HEALTH TIPS

ಭಗವಂತನ ಸಾಕಾರ ರೂಪವನ್ನು ಕಾಣಲು ಭಜನೆಯು ಅತ್ಯಂತ ಸುಲಭದ ಮಾರ್ಗ

        ಮಧೂರು: ಮೋಕ್ಷ ಸಾಧನೆಗೆ ಮತ್ತು ಭಗವಂತನ ಸಾಕಾರ ರೂಪವನ್ನು ಕಾಣಲು ಅತ್ಯಂತ ಸುಲಭದ ಮಾರ್ಗವು ಭಜನೆಯಾಗಿದೆ ಎಂದು  ಕೂಟಮಹಾಜಗತ್ತು ಸಾಲಿಗ್ರಾಮ ಇದರ ಕಾಸರಗೋಡು ಅಂಗಸಂಸ್ಥೆಯ ಅಧ್ಯಕ್ಷ ಎಸ್.ಎನ್.ಮಯ್ಯ ಬದಿಯಡ್ಕ ಅಭಿಪ್ರಾಯಪಟ್ಟರು.
   ಅವರು ಇಲ್ಲಿಗೆ ಸಮೀಪದ ಸುಧಾಕರ ಮಯ್ಯ ಅವರ ಮನೆಯಲ್ಲಿ ಜರಗಿದ ಅಂಗಸಂಸ್ಥೆಯ 152 ನೇ  ಸಂಪರ್ಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
    ಕಾರ್ಯಕ್ರಮದಲ್ಲಿ ಸಮಾಜದ ಹಿರಿಯರಾದ ಪರಮೇಶ್ವರ ಅಡಿಗ ಮುಟ್ಟತ್ತೋಡಿ ಅವರು ಅತಿಥಿಗಳಾಗಿ ಭಾಗವಹಿಸಿದರು. ಈ ತಿಂಗಳ ಪ್ರಾರಂಭದಲ್ಲಿ ಸಾಲಿಗ್ರಾಮದ ಶ್ರೀ ಗುರುನರಸಿಂಹ ದೇವಾಲಯಕ್ಕೆ ನಡೆಸಿದ ವಾರ್ಷಿಕ ಗುರುಸ್ಥಾನ ಭೇಟಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂ ಪ್ರಧಾನ ಕಾರ್ಯದರ್ಶಿ ನರಸಿಂಹ ಮಯ್ಯ ಎಂ. ಕೃತಜ್ಞತೆ ಸಲ್ಲಿಸಿದರು.
    ಈ ಸಂದರ್ಭದಲ್ಲಿ ನಾರಾಯಣ ಹೇರಳ ಉಡುವ, ರಾಜಾ ಎಂ.ಜಿ.ಏರಿಕ್ಕಳ, ಹರಿಕೃಷ್ಣ ಕೆ.ಆರ್.ಕೊಲ್ಯ, ರಾಜೇಶ್ ಹೊಳ್ಳ ಎಲ್ಲಂಗಳ, ಶ್ರೀಕಾಂತ್ ಎಂ.ಮಧೂರು, ಹರಿಕೃಷ್ಣ ಎ.ಎನ್.ಎಲ್ಲಂಗಳ ಮುಂತಾದವರು ಶುಭವನ್ನು ಹಾರೈಸಿ ಮಾತನಾಡಿದರು.
     ಮುಂದಿನ ಸಂಪರ್ಕ ಸಭೆಯನ್ನು ಮಾ.3 ರಂದು ಅಪರಾಹ್ನ ಪರಮೇಶ್ವರ ಅಡಿಗ ಮುಟ್ಟತ್ತೋಡಿ ಅವರ ಮನೆಯಲ್ಲಿ ನಡೆಸಲು ತೀರ್ಮಾನಿಸಲಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಸಮಾಜ ಬಾಂಧವರು ಭಾಗವಹಿಸುವಂತೆ ವಿನಂತಿಸಲಾಯಿತು. ಸಂಪರ್ಕ ಸಭೆಗಿಂತ ಮೊದಲು ವಿಷ್ಣು ಸಹಸ್ರನಾಮ ಪಠನ ಹಾಗು ಭಜನಾ ಸಂಕೀರ್ತನೆಗಳು ಜರಗಿತು. ಬಿ.ಕೃಷ್ಣ ಕಾರಂತ ಸ್ವಾಗತಿಸಿ, ಎಸ್.ಎನ್.ಮಯ್ಯ ಮಧೂರು ವಂದಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries