HEALTH TIPS

ಸ್ಕೌಟ್-ಗೈಡ್ ಸ್ಥಾಪಕ ಬೇಡನ್ ಪವೆಲ್ ಜನ್ಮದಿನದಂಗವಾಗಿ ಸ್ಪಂಧನ ಕಾರ್ಯಕ್ರಮ

ಕುಂಬಳೆ: ಮುಜುಂಗಾವು ಶ್ರೀಭಾರತೀ ವಿದ್ಯಾಪೀಠದಲ್ಲಿ ಸ್ಕೌಟ್ಸ್- ಗೈಡಿನ ಸ್ಥಾಪಕ ಬೇಡನ್ ಪವೆಲ್ ರ ಜನ್ಮದಿನದ ನೆನಪಿಗಾಗಿ ಕಾಸರಗೋಡು ಜಿಲ್ಲಾ ಸ್ಕೌಟ್-ಗೈಡ್ ಹಾಗೂ ವಿದ್ಯಾಪೀಠದ ಸಹಯೋಗದಲ್ಲಿ ಸ್ಪಂಧನ ಕಾರ್ಯಕ್ರಮವನ್ನು ಶುಕ್ರವಾರ ಆಚರಿಸಲಾಯಿತು.ಈ ನಿಮಿತ್ತ ಬೇಡನ್ ಪವೆಲ್ ರ ನೆನಪಿನಲ್ಲಿ ಸಮೀಪದ ಅಪ್ಪು ಪಾಟಾಳಿಯವರ ಮಗ ದೃಷ್ಠಿ ಹೀನ ಯುವಕನಿಗೆ ಧನಸಹಾಯ ನೀಡಲಾಯಿತು. ಕಾಸರಗೋಡು ಜಿಲ್ಲಾ ಸ್ಕೌಟ್- ಗೈಡ್ ನಿರ್ದೇಶಕ ಕಿರಣಪ್ರಸಾದ್ ಮಾತನಾಡಿ, ಸ್ಕೌಟ್ಸ್ ಗೈಡ್ ನಮಗೆ ಮಾನವೀಯತೆಯನ್ನು ಕಲಿಸುವ ಕ್ಷೇತ್ರ. ಯಾವುದೇ ಕಷ್ಟ ಪರಿಸ್ಥಿತಿಯಲ್ಲೂ ಅದನ್ನು ಮೆಟ್ಟಿನಿಂದು ಬದುಕಲು ಕಲಿಸುವುದರ ಜೊತೆಗೆ ಸಂಕಷ್ಟದಲ್ಲಿರುವವರನ್ನೂ ಮೇಲೆತ್ತಲು ಹೇಳಿಕೊಡುತ್ತದೆ ಎಂದರು. ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಪುರುಷೋತ್ತಮ ಆಚಾರ್ಯ ಮಾತನಾಡಿ, ಸ್ಕೌಟ್ಸ್ ಗೈಡ್ ವಿದ್ಯಾರ್ಥಿಗಳು ಕಷ್ಟದಲ್ಲಿರುವವರಿಗೆ ತಮ್ಮ ಕೈಲಾದ ಸಹಾಯ ಮಾಡುವುದು, ಯಾವುದೇ ವಿಪರೀತ ಪರಿಸ್ಥಿತಿಯನ್ನು ಎದುರಿಸಲು ಎಳವೆಯಲ್ಲೇ ಕಲಿಯುವುದರಿಂದ ಮುಂದೆ ಅವರು ಸಮಾಜ ಗುರುತಿಸುವ ವ್ಯಕ್ತಿಗಳಾಗಲು ಇದು ಸೋಪಾನ ಎಂದರು. ವೇದಿಕೆಯಲ್ಲಿ ಸ್ಕೌಟ್ ಗೈಡಿನ ಕುಂಬಳೆ ಕಾರ್ಯಕರ್ತ ವಿಜಯಕುಮಾರ್, ಹಾಗೂ ಗೈಡಿನ ಕಾರ್ಯಾಯುಕ್ತೆ ಜ್ಯೋತಿಲಕ್ಷ್ಮಿ ಹಾಗೂ ನಿವೃತ್ತ ಅಧ್ಯಾಪಿಕೆ ಶ್ರೀಕುಮಾರಿ, ಶಾಲಾ ಆಡಳಿತ ಸಮಿತಿ ಕಾರ್ಯದರ್ಶಿ ಶ್ಯಾಮರಾಜ್ ದೊಡ್ಡಮಾಣಿ, ಶಾಲಾ ಆಡಳಿತಾಧಿಕಾರಿ ಶ್ಯಾಂಭಟ್ ದರ್ಭೆಮಾರ್ಗ, ಮುಖ್ಯೋಪಾಧ್ಯಾಯಿನಿ ಚಿತ್ರಾಸರಸ್ವÀತಿ ವೇದಿಕೆಯಲ್ಲಿದ್ದು ಶುಭಹಾರೈಸಿದರು. ಆಡಳಿತಾಧಿಕಾರಿ ಶ್ಯಾಂಭಟ್ ದರ್ಭೆಮಾರ್ಗ ಪ್ರಸ್ತಾಪಿಕವಾಗಿ ಮಾತನಾಡಿದರು. ಗೈಡು ವಿದ್ಯಾರ್ಥಿನಿಯರು ಪ್ರಾರ್ಥನೆ ಹಾಡಿ, ಕು.ಮಧುರಾ ಕಾರ್ಯಕ್ರಮ ನಿರ್ವಹಣೆಮಾಡಿದಳು. ವಿದ್ಯಾರ್ಥಿ ಸಂದೇಶ ವಂದಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries