಾತಿಮಾ ಇಬ್ರಾಹಿಂ, ನಿಗಮದ ಯೋಜನೆ ಸಹಾಯಕ ಎನ್.ಎಂ.ಮೋಹನನ್, ಸಹಾಯಕ ಪ್ರಬಂಧಕಿ ಕೃಷ್ಣ ಕುಮಾರಿ ಎಂ.ವಿ. ಮೊದಲಾದವರು ಉಪಸ್ಥಿತರಿದ್ದರು.
ವಿವಿಧ ಯೋಜನೆಗಳ ಮೂಲಕ 50 ಮಂದಿ ಫಲಾನುಭವಿಗಳಿಗೆ 62 ಲಕ್ಷ ರೂ. ಸಾಲ ವಿತರಣೆ ನಡೆಯಿತು. ಕಾಸರಗೋಡು ಜಿಲ್ಲಾ ಪ್ರಬಂಧಕಿ ಲತಾ ಅವರು ನಿಗಮ ಜಾರಿಗೊಳಿಸುವ ಯೋಜನೆಗಳ ಕುರಿತು ಮಾಹಿತಿ ನೀಡಿದರು. `ಯೋಜನೆ ನಿರ್ವಹಣೆ ಮತ್ತು ಮಾರುಕಟ್ಟೆ' ಎಂಬ ವಿಷಯದಲ್ಲಿ ಜಿಲ್ಲಾ ಉದ್ದಿಮೆ ಅಭಿವೃದ್ಧಿ ಅ„ಕಾರಿಗ ದಿನೇಶನ್ ಟಿ., `ಬುಕ್ ಕೀಪಿಂಗ್ ಆಂಡ್ ಅಕೌಂಟಿಂಗ್' ಎಂಬ ವಿಷಯದಲ್ಲಿ ಶೈನಿ ಸಿ. ತರಗತಿ ನಡೆಸಿದರು.

