ಚುನಾವಣೆ ಭದ್ರತೆ : ತಪಾಸಣೆ ಬಿಗಿ
0
ಮಾರ್ಚ್ 22, 2019
ಕಾಸರಗೋಡು: ಲೋಕಸಭೆ ಚುನಾವಣೆಯ ಪೂರ್ವಭಾವಿ ಭದ್ರತೆ ಅಂಗವಾಗಿ ಸ್ಟಾಟಿಕಲ್ ಸರ್ವೆಲೆನ್ಸ್ ಟೀಂ ಮತ್ತು ಫ್ಲೈಯಿಂಗ್ ಸ್ಕ್ವಾಡ್ ಜಿಲ್ಲೆಯಲ್ಲಿ ತಪಾಸಣೆ ಬಿಗಿಗೊಳಿಸಿದೆ.
ಸಂಶಯಾಸ್ಪದ ರೀತಿ ಪತ್ತೆಯಾಗುವ ಹಣ, ಬೆಲೆಬಾಳುವ ವಸ್ತುಗಳು ಇತ್ಯಾದಿಗಳನ್ನು ವಶಪಡಿಸಲಾಗುವುದು. ಇವು ಕಾನೂನು ರೀತ್ಯಾ ವ್ಯವಹಾರದ್ದು ಇದ್ದಲ್ಲಿ ಈ ಬಗ್ಗೆ ದಾಖಲೆಗಳ ಸಹಿತ ಸ್ಪಷ್ಟೀಕರಣ ನೀಡುವ ನಿಟ್ಟಿನಲ್ಲಿ ಅಪೀಲು ಸಮಿತಿ ರಚಿಸಲಾಗಿದೆ. ಚುನಾವಣೆ ವೆಚ್ಚ ನಿರೀಕ್ಷಣೆ ವಿಭಾಗ ನೋಡೆಲ್ ಅಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಕಚೇರಿಯ ಹಣಕಾಸು ಅಧಿಕಾರಿ ಸತೀಶನ್ ಕೆ. ಅವರು ಸಂಚಾಲಕರಾಗಿ, ಪಿ.ಎ.ಯು. ಯೋಜನೆ ನಿರ್ದೇಶಕ ಕೆ.ದಿಲೀಪ್, ಜಿಲ್ಲಾ ಖಜಾನೆ ಅಧಿಕಾರಿ ಸಿ.ತುಳಸೀಧರನ್ ಪಿಳ್ಳೆ ಅಪೀಲು ಸಮಿತಿಯ ಸದಸ್ಯರಾಗಿದ್ದಾರೆ.

