ಕರ್ನಾಟಕ ಶಾಸ್ತ್ರೀಯ ಸಂಗೀತ ತರಗತಿ
0
ಮಾರ್ಚ್ 25, 2019
ಮುಳ್ಳೇರಿಯ: ಮುಳಿಯಾರು ಶ್ರೀ ಸುಬ್ರಹ್ಮಣ್ಯಸ್ವಾಮೀ ಕ್ಷೇತ್ರದಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ ತರಗತಿಯನ್ನು ಇತ್ತೀಚೆಗೆ ಪ್ರಾರಂಭಿಸಲಾಯಿತು.
ವಿದ್ಯಾನಗರದ ಶ್ರೀ ಗೋಪಾಲಕೃಷ್ಣ ಸಂಗೀತ ಪಾಠ ಶಾಲೆಯ ಗುರುಗಳಾದ ವಿದುಷಿಃ ಉಷಾ ಈಶ್ವರ ಭಟ್ ಅವರು ಸಂಗೀತ ಶಿಕ್ಷಕಿ ಕಾರ್ಯನಿರ್ವಹಿಸುತ್ತಾರೆ. ವಿದ್ವಾನ್.ಈಶ್ವರ ಭಟ್ ಅವರ ಮಾರ್ಗದರ್ಶನದಲ್ಲಿ ಸಂಗೀತ ತರಗತಿ ಜರಗುತ್ತದೆ.
ಈ ಕುರಿತಾಗಿ ನಡೆದ ಸಭೆಯಲ್ಲಿ ಶ್ರೀ ಕ್ಷೇತ್ರ ಪ್ರಬಂಧಕ ಸೀತಾರಾಮ ಬಳ್ಳುಳ್ಳಾಯ, ವಿದ್ವಾನ್.ಈಶ್ವರ ಭಟ್, ಉಷಾ ಈಶ್ವರ ಭಟ್, ಗೋವಿಂದ ಬಳ್ಳಮೂಲೆ ಉಪಸ್ಥಿತರಿದ್ದು ಮುಂದಿನ ಯೋಜನೆಗಳ ಬಗ್ಗೆ ಸಮಾಲೋಚಿಸಿ ತೀರ್ಮಾನ ಕೈಗೊಂಡರು. ಕ್ಷೇತ್ರ ಅರ್ಚಕ ಅನಂತಪದ್ಮನಾಭ ಮಯ್ಯ ಅವರು ಸಂಗೀತ ತರಗತಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಹೆಚ್ಚಿನ ಮಾಹಿತಿಗೆ 9496237731 ನಂಬರಿನಲ್ಲಿ ಮಾಹಿತಿ ಪಡೆದುಕೊಳ್ಳಬಹುದಾಗಿ ಸಂಘಟಕರು ತಿಳಿಸಿರುತ್ತಾರೆ.

