ಬುಲ್ ಬುಲ್ ಘಟಕ ಉದ್ಘಾಟನೆ ಹಾಗೂ ಶಾಲಾ ವಾರ್ಷಿಕೋತ್ಸವ
0
ಫೆಬ್ರವರಿ 13, 2019
ಮಂಜೇಶ್ವರ: ಕಣ್ವತೀರ್ಥದಲ್ಲಿರುವ ಉದ್ಯಾವರ ಭಗವತಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ಬುಲ್ ಬುಲ್ ಘಟಕ ಉದ್ಘಾಟನೆ ಹಾಗೂ ಶಾಲಾ ವಾರ್ಷಿಕೋತ್ಸವವು ವಿವಿಧ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ನೆರವೇರಿತು. ಬೆಳಿಗ್ಗೆ ಉದ್ಯಾವರ ಗೇಟ್ ಶಾಲೆಯ ನಿವೃತ್ತ ಶಿಕ್ಷಕಿ ಲಕ್ಷ್ಮಿ ಐಲ್ ಅವರು ಧ್ವಜಾರೋಹಣಗೈದರು. ಮಂಜೇಶ್ವರ ಅಸೋಸಿಯೇಶನ್‍ನ ಶ್ರೀಕುಮಾರಿ, ಗೈಡ್ ವಿಭಾಗದ ಜಿಲ್ಲಾ ಕಮಿಷನರ್ ಆಶಾಲತ, ಸ್ಕೌಟ್ ಮತ್ತು ಗೈಡ್ ಜಿಲ್ಲಾ ಕಾರ್ಯದರ್ಶಿ ಕಿರಣ್‍ರ ಉಪಸ್ಥಿತಿಯಲ್ಲಿ ಬುಲ್ ಬುಲ್ ಘಟಕ ಉದ್ಘಾಟನೆ ನಡೆಯಿತು. ಬಳಿಕ ನಡೆದ ಸಭಾ ಕಾರ್ಯಕ್ರಮವನ್ನು ಸತ್ಯವತಿ ಜೆ ಉದ್ಯಾವರ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಮಾಜಿ ಪ್ರಬಂಧಕ ಕೃಷ್ಣಪ್ಪ ಬೆಂಗರೆ ವಹಿಸಿ ಮಾತಾನಾಡಿದರು. ಗ್ರಾ.ಪಂ. ಸದಸ್ಯೆ ಶಶಿಕಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಸದಾಶಿವ ಕಣ್ವತೀರ್ಥ, ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ರಾಜೇಶ್ ಬೆಂಗರೆ, ಬಿ ಆರ್ ಸಿ ಸಂಯೋಜಕಿ ದಿವ್ಯಾ, ಮಾಜಿ ಪ್ರಬಂಧಕ ವಿಶ್ವನಾಥ ಕಾರ್ಯಕ್ರಮಕ್ಕೆ ಶುಭಹಾರೈಸಿದರು. ಮುಖ್ಯೋಪಾಧ್ಯಾಯಿನಿ ಗೀತಾ ವರದಿ ವಾಚಿಸಿದರು. ರೇಷ್ಮಾ ಸುನಿಲ್ ಬುಲ್ ಬುಲ್ ಘಟಕದ ಕಾರ್ಯವನ್ನು ಆಯೋಜಿಸಿದರು.ಈ ಸಂದರ್ಭದಲ್ಲಿ ಬುಲ್ ಬುಲ್ ಘಟಕದ ವಿದ್ಯಾರ್ಥಿನಿಗಳಿಗೆ ಸಮವಸ್ತ್ರ ಕೊಡುಗೆಯಾಗಿ ನೀಡಿದ ಕೃಷ್ಣಪ್ಪ ಶಾಲಿನಿ ದಂಪತಿಗಳನ್ನು ಸನ್ಮಾನಿಸಲಾಯಿತು. ಅಧ್ಯಾಪಿಕೆ ರಮ್ಯ ಸ್ವಾಗತಿಸಿ, ಶಿಕ್ಷಕಿ ಭವ್ಯಶ್ರೀ ವಂದಿಸಿದರು. ನವೀನ್ ಉದ್ಯಾವರ ಕಾರ್ಯಕ್ರಮವನ್ನು ನಿರೂಪಿಸಿದರು.ಸಭಾ ಕಾರ್ಯಕ್ರಮದ ಬಳಿಕ ಅಂಗನವಾಡಿ ಹಾಗೂ ಶಾಲಾ ವಿದ್ಯಾರ್ಥಿಗಳಿದ ವಿವಿಧ ಮನೋರಂಜನಾ ಕಾರ್ಯಕ್ರಮ ನಡೆಯಿತು.

