ಉಪ್ಪಳ: ಕುರುಡಪದವು ಶ್ರೀ ಅಯ್ಯಪ್ಪ ಸೇವಾ ಸಮಿತಿ ಮತ್ತು ಶ್ರೀ ಅಯ್ಯಪ್ಪ ಭಜನಾ ಮಂದಿರದ ಲೋಕಾರ್ಪಣೆ ಹಾಗೂ ಸ್ವರ್ಣಲೇಪಿತ ಶ್ರೀ ಅಯ್ಯಪ್ಪ ಸ್ವಾಮಿಯ ಬಿಂಬ ಫಲಕ ಪ್ರತಿಷ್ಠೆಯು ಧಾರ್ಮಿಕ ಸಾಂಸ್ಕøತಿಕ ಕಾರ್ಯಕ್ರಮಗಳಿಗೆ ವಿಜೃಂಭಣೆಯಿಂದ ಬುಧವಾರ ಚಾಲನೆಗೊಂಡಿತು.
ಪೂರ್ವಾಹ್ನ 9.30 ಕ್ಕೆ ಉಗ್ರಾಣ ಮುಹೂರ್ತ ನೆರವೇರಿತು. ಬಳಿಕ ಶ್ರೀ ಅಯ್ಯಪ್ಪ ಸ್ವಾಮಿಯ ಅಲಂಕೃತ ಸ್ವರ್ಣ ಲೇಪಿತ ಬಿಂಬ ಫಲಕದ ಶೋಭಾಯಾತ್ರೆಯು ಒಡಿಯೂರು ಕ್ಷೇತ್ರದ ಶ್ರೀ ಗುರುದೇವಾನಂದ ಸ್ವಾಮೀಜಿಯವರ ಶುಭಾಶೀರ್ವಾದದೊಂದಿಗೆ ವೈವಿಧ್ಯಮಯ ಕಲಾರೂಪಗಳ ಪ್ರದರ್ಶನ ಸಹಿತ ಭಜನೆ, ಅಯ್ಯಪ್ಪ ನಾಮಜಪ, ಶಿಂಗಾರಿ ಮೇಳಗಳ ಜೊತೆಯಲ್ಲಿ ತೆರೆದ ವಾಹನದಲ್ಲಿ ಶ್ರೀ ಕ್ಷೆತ್ರಕ್ಕೆ ಆಗಮಿಸಿತು. ಸಾವಿರಾರು ಭಕ್ತರು ಶೋಭಾಯಾತ್ರೆಯಲ್ಲಿ ಪಾಲ್ಗೊಂಡರು. ದಾರಿಯುದ್ದಕ್ಕೂ ಕೇಸರಿಯ ಅಲಂಕಾರವು ಭಕ್ತರನ್ನು ಸ್ವಾಗತಿಸಿತು. ಮುಗಿಲು ಮುಟ್ಟಿದ ಜೈಕಾರ, ಭಕ್ತಿಯ ಭಾವ ಕುರುಡಪದವು ಪ್ರದೇಶವನ್ನು ಆವರಿಸಿಕೊಂಡು ಪ್ರಸನ್ನತೆಯನ್ನು ತುಂಬುವಲ್ಲಿ ಯಶಸ್ವಿಯಾಯಿತು.
ಅಪರಾಹ್ನ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆಯ ಶ್ರೀ ಕೋಳ್ಯೂರು ಶಂಕರನಾರಾಯಣ ದೇವಸ್ಥಾನ ಮತ್ತು ಪಂಚಲಿಂಗೇಶ್ವರ ದೇವಸ್ಥಾನದಿಂದ ಹೊರಟು ಯೋಗಿ ಕೌಸ್ತುಭ ಶ್ರೀ ಮೋಹನದಾಸ ಸ್ವಾಮೀಜಿ ಶ್ರೀ ಧಾಮ ಮಾಣಿಲ ಇವರ ನೇತೃತ್ವದಲ್ಲಿ ಶ್ರೀ ರಾಮ ಭಜನಾ ಮಂದಿರದಿಂದ ಎಲ್ಲಾ ಹೊರೆಕಾಣಿಕೆ ಒಟ್ಟಾಗಿ ಭವ್ಯ ಮೆರವಣಿಗೆಯ ಮೂಲಕ ಶ್ರಿ ಅಯ್ಯಪ್ಪ ಮಂದಿರಕ್ಕೆ ಆಗಮಿಸಿತು. ಭಕ್ತಾದಿಗಳು ಅತ್ಯಧಿಕ ಸಂಖ್ಯೆಯಲ್ಲಿ ಭಾಗವಹಿಸಿದರು. ಆ ಬಳಿಕ ನಡೆದ ವೈದಿಕ ಕಾರ್ಯಕ್ರಮದ ಆರಂಭದಲ್ಲಿ ಋತ್ವಿಜರ ಆಗಮನ, ಪೂರ್ಣಕುಂಭ ಸ್ವಾಗತ, ಪ್ರಾರ್ಥನೆ,ಆಲಯ ಪರಿಗ್ರಹ, ಪ್ರಸಾದ ಪರಿಗ್ರಹ, ಪ್ರಸಾದ ಶುದ್ದಿ , ಪುಣ್ಯಾಹ ವಾಚನ, ರಾಕ್ಷೋಘ್ನ ಹೋಮ, ವಾಸ್ತು ಹೋಮ ಹಾಗೂ ವಾಸ್ತು ಬಲಿ ನಡೆಸಲಾಯಿತು. ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಡಾ. ನಿಶಾ.ಕೆ.ವಿ. ಮತ್ತು ಬಳಗದವರಿಂದ ಶಾಸ್ತ್ರೀಯ ನೃತ್ಯೋತ್ಸವವು ಶವಪ್ರಸಾದ್ ಕುರುಡಪದವು ಇವರ ಪ್ರಾಯೋಜಕತ್ವದಲ್ಲಿ ಜನಮನ ಸೂರೆಗೊಂಡಿತು. ಆ ಬಳಿಕ ನಯನ ಗೌರಿ ಸೇರಾಜೆ ಇವರಿಂದ ಶ್ರೀ ಅಯ್ಯಪ್ಪ ಚರಿತ್ರೆ ಹರಿಕಥಾ ಸತ್ಸಂಗ ಮತ್ತು ಯಕ್ಷ ಸ್ನೇಹಿ ಬಳಗ ಅಮ್ಮೇರಿ ಕೊಟ್ಯ ಇವರಿಂದ ಇವರಿಂದ ಕಾಳಿಕಾಂಬ ಕಾರುಣ್ಯ ಯಕ್ಷಗಾನ ಬಯಲಾಟ ನಡೆಯಿತು.
