ವನಾಂತರ ಪ್ರದೇಶಗಳ ಮತಗಟ್ಟೆಗಳಲ್ಲಿ ಜಿಲ್ಲಾಧಿಕಾರಿ ನೇತೃತ್ವದ ತಂಡ ತಪಾಸಣೆ
0
ಮಾರ್ಚ್ 22, 2019
ಕಾಸರಗೋಡು: ಲೋಕಸಭೆ ಚುನಾವಣೆ ಸಿದ್ಧತೆ ಅಂಗವಾಗಿ ಜಿಲ್ಲೆಯ ಅರಣ್ಯ ಪ್ರದೇಶಗಳ ಬಳಿಯ ಮತಗಟ್ಟೆಗಳಲ್ಲಿ ಸಂರಕ್ಷಣೆ ಸಬಲೀಕರಣ ಅಂಗವಾಗಿ ಜಿಲ್ಲಾಧಿಕಾರಿ ಡಾ.ಡಿ.ಸಜಿತ್‍ಬಾಬು ಅವರ ನೇತೃತ್ವದಲ್ಲಿ ಹಿರಿಯ ಮಟ್ಟದ ಅಧಿಕಾರಿಗಳ ತಂಡ ಗುರುವಾರ ಸಂದರ್ಶನ ನಡೆಸಿದೆ. ಸಂದರ್ಶನ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳ ಜೊತೆ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಜೇಮ್ಸ್ ಜೋಸೆಫ್, ವಿಭಾಗೀಯ ಅರಣ್ಯ ಅಧಿಕಾರಿ ಪಿ.ಕೆ.ಅನೂಪ್ ಕುಮಾರ್ ತಂಡ ನೇತೃತ್ವ ವಹಿಸಿದ್ದರು. ಸಮಸ್ಯಾತ್ಮಕ ಪ್ರದೇಶಗಳಲ್ಲಿ ಕೇಂದ್ರ ಸೇನೆಯ ಭದ್ರತೆ ಏರ್ಪಡಿಸುವ ಹಿನ್ನೆಲೆಯಲ್ಲೂ ಈ ಸಂರಕ್ಷಣೆ ನಡೆದಿದೆ.
ಚಿತ್ತಾರಿಕಲ್ ತೋಮಾಪುರಂ ಸಂತ ಥಾಮಸ್ ಹೈಯರ್ ಸೆಕೆಂಡರಿ ಶಾಲೆಗೆ ಈ ತಂಡ ಮೊದಲಿಗೆ ಭೇಟಿ ನೀಡಿದೆ. ಶಾಲೆ ಮತ್ತು ಆಸುಪಾಸಿನ ಪ್ರದೇಶಗಳಲ್ಲಿ ತಪಾಸಣೆ ನಡೆಸಿದ ನಂತರ ತಯ್ಯೇನಿ ಸರಕಾರಿ ಪ್ರೌಢ ಶಾಲೆ, ಪಾಲಾವಯಲ್ ಸಂತ ಜೋನ್ಸ್ ಹೈಯರ್ ಸೆಕೆಂಡರಿ ಶಾಲೆ ಇತ್ಯಾದಿ ಕಡೆ ಸಂರಕ್ಷಣಾ ಕ್ರಮಗಳಿಗೆ ನಿರ್ದೇಶನ ನೀಡಲಾಯಿತು.
ಸಹಾಯಕ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಬಿ.ಪ್ರಶೋಬ್, ಡಿವೈಎಸ್‍ಪಿಗಳಾದ ಟಿ.ಎನ್.ಸಜೀವ್, ಎಂ.ಅಸೀನಾರ್ ತಂಡದಲ್ಲಿದ್ದರು. ಜೊತೆಗೆ ಇನ್ಸ್‍ಪೆಕ್ಟರ್ ದಯಾರಾಂ ಸಿಂಗ್ ನೇತೃತ್ವದ 74 ಸದಸ್ಯರಿರುವ ಸಿ.ಆರ್.ಪಿ.ಎಫ್. ಬೆಟಾಲಿಯನ್ ಇವರ ಜೊತೆಗಿದ್ದರು.
ವನಪ್ರದೇಶಗಳ ಬಳಿಯಿರುವ ಮತಗಟ್ಟೆಗಳಲ್ಲಿ ಸ್ಥಳೀಯರು ಯಾವುದೇ ಭೀತಿ ಆತಂಕಗಳಿಲ್ಲದೆ ಮತದಾನ ನಡೆಸುವ ಎಲ್ಲ ಸೌಲಭ್ಯಗಳನ್ನೂ ಏರ್ಪಡಿಸಲಾಗಿದೆ. ಇವುಗಳ ತಪಾಸಣೆ ಮತ್ತು ಭದ್ರತೆಯ ಪರಿಶೀಲನೆಯ ನಿಟ್ಟಿನಲ್ಲಿ ಈ ಸಂದರ್ಶನ ನಡೆಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಈ ಸಂದರ್ಭದಲ್ಲಿ ತಿಳಿಸಿದರು.
ಈ ನಿಟ್ಟಿನಲ್ಲಿ ರಾಜಪುರಂ ಮತ್ತು ವೆಳ್ಳರಿಕುಂಡ್ ಪೆÇಲೀಸ್ ಠಾಣೆ ವ್ಯಾಪ್ತಿಯ ಪ್ರದೇಶಗಳಲ್ಲೂ ತಪಾಸಣೆ ನಡೆಯಲಿದೆ ಎಂದವರು ಹೇಳಿದರು.

