ರಸ್ತೆ ಡಾಮರೀಕರಣ
0
ಫೆಬ್ರವರಿ 12, 2019
ಬದಿಯಡ್ಕ: 2018-19ನೇವರ್ಷದ ಯೋಜನೆಯಲ್ಲಿ ಬದಿಯಡ್ಕ ಗ್ರಾಮಪಂಚಾಯತಿ ವ್ಯಾಪ್ತಿಯ ಬಡಗಮೂಲೆ-ತೆಂಕಮೂಲೆ ರಸ್ತೆಯನ್ನು ಡಾಮರೀಕರಣಗೊಳಿಸಲಾಗಿದ್ದು ಗ್ರಾ.ಪಂ. ಸದಸ್ಯ ಶಂಕರ ಡಿ. ಅವರನ್ನು ಊರವರು ಅಭಿನಂದಿಸಿದ್ದಾರೆ.
ಭಾನುವಾರ ಬಡಗಮೂಲೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಊರವರ ಉಪಸ್ಥಿತಿಯಲ್ಲಿ ಗ್ರಾ.ಪಂ. ಸದಸ್ಯ ಶಂಕರ ಡಿ. ಅವರು ರಸ್ತೆಯನ್ನು ಲೋಕಾರ್ಪಣೆಗೊಳಿಸಿದರು. ಈ ಸಂದರ್ಭದಲ್ಲಿ ಈಶ್ವರ ಭಟ್ ಬಡಗಮೂಲೆ ಅವರು ಶಂಕರ ಡಿ ಅವರನ್ನು ಶಾಲು ಹೊದೆಸಿ ಸನ್ಮಾನಿಸಿ ಮಾತನಾಡಿ, ಸರಕಾರದಿಂದ ಲಭಿಸುವ ಅನುಧಾನವನ್ನು ಸಮರ್ಪಕವಾಗಿ ಬಳಸಿಕೊಂಡು ವಾರ್ಡಿನ ಅಭಿವೃದ್ಧಿಯಲ್ಲಿ ಸಹಕರಿಸುತ್ತಿರುವುದು ಸಂತಸದ ವಿಚಾರವಾಗಿದ್ದು ಮಾದರಿ ಜನಪ್ರತಿನಿಧಿಯಾಗಿದ್ದಾರೆ. ಮುಂದೆಯೂ ಅವರ ಸೇವೆಯನ್ನು ನಿರೀಕ್ಷಿಸುತ್ತಿದ್ದೇವೆ ಎಂದರು. ಕೃಷ್ಣ ಮಣಿಯಾಣಿ ಮೊಳೆಯಾರು, ಪ್ರವೀಣ್ ಕುಮಾರ್, ಸುಧಾಮ ಎಸ್., ಕೆ.ಜೆ.ರಾಮ, ವಿಜಯಕುಮಾರ್, ಜೋಸೆಫ್, ಅಜೇಯ್, ಗೋಪಿ ಆಚಾರ್ಯ ಹಾಗೂ ಕುಟುಂಬಶ್ರೀ ಕಾರ್ಯಕರ್ತೆಯರು, ಊರವರು ಪಾಲ್ಗೊಂಡಿದ್ದರು.

