ಶ್ರೀವಿಶ್ವಕರ್ಮ ಕಾಳಿಕಾಂಬ ಭಜನಾ ಮಂದಿರದ 18ನೇ ವರ್ಷದ ವಾರ್ಷಿಕೋತ್ಸವ
0
ಮಾರ್ಚ್ 26, 2019
ಬದಿಯಡ್ಕ: ಮವ್ವಾರು ಶ್ರೀವಿಶ್ವಕರ್ಮ ಕಾಳಿಕಾಂಬ ಭಜನಾ ಮಂದಿರದ 18ನೇ ವರ್ಷದ ವಾರ್ಷಿಕೋತ್ಸವವು ತಂತ್ರಿವರ್ಯರಾದ ಬ್ರಹ್ಮಶ್ರೀ ಪುರೋಹಿತ ರತ್ನ ಬಿ.ಕೇಶವ ಆಚಾರ್ಯ ಉಳಿಯತ್ತಡ್ಕ ಅವರ ನೇತೃತ್ವದಲ್ಲಿ ಮಂಗಳವಾರ ವಿವಿಧ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರಗಿತು.
ಕಾರ್ಯಕ್ರಮದ ಅಂಗವಾಗಿ ದೀಪ ಪ್ರತಿಷ್ಠೆ,ಭಜನೆ,ಗಣಹವನ,ವಿಶ್ವಕರ್ಮ ಪೂಜೆ ಜರಗಿತು. ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಶ್ರೀ ವಿಷ್ಣುಮೂರ್ತಿ ಯಕ್ಷಗಾನ ಕಲಾ ಸಂಘ ಅಡೂರು ಅವರಿಂದ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ಹರಿದರ್ಶನ ಎಂಬ ಯಕ್ಷಗಾನ ತಾಳಮದ್ದಲೆ ಕೂಟ ಜರಗಿತು.

