ಸ್ವಸಹಾಯ ಸಂಘದಿಂದ ಸ್ವಚ್ಛತಾ ಅಭಿಯಾನ
0
ಮಾರ್ಚ್ 25, 2019
ಬದಿಯಡ್ಕ: ಸಿ.ಒ.ಡಿ.ಪಿ. ಮಂಗಳೂರು ಪ್ರವರ್ತಿತ ತೇಜಸ್ವಿನಿ ಮಹಾಸಂಘದ ವತಿಯಿಂದ ಬೇಳ ಪರಿಸರದಲ್ಲಿ ಸ್ವಚ್ಛತಾ ಅಭಿಯಾನ ಕಾರ್ಯಕ್ರಮ ಜರಗಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಬೇಳ ದೇವಾಲಯದ ಧರ್ಮಗುರುಗಳಾದ ವಂದನೀಯ ಸ್ವಾಮಿ ಜೋನ್ ವಾಸ್ ಅವರು ನೆರೆವೇರಿಸಿ ಸ್ವಚ್ಛತೆಯ ಮೂಲಕ ವೈಯಕ್ತಿಕ ಹಾಗೂ ನಮ್ಮ ಸುತ್ತಮುತ್ತಲ ಪರಿಸರವನ್ನು ಶುಚಿಗೊಳಿಸೋಣ ಮತ್ತು ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳೋಣ ಎಂದು ಕರೆನೀಡಿದರು.ಬದಿಯಡ್ಕ ಆರೋಗ್ಯ ಕೇಂದ್ರದ ಆರೋಗ್ಯ ಅಧಿಕಾರಿ ಬಿಜು ಕಾರ್ಯಕ್ರಮಕ್ಕೆ ಶುಭಹಾರೈಸಿದರು.
ಮಹಾ ಸಂಘದ ಕಾರ್ಯದರ್ಶಿ ಮೀನಾಕ್ಷಿ ಸ್ವಾಗತಿಸಿ, ಮಹಾ ಸಂಘದ ಅಧ್ಯಕ್ಷೆ ಇಂದಿರಾ ವಂದಿಸಿದರು. ಸಿ.ಒ.ಡಿ.ಪಿ. ಸಂಸ್ಥೆಯ ಸಂಯೋಜಕ ಪೀಟರ್ ಡಿ'ಸೋಜ ನೇತೃತ್ವ ನೀಡಿದರು. ಜೆಸಿಂತಾ ಕಾರ್ಯಕ್ರಮವನ್ನು ನಿರೂಪಿಸಿದರು.

