ಮಾ.28-29 : ದೈವದ ಕೆಂಡ ಸೇವೆ
0
ಮಾರ್ಚ್ 25, 2019
ಕುಂಬಳೆ: ಕಣ್ಣೂರು ಗ್ರಾಮದ ದೇವಸ್ಯ ದೈವದ ಗದ್ದೆಯಲ್ಲಿ ಮಾ.28 ಮತ್ತು 29 ರಂದು ಶ್ರೀ ವಿಷ್ಣುಮೂರ್ತಿ ದೈವದ ಕೆಂಡ ಸೇವೆ(ಒತ್ತೆಕೋಲ) ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಲಿದೆ.
ಮಾ.28 ರಂದು ಸಂಜೆ 5.30 ರಿಂದ ಅನಂತಪುರ ತರವಾಡು ದೊಡ್ಡ ಮನೆಯ ಶ್ರೀ ವಿಷ್ಣುಮೂರ್ತಿ ದೈವದ ಬಾಳು-ಭಂಡಾರ ಶ್ರೀ ಅನಂತಪದ್ಮನಾಭ ಸ್ವಾಮಿ ಸನ್ನಿಧಿಯಿಂದ ಶ್ರೀ ವಿಷ್ಣುಮೂರ್ತಿ ಸೇವಾ ಸಮಿತಿಯ ಅನುವಂಶಿಕ ಅಧ್ಯಕ್ಷ ಶ್ರೀಕೃಷ್ಣಯ್ಯ ಅನಂತಪುರ ಅವರ ನೇತೃತ್ವದಲ್ಲಿ ವಾದ್ಯಘೋಷಗಳೊಂದಿಗೆ ಕಣ್ಣೂರು ದೇವಸ್ಯ ದೈವದ ಗದ್ದೆಗೆ ಹೊರಡುವುದು, ರಾತ್ರಿ 7 ಕ್ಕೆ ಮೇಲೇರಿಗೆ ಅಗ್ನಿಸ್ಪರ್ಶ, 7.30 ಕ್ಕೆ ಶ್ರೀ ವಿಷ್ಣುಮೂರ್ತಿ ದೈವದ ಆರಂಭ, 8.30 ರಿಂದ ಅನ್ನಸಂತರ್ಪಣೆ, 9 ರಿಂದ ತಿರುವಾದಿರ, 11 ಕ್ಕೆ ಶ್ರೀ ವಿಷ್ಣುಮೂರ್ತಿ ದೈವದ ಕುಳಿಚ್ಚಾಟ, 11.30 ರಿಂದ ಫೆÇೀಕ್ ಮೆಗಾ ಶೋ, ಮಾ.29 ರಂದು ಉದಯ ಕಾಲಕ್ಕೆ ಶ್ರೀ ವಿಷ್ಣುಮೂರ್ತಿ ದೈವದ ಕೋಲ, ಮೇಲೇರಿ ಪ್ರವೇಶ, ಪ್ರಸಾದ ವಿತರಣೆ, ಶ್ರೀ ದೈವದ ಭಂಡಾರ ನಿರ್ಗಮನ ನಡೆಯಲಿದೆ.

