ಗೂವೆದಪಡ್ಪು ಪ್ರೇರಣಾ ಗ್ರಂಥಾಲಯ ಉದ್ಘಾಟನೆ
0
ಫೆಬ್ರವರಿ 14, 2019
ಮಂಜೇಶ್ವರ: ಗೂವೆದಪಡ್ಪು ಪ್ರೇರಣಾ ಸಾರ್ವಜನಿಕ ಗ್ರಂಥಾಲಯದ ಉದ್ಘಾಟನಾ ಕಾರ್ಯಕ್ರಮ ಬುಧವಾರ ಗ್ರಂಥಾಲಯದಧ್ಯಕ್ಷ ಜಯರಾಮ ಕೊಣಿಬೈಲು ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಮಂಜೇಶ್ವರ ತಾಲೂಕು ಲೈಬ್ರರಿ ಕೌನ್ಸಿಲ್ ಕಾರ್ಯದರ್ಶಿ ಅಹಮ್ಮದ್ ಹುಸೈನ್ ಪಿ.ಕೆ ಉದ್ಘಾಟಿಸಿದರು. ವರ್ಕಾಡಿ ಗ್ರಾ.ಪಂ.ಸದಸ್ಯ ಇಂದಿರಾ, ಸೀತಾ, ಭಾರತಿ, ಲೈಬ್ರರಿ ಕೌನ್ಸಿಲ್ ಸದಸ್ಯ ರಾಧಾಕೃಷ್ಣ ಬಲ್ಲಾಳ್ ಎ.ಬಿ, ಅಬೂಬಕರ್ ಸಿದ್ದೀಕ್ ಮಾಸ್ತರ್ ಪಾತೂರು, ಶಿಕ್ಷಕಿ ಸಿಸ್ಟರ್ ಪ್ರೆಸಿಲ್ಲಾ, ಸೇಸ ಕೊಡ್ಲಮೊಗರು, ವಾಸು ಮಿತ್ತಮೂಲೆ, ಅಕ್ಷಯ ಕೇಂದ್ರದ ಸಂಯೋಜಕ ಶ್ರೀನಿವಾಸ ಸ್ವರ್ಗ, ರಾಮಕೃಷ್ಣ ಭಟ್ ಮಾಸ್ತರ್, ಕೇರಳ ತುಳು ಅಕಾಡೆಮಿ ಸದಸ್ಯೆ ರಾಜೀವಿ ಕಳಿಯೂರು, ಗೋಪಾಲ ಕೊಡ್ಲಮೊಗರು, ರಂಗ ನಿರ್ದೇಶಕ ಉದಯ ಸಾರಂಗ್ ಮೊದಲಾದವರು ಉಪಸ್ಥಿತರಿದ್ದು ಶುಭಹಾರೈಸಿದರು.
ಗ್ರಂಥಾಲಯದ ಕಾರ್ಯದರ್ಶಿ ಅಶೋಕ ಕೊಡ್ಲಮೊಗರು ಸ್ವಾಗತಿಸಿ, ಮಧುಸೂದನ ಗೂವೆದಪಡ್ಪು ವಂದಿಸಿದರು. ರಾಜೇಶ್ ಕೊಡ್ಲಮೊಗರು ಕಾರ್ಯಕ್ರಮ ನಿರೂಪಿಸಿದರು. ಬಳಿಕ ಅಂಕಣಕಾರ, ಸಾಹಿತಿ ಆನಂದ ರೈ ಅಡ್ಕಸ್ಥಳ ಅವರ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಿತು. ರಾಜೀವಿ ಕಳಿಯೂರು, ಚೇತನ್ ವರ್ಕಾಡಿ, ರವೀಂದ್ರ ಕುಲಾಲ್ ವರ್ಕಾಡಿ ಮೊದಲಾದವರು ಸ್ವರಚಿತ ಕವನಗಳನ್ನು ವಾಚಿಸಿದರು. ಶ್ವೇತ ಕಾನ ಸ್ವಾಗತಿಸಿ, ಮಧುಶ್ರೀ ವಂದಿಸಿದರು. ಮಂಜುನಾಥ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ವಿವೇಕ ಗೀತ ಗಾಯನ ಸಂಗಮ ನಡೆಯಿತು. ಜಯಶ್ರೀ ಸ್ವಾಗತಿಸಿ, ವಂದಿಸಿದರು. ಉದಯ ಸಾರಂಗ್ ಕಾರ್ಯಕ್ರಮ ನಿರ್ವಹಿಸಿದರು.

