ವಿಮಾ ಯೋಜನೆ ಸದಸ್ಯತ್ವ
0
ಫೆಬ್ರವರಿ 24, 2019
ಕಾಸರಗೋಡು: ಜಿಲ್ಲೆಯ ಮೀನುಕಾರ್ಮಿಕರ ಅಭಿವೃದ್ಧಿ ಕಲ್ಯಾಣ ಸಹಕಾರಿ ಸಂಘಗಳಲ್ಲಿ ಸದಸ್ಯರಾಗಿರುವ ಎಲ್ಲ ಮೀನು ಕಾರ್ಮಿಕರಿಗೆ ವೈಯಕ್ತಿಕ ಅಪಘಾತ ವಿಮಾ ಯೋಜನೆ 2019-20 ವರ್ಷದಲ್ಲಿ ಜಾರಿಗೊಳಿಸುವ ವಿಮಾ ಯೋಜನೆಯಲ್ಲಿ ಸದಸ್ಯರಾಗಬಹುದು. ವಿಮಾ ಯೋಜನೆಯಲ್ಲಿ ಸದಸ್ಯತನ ಪಡೆದ ಮೀನು ಕಾರ್ಮಿಕರು ಅಪಘಾತದಲ್ಲಿ ಮೃತರಾದರೆ, ವಿಕಲಚೇತನರಾದರೆ ನಿಬಂಧನೆಗಳಿಗೆ ಅನುಸಾರವಾಗಿ ಕುಟುಂಬಕ್ಕೆ ಹತ್ತು ಲಕ್ಷ ರೂ. ವಿಮಾ ಮೊಬಲಗು ಲಭಿಸಲಿದೆ. ಜಿಲ್ಲೆಯ 18ರಿಂದ 70 ವರ್ಷದವರು ಸ್ವಸಹಾಯ ಗುಂಪು ಸದಸ್ಯರು ಮತ್ತು ಅವರ ಸದಸ್ಯರಿರುವ ಮೀನುಗಾರರ ಅಭಿವೃದ್ಧಿ ಕಲ್ಯಾಣ ಸಹಕಾರಿ ಸಂಘದ ವಾರ್ಷಿಕ ಪ್ರೀಮಿಯಂ ಆಗಿರುವ 458 ರೂ. ಮಾ.15ರ ಮುಂಚಿತವಾಗಿ ಪಾವತಿಸಿ ವಿಮಾ ಯೋಜನೆಯಲ್ಲಿ ಸದಸ್ಯರಾಗಬಹುದು.
ಸದಸ್ಯತನ ಪಡೆದ ನಂತರ ಮೀನು ಕಾರ್ಮಿಕರು ಅಪಘಾತದಲ್ಲಿ ಮೃತರಾದರೆ ಮೃತದೇಹವನ್ನು ಆಸ್ಪತ್ರೆಯಿಂದ ಮನೆಗೆ ತರುವುದಕ್ಕೆ, ಮರಣಾನಂತರ ಕ್ರಮಗಳನ್ನು ನಡೆಸುವುದಕ್ಕೆ 2500 ರೂ. ವರೆಗಿನ ಸಹಾಯ ಲಭಿಸಲಿದೆ. ಮೃತ ಮೀನು ಕಾರ್ಮಿಕರಿಗೆ 25 ವರ್ಷ ಪ್ರಾಯಕ್ಕಿಂತ ಕೆಳಗಿನ ವಯೋಮಾನದ ಆಶ್ರಿತರಾದ ಮಕ್ಕಳಿದ್ದರೆ ಅವರ ಕಲಿಕೆಗೆ ಸಹಾಯ ರೂಪದಲ್ಲಿ ತಲಾ 5 ಸಾವಿರ ರೂ. ಇಬ್ಬರು ಮಕ್ಕಳಿಗೆ ಲಭಿಸಲಿದೆ. ಮೀನುಗಾರಿಕೆಗೆ ತೆರಳಿದ್ದ ವೇಳೆ ಹೃದ್ರೋಗ, ರಕ್ತದೊತ್ತಡ ಹೆಚ್ಚಳ, ಮೆದುಳು ಆಘಾತ ಇತ್ಯಾದಿಗಳಿಂದ ಮರಣ ಸಂಭವಿಸಿದರೆ ವಿಮಾ ಮೊಬಲಗು ದೊರೆಯದು.
ಮಾ.15ರ ಮುಂಚಿತವಾಗಿ ಯೋಜನೆಯಲ್ಲಿ ಸದಸ್ಯರಾದವರಿಗೆ 2019 ಎ.1ರಿಂದ 2010 ಮಾ.31 ವರೆಗಿನ ಕಾಲಾವ„ಯಲ್ಲಿ ವಿಮಾ ಸೌಲಭ್ಯಕ್ಕೆ ಅರ್ಹತೆ ಇರುವುದು. ಹೆಚ್ಚಿನ ಮಾಹಿತಿಗೆ ಮತ್ಸ್ಯ ಫೆಡ್ ಕಾಸರಗೋಡು ಜಿಲ್ಲಾ ಕಚೇರಿ, ಆಯಾ ಕ್ಲಸ್ಟರ್ ಪೆÇ್ರಜೆಕ್ಟ್ ಕಚೇರಿಗಳನ್ನು ಸಂಪರ್ಕಿಸಬಹುದು. ದೂರವಾಣಿ ಸಂಖ್ಯೆ: 04994-230176, ಕ್ಲಸ್ಟರ್1,3-9526041128, ಕ್ಲಸ್ಟರ್ 2,4-9526041127.

