HEALTH TIPS

ಎಡನೀರು ವಿಷ್ಣುಮಂಗಲ ದೇವಾಲಯದ ವಾರ್ಷಿಕೋತ್ಸವ ಆರಂಭ

ಬದಿಯಡ್ಕ: ಶ್ರೀಮದ್ ಎಡನೀರು ಮಠದ ಎಡನೀರು ಶ್ರೀವಿಷ್ಣುಮಂಗಲ ದೇವಾಲಯದ ವಾರ್ಷಿಕೋತ್ಸವ ಬುಧವಾರದಿಂದ ಆರಂಬಗೊಂಡಿತು. ಉತ್ಸವವು ಫೆ.17ರ ವರೆಗೆ ವಿವಿಧ ಕಾರ್ಯಕ್ರಮಗಳೊಂದಿಗೆ ಶ್ರದ್ದಾ ಭಕ್ತಿಯಿಂದ ನಡೆಯಲಿದೆ. ಕಾರ್ಯಕ್ರಮದ ಅಂಗವಾಗಿ ಬುಧವಾರ ಬೆಳಿಗ್ಗೆ 10 ಕ್ಕೆ ಧ್ವಜಾರೋಹಣ ನಡೆಯಿತು. ಬಳಿಕ ಶ್ರೀಭೂತಬಲಿ, ಹಸಿರುವಾಣಿ ಮೆರವಣಿಗೆ, ಉಗ್ರಾಣ ಮುಹೂರ್ತ ನಡೆಯಿತು. ಸಂಜೆ 6 ರಿಂದ ದೀಪೋತ್ಸವ ನಡೆಯಿತು. ಇಂದಿನ ಕಾರ್ಯಕ್ರಮ: ಫೆ.14 ರಂದು ಬೆಳಿಗ್ಗೆ 9 ರಿಂದ ಶ್ರೀಭೂತಬಲಿ, ಸಂಜೆ 6ರಿಂದ ದೀಪೋತ್ಸವ ನಡೆಯಲಿದೆ. ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ರಾತ್ರಿ 8 ರಿಂದ ವಿದ್ವಾನ್ ಟಿ.ಪಿ.ಶ್ರೀನಿವಾಸ್ ಕಾಂಞÂಂಗಾಡ್ ಹಾಗೂ ಬಳಗದವರಿಂದ ಶಾಸ್ತ್ರೀಯ ಸಂಗೀತ ಕಚೇರಿ ಏರ್ಪಡಿಸಲಾಗಿದೆ. ಫೆ.15 ರಂದು ಸಂಜೆ 6.30ರಿಂದ ಮುಂಬೈಯ ಶ್ರೀರಾಜರಾಜೇಶ್ವರಿ ಕಲಾ ಮಂಡಳಿಯವರಿಂದ ಕಲೈಮಾಣಿ ಗುರು ಕೆ.ಕಲ್ಯಾಣ ಸುಂದರಂ ಮುಂಬೈ ಅವರ ನೇತೃತ್ವದಲ್ಲಿ ಭರತನಾಟ್ಯ ಪ್ರದರ್ಶನ ನಡೆಯಲಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries