ಮತದಾನ ಜಾಗೃತಿ : ಕಾಲೇಜು ವಿದ್ಯಾರ್ಥಿಗಳಿಗೆ ಭಿತ್ತಿಪತ್ರ ರಚನೆ ಸ್ಪರ್ಧೆ
0
ಮಾರ್ಚ್ 22, 2019
ಕಾಸರಗೋಡು: ಮತದಾನದ ಜಾಗೃತಿಯ ಅಂಗವಾಗಿ ಜಿಲ್ಲೆಯ ಕಾಲೇಜು ವಿದ್ಯಾರ್ಥಿಗಳಿಗೆ ಭಿತ್ತಿ ಪತ್ರ ರಚನೆ ಸ್ಪರ್ಧೆ ನಡೆಯಿತು.
ಅಲಾಮಿಪಳ್ಳಿ ಬಸ್ ನಿಲ್ದಾಣ ಆವರಣದಲ್ಲಿ ಗುರುವಾರ ಸ್ಪರ್ಧೆ ಜರಗಿತು. ಲೋಕಸಭೆ ಚುನಾವಣೆಯಲ್ಲಿ ಎಲ್ಲಾ ಮತದಾರರೂ ಮತ ಚಲಾಯಿಸುವ ಮತ್ತು ಒಂದೇ ಒಂದು ಮತವೂ ಅಸಿಂಧುವಾಗಬಾರದು ಎಂಬ ಉದ್ದೇಶಗಳಿಂದ ಚುನಾವಣೆ ಆಯೋಗ ನಡೆಸುತ್ತಿರುವ ಯತ್ನಗಳ ಅಂಗವಾಗಿ ಈ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.
ಸಿಸ್ಟಮೇಟಿಕ್ ವೋಟರ್ಸ್ ಎಜುಕೇಶನ್ ಆ್ಯಂಡ್ ಇಲೆಕ್ಟರಲ್ ಪಾರ್ಟಿಸಿಪೇಷನ್ (ಎಸ್‍ವಿಇಇಪಿ) ಕಾಸರಗೋಡು ಜಿಲ್ಲಾ ವಿಭಾಗ ವತಿಯಿಂದ ಈ ಸ್ಪರ್ಧೆ ಜರಗಿತು. ಉಪಜಿಲ್ಲಾಧಿಕಾರಿ ಅರುಣ್ ಕೆ.ವಿಜಯನ್ ಉದ್ಘಾಟಿಸಿದರು. ಸ್ವೀಪ್ ನೋಡೆಲ್ ಅಧಿಕಾರಿ ಮಹಮ್ಮದ್ ನೌಷಾದ್ ಅಧ್ಯಕ್ಷತೆ ವಹಿಸಿದರು. ವಿ.ಚಂದ್ರನ್, ವಿನಯ ಕುಮಾರ್, ರವಿ ಪಿಲಿಕೋಡ್, ಹೊಸದುರ್ಗ ಗ್ರಾಮಾಧಿಕಾರಿ ಸಜೀವನ್ ಟಿ.ವಿ. ಮೊದಲಾದವರು ಉಪಸ್ಥಿತರಿದ್ದರು.

