ಪ್ರಕೃತಿ ಸಂರಕ್ಷಣಾ ಸಂವಾದ ಸಂಚಾರ ಆರಂಭ
0
ಫೆಬ್ರವರಿ 13, 2019
ಮುಳ್ಳೇರಿಯ: ಭವಿಷ್ಯದ ಉಳಿವಿಗಾಗಿ ಪ್ರಕೃತಿಯ ಸಂಪತ್ತುಗಳು ಮನುಷ್ಯನ ಅತಿ ವ್ಯಾಮೋಹದ ಫಲವಾಗಿ ಇಂದು ನಾಶದ ಅಂಚಿನಲ್ಲಿದೆ. ಪ್ರಕೃಯು ಹಲವಾರು ತಿರುಗೇಟು ನೀಡಿದರೂ ಪಾಠ ಕಲಿಯದ ಮನುಷ್ಯನು, ಅತ್ಯಗತ್ಯಕ್ಕೆ ಮಾತ್ರ ಬಳಸಿಕೊಳ್ಳಬೇಕಾದ ಪ್ರಕೃತಿ ಸಂಪತ್ತು, ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ದಿನನಿತ್ಯವೆಂಬಂತೆ ಶೋಷಣೆಗೆಯ್ಯಲ್ಪಡುತ್ತಿದೆ.
ಬೇಲಿಯೇ ಎದ್ದು ಹೊಲ ಮೇಯ್ದಂತೆ ಎನ್ನುವಂತೆ ಸಂರಕ್ಷಿಸಬೇಕಾದ ಆಡಳಿತಾಧಿಕಾರಿಗಳೇ ಅಭಿವೃದ್ಧಿ,ಕಾರ್ಮಿಕ ಬೆಂಬಲಿಗರೆಂದುಕೊಳ್ಳುತ್ತ, ದೊರೆ ಗಳ ಹೆಗಲಿಗೆ ಹೆಗಲು ಕೊಟ್ಟು ನಡೆಯುತ್ತಿದ್ದಾರೆ.
ಇಂತಹ ದುಷ್ಕೃತ್ಯಗಳ ಬಗ್ಗೆ ಸಾಮಾನ್ಯ ಜನತೆಗೆ ತಲುಪಿಸುವ ನಿಟ್ಟಿನಲ್ಲಿ ಕಾಸರಗೋಡು ಜಿಲ್ಲಾ ಪರಿಸರ ಸಮಿತಿಯ ನೇತೃತ್ವದಲ್ಲಿ ಸಮಾಜಸೇವಕರು, ಪರಿಸರ ಸ್ನೇಹಿಗಳೂ, ಕೃಷಿಕರನ್ನೂ ಒಟ್ಟುಗೂಡಿಸಿಕೊಂಡು ಜಿಲ್ಲೆಯಾದ್ಯಂತ ಪ್ರಕೃತಿ ಸಂರಕ್ಷಣಾ ಸಂವಾದ ಸಂಚಾರ ಹಮ್ಮಿಕೊಳ್ಳಲಾಗಿದೆ.
ಬುಧವಾರ ದಿಂದ ಫೆ.14 ರ ವರೆಗೆ ಮಂಜೇಶ್ವರ, ಕಾಸರಗೋಡು ತಾಲೂಕಿನ ಮೀಯಪದವಿನಿಂದ ಚೆರ್ಕಳ ವರೆಗೆ ಮಲೆನಾಡು ದಾರಿಯಲ್ಲಾಗಿ ಪರ್ಯಟನೆ ಆರಂಭಗೊಂಡಿತು.
ಮೀಂಜ ಗ್ರಾಮ ಪಂಚಾಯತಿನ ಮೀಯಪದವಿನಲ್ಲಿ ಬುಧವಾರ ಬೆಳಿಗ್ಗೆ 9.30ಕ್ಕೆ ಡಾ. ಚಂದ್ರಶೇಖರ ಚೌಟ ಸಂವಾದ ಸಂಚಾರ ಉದ್ಘಾಟಿಸಿದರು. ಬಳಿಕ ವರ್ಕಾಡಿ, ಆನೆಕಲ್ಲು, ಚಿಪ್ಪಾರು, ಪೈವಳಿಕೆ, ಚೇವಾರು, ಸೀತಾಂಗೋಳಿ, ಪೆರ್ಲ, ಕಿನ್ನಿಂಗಾರ್, ಮುಳ್ಳೇರಿಯ, ಕಮರ್ಂತೋಡಿ, ಬೋವಿಕ್ಕಾನ, ಪ್ರದೇಶಗಳಲ್ಲಿ ಎರಡು ದಿನಗಳಲ್ಲಾಗಿ ಸಂವಾದ ಸಂಚಾರ ನಡೆಸಿ 14 ರಂದು ಸಂಜೆ 5 ಗಂಟೆಗೆ ಚೆರ್ಕಳದಲ್ಲಿ ಸಮಾರೋಪ ನಡೆಯಲಿದೆ.

