ಮಂಜೇಶ್ವರ: ಚುಟುಕುಗಳು ರೂಪದಲ್ಲಿ ಕಿರಿದಾದರೂ ಹಿರಿದಾದ ಅರ್ಥ ವ್ಯಾಪ್ತಿಯನ್ನು ಹೊಂದಿದ್ದು ಕವಿಯ ಆಶಯವನ್ನು ಓದುಗರಿಗೆ ಅನಾಯಾಸವಾಗಿ ಮನಮುಟ್ಟಿಸುವುದು. ಚುಟುಕು ಬರೆಯುವುದು ಸುಲಭದ ಕೆಲಸ. ಆದರೆ ಬರೆದ ಚುಟುಕುಗಳೆಲ್ಲವೂ ಬದುಕಿ ಉಳಿಯಬೇಕಾದರೆ ಅದು ಸತ್ವಭರಿತವಾಗಿರಬೇಕು. ತತ್ವಗಳನ್ನು ಹೊಂದಿರಬೇಕು. ಕೇವಲ ವಾಚ್ಯರೂಪವನ್ನು ಹೊಂದಿರದೆ ಪದಗಳ ಲಾಲಿತ್ಯದಿಂದ ಕಾವ್ಯಾತ್ಮಕವಾಗಿ ಧ್ವನಿ ಪೂರ್ಣವಾಗಿದ್ದಾಗಲೇ ಓದುಗರ ಮನಮುಟ್ಟಿ ಬುದ್ದಿಯ ಕದವನ್ನು ತಟ್ಟುವುದು. ಮತ್ತು ಹ.ಸುಒಡ್ಡಂಬೆಟ್ಟು ಅವರ ಚುಟುಕಗಳಲ್ಲಿ ಈ ಎಲ್ಲಾ ಲಕ್ಷಣಗಳು ಕಂಡು ಬರುವುÀದೆಂದು ಡಾ.ಚಂದ್ರಕಲಾ ನಂದಾವರ ಹೇಳಿದರು.
ಅವರು ಅಖಿಲ ಭಾರತ ಸಾಹಿತ್ಯ ಪರಿಷತ್ತು ಮತ್ತು ದಕ್ಷಿಣ ಕನ್ನಡ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಸಮ್ಮೇಳನದಲ್ಲಿ ಗಡಿನಾಡು ಚುಟುಕು ಸಾಹಿತಿ ಹ.ಸು.ಒಡ್ಡಂಬೆಟ್ಟು ಅವರ ಐದನೇ ಕೃತಿ ದನಿಯಾದ ಹನಿಗಳು ಕೃತಿಯನ್ನು ಇರಾ ಶ್ರೀ ಸೋಮನಾಥೇಶ್ವರ ದೇವಸ್ಥಾನದ ವಠಾರದಲ್ಲಿ ಬಿಡುಗಡೆಗೊಗಿಳಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಡಾ.ಧರಣಿ ದೇವಿ ಮಾಲಹಿತ್ತಿ , ಧರ್ಮದರ್ಶಿ ಹರಿಕೃಷ್ಣ ಪುನರೂರು, ಚುಟುಕು ಸಾಹಿತ್ಯ ಪರಿಷತ್ತಿನ ಸ್ಥಾಪಕಾಧ್ಯಕ್ಷ ಡಾ.ಎಮ್.ಜಿ.ಆರ್ ಅರಸ್, ಚುಟುಕು ವಾಣಿ ಪತ್ರಿಕೆಯ ಡಾ. ರತ್ನಹಾಲಪ್ಪ ಗೌಡ, ಚುಟುಕು ಸಾಹಿತ್ಯ ಪರಿಷತ್ತಿನ ಗೌರವಾಧ್ಯಕ್ಷ ಇರಾ ನೇಮು ಪೂಜಾರಿ, ಸಾಹಿತಿ ನಿವೃತ್ತ ಯೋಧ ತಾರಾನಾಥ ಬೋಳಾರ್, ಚುಟುಕು ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ಡಾ. ಸುರೇಶ್ ನೆಗಳಗುಳಿ ಉಪಸ್ಥಿತರಿದ್ದರು.


