ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಉದ್ಘಾಟನೆ
0
ಫೆಬ್ರವರಿ 24, 2019
ಕಾಸರಗೋಡು: ಐಸಿಎಆರ್ - ಕೆವಿಕೆ ಕಾಸರಗೋಡು ಹಾಗೂ ಕೇರಳ ರಾಜ್ಯ ಕೃಷಿ ಮತ್ತು ರೈತರ ಇಲಾಖೆಯ ನೇತೃತ್ವದಲ್ಲಿ ಕೃಷಿಕರಿಗಾಗಿ ಕಾಸರಗೋಡು ಐಸಿಎಆರ್ - ಸಿಪಿಸಿಆರ್‍ಐನಲ್ಲಿ ಆಯೋಜಿಸಿದ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ಜಿಲ್ಲಾ ಮಟ್ಟದ ಉದ್ಘಾಟನೆಯನ್ನು ಕಾಸರಗೋಡು ಶಾಸಕ ಎನ್.ಎ.ನೆಲ್ಲಿಕುನ್ನು ಉದ್ಘಾಟಿಸಿ ಮಾತನಾಡಿದರು.
ಐಸಿಎಆರ್ - ಸಿಪಿಸಿಆರ್‍ಐನ ಪ್ರಧಾನ ನಿರ್ದೇಶಕಿ ಡಾ.ಅನಿತಾ ಕರುಣ್ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದರು. ಐಎಂಸಿ ಸದಸ್ಯ ಶಿವಕೃಷ್ಣ ಭಟ್, ಲೀಡ್ ಬ್ಯಾಂಕ್ ಪ್ರಬಂಧಕ ರಮಣ ಉಪಸ್ಥಿತರಿದ್ದರು.
ಕೃಷಿ ಪ್ರಿನ್ಸಿಪಲ್ ಅಧಿಕಾರಿ ತ್ರಿಸಮ್ಮ ತೋಮಸ್ ಯೋಜನೆಯ ಬಗ್ಗೆ ಮಾಹಿತಿ ನೀಡಿದರು. ಡಾ.ಕೆ.ಮುರಳೀಧರನ್ ಸ್ವಾಗತಿಸಿ, ಡಾ.ಟಿ.ಎಸ್.ಮನೋಜ್ ಕುಮಾರ್ ವಂದಿಸಿದರು.

