ಮಾಡತ್ತಡ್ಕ ಭಜನಾ ಮಂದಿರದ ವಾರ್ಷಿಕೋತ್ಸವ ಮಾ.23 ರಂದು
0
ಮಾರ್ಚ್ 20, 2019
ಬದಿಯಡ್ಕ: ಮಾಡತ್ತಡ್ಕ ಶ್ರೀ ದೈವಗಳ ಸೇವಾಸಮಿತಿ ಹಾಗೂ ಶ್ರೀ ಹರಿಹರ ಭಜನಾ ಮಂದಿರದ ವಾರ್ಷಿಕೋತ್ಸವ, ದೈವಗಳಿಗೆ ತಂಬಿಲ, ಆಶ್ಲೇಷ ಪೂಜೆಯು ಮಾರ್ಚ್ 23ರಂದು ಜರಗಲಿರುವುದು. ಬೆಳಿಗ್ಗೆ 7 ಗಂಟೆಗೆ ಹಿರಿಯರಾದ ಮಿಂಚಿನಡ್ಕ ಗೋವಿಂದ ಭಟ್ ದೀಪಜ್ವಲನೆಗೈಯಲಿರುವರು. ನಂತರ ಗಣಪತಿ ಹೋಮ, 8.30ರಿಂದ ಬ್ರಹ್ಮಶ್ರೀ ವೇದಮೂರ್ತಿ ಪಾಂಡೇಲು ಶಿವಶಂಕರ ಭಟ್ಟರ ನೇತೃತ್ವದಲ್ಲಿ ವಿಶೇಷ ಆಶ್ಲೇಷ ಪೂಜೆ, ಭಜನೆ, ಮಧ್ಯಾಹ್ನ ಮಹಾಮಂಗಳಾರತಿ, ಪ್ರಸಾದ ವಿತರಣೆ, ಭೋಜನ ಪ್ರಸಾದ ಹಾಗೂ ಅಪರಾಹ್ನ 3.30ಕ್ಕೆ ಶ್ರೀ ದೈವಗಳಿಗೆ ತಂಬಿಲ ಸೇವೆ, ಪ್ರಸಾದ ವಿತರಣೆ ನಡೆಯಲಿರುವುದು. ಭಗವದ್ಭಕ್ತರೆಲ್ಲರೂ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕೆಂದು ಸಂಬಂಧಪಟ್ಟವರು ವಿನಂತಿಸಿಕೊಂಡಿದ್ದಾರೆ.

