HEALTH TIPS

ಚುನಾವಣೆ: ಸಿಬ್ಬಂದಿಗೆ ಕ್ರಿಯಾತ್ಮಕ ತರಬೇತಿಗಳು

ಕಾಸರಗೋಡು: ಲೋಕಸಭೆ ಚುನಾವಣೆ ಸಿದ್ಧತೆ ಅಂಗವಾಗಿ ಮತಗಟ್ಟೆಗಳಲ್ಲಿ ಕರ್ತವ್ಯದಲಿರುವ ಸಿಬ್ಬಂದಿಗೆ ಕ್ರಿಯಾತ್ಮಕ ತರಬೇತಿಗಳನ್ನು ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿರುವರು. ಗರಿಷ್ಠ 40 ಮಂದಿಯಿರುವ ಬ್ಯಾಚ್ ಗಳಿಗೆ ಇಂದು (ಮಾ.27) ಮತ್ತು ನಾಳೆ(28) ಮೊದಲ ಹಂತದ ತರಬೇತಿ ನೀಡಲಾಗುತ್ತಿದೆ. ಪೆರಿಯ ಪಾಲಿಟೆಕ್ನಿಕ್ ನಲ್ಲಿ ತರಬೇತಿ ನಡೆಯಲಿದ್ದು, ಜಿಲ್ಲಾ ಚುನಾವಣಾಧಿಕಾರಿಯಾಗಿರುವ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಉದ್ಘಾಟಿಸುವರು. ಈ ಬಾರಿಯ ಚುನಾವಣೆಯಲ್ಲಿ ಎಲ್ಲ ಮತಗಟ್ಟೆಗಳಲ್ಲೂ ವಿವಿಪಾಟ್ ಮೆಷನ್ ಅಳವಡಿಸಿದ ಮತಯಂತ್ರ ಬಲಸಲಾಗುತ್ತಿದ್ದು, ಬಹಳ ಜಾಗರೂಕತೆ ಪಾಲಿಸಬೇಕಾದ ಉಪಕರಣಗಳಿವಾಗಿರುವ ಹಿನ್ನೆಲೆಯಲ್ಲಿ ಪ್ರತಿ ಸಿಬ್ಬಂದಿಗೂ ಸ್ಪಷ್ಟವಾದ ಮಾಹಿತಿಯ ತರೇತಿ ನೀಡಲಾಗುತ್ತಿದೆ. ಮತದಾನ ಆರಮಭಗೊಳ್ಳುವ ಮುನ್ನ ಬೆಳಗ್ಗೆ ನಡೆಸಲಾಗುವ ಮೋಕ್ ಪೋಲಿಂಗ್ ನಲ್ಲಿ ಎಲ್ಲ ಅಭ್ಯರ್ಥಿಗಳಿಗೂ 50 ಮತದಾನ ನಡೆಸಿ ಪರಿಶೀಲಿಸುವ ಮೂಲಕ ಮೋಕ್ ಪೋಲಿಂಗ್ ಸ್ಟೇಷನ್ ನಲ್ಲಿ ಲಭಿಸುವ ಮತಗಳ ಸಂಖ್ಯೆ ಮತ್ತು ಕಂಟ್ರೋಲ್ ಯೂನಿಟ್ ನ ಫಲಿತಾಂಶ ವಿಭಾಗದಲ್ಲಿ ಲಭಿಸುವ ಮತಗಳ ಸಂಖ್ಯೆ, ವಿವಿಪಾಟ್ ನಲ್ಲಿಪ್ರತಿ ಅಭ್ಯರ್ಥಿಗೆ ಲಭಿಸಿರುವ ಮತಗಳ ಸಂಖ್ಯೆ ಪರಿಶೀಲಿಸಲಾಗುವುದು. ತದನಂತರವಷ್ಟೇ ಮತದಾನ ನಡೆಯಲಿದೆ. ವಿವಿಪಾಟ್ ಗಳ ಚಟುವಟಿಕೆ ರೀತಿ, ಮತದಾನದ ಹಿಂದಿನ ದಿನ, ಮತದಾನ ಆರಂಭಕ್ಕೆ ಮುನ್ನ, ಮತದಾನಕಳೆದ ನಂತರ ನಿರ್ವಹಿಸಬೇಕಾದ ಕರ್ತವ್ಯಗಳ ಇತ್ಯಾದಿ ವಿಚಾರಗಳಬಗ್ಗೆ ಮೂರೂವರೆ ತಾಸಿನ ಪ್ರಾತ್ಯಕ್ಷಿಕೆ ಸಹಿತ ತರಬೇತಿಯನ್ನು ಇಲ್ಲಿ ನೀಡಲಾಗುವುದು. ಜಿಲ್ಲಾದಿಕಾರಿಯ ಉಸ್ತುವಾರಿಯಲ್ಲಿ ನೋಡೆಲ್ ಅಧಿಕಾರಿ ಕೆ.ವಿನೋದ್ ಕುಮಾರ್ ಅವರ ನೇತೃತ್ವದಲ್ಲಿ 50 ಮಂದಿ ಪರಿಣತರ ತಂಡ ತರಬೇತಿನೀಡಲಿದೆ. ಮಾ.15,22,25ರಂದು ಇವರಿಗೆ ತರಬೇತಿ ನೀಡಲಾಗಿತ್ತು. ಪ್ರಿಸೈಡಿಂಗ್ ಆಫೀಸರ್, ಫಸ್ಟ್ ಪೋಲಿಂಗ್ ಆಫೀಸರ್ ಆಗಿ ನೇಮಕಗೊಂಡಿರುವ 2618 ಸಿಬ್ಬಂದಿಗೆ ಮೊದಲ ಹಂತದ ತರಬೇತಿ ನೀಡಲಾಗುವುದು. ಇದಕ್ಕಾಗಿ ತ್ರಿಕರಿಪುರ, ಪೆರಿಯಪಾಲಿಟೆಕನಿಕ್ ಗಳಲ್ಲಿ 70 ತರಬೇತಿ ತರಗತಿಗಳು ನಡೆಯಲಿವೆ. ಇಂದು ಹಾಗೂ ನಾಳೆ ತುರ್ತು ಔದ್ಯೋಗಿಕ ಹೊಣೆ ಯಿರುವವರು ತಮ್ಮ ಕರ್ತವ್ಯದ ದಾಖಲೆ ಹಾಜರುಪಡಿಸಿ ಭಾಗವಹಿಸಲು ಮಾ.29ರಂದು ಬೆಳಗ್ಗೆ 9.30ಕ್ಕೆ ಹೆಚ್ಚುವರಿ ಒಂದು ಬ್ಯಾಚ್ ತರಬೇತಿಯೂ ನಡೆಯಲಿದೆ. ಭಾಗವಹಿಸುವ ಕೊಠಡಿ ಮಾಹಿತಿ ಸಹಿತ ನೇಮಕ ಆದೇಶ ನೀಡಲಾಗಿದೆ. ಇದು ಸಿಬ್ಬಂದಿಗೆ ಪೂರಕವಾಗಲಿದೆ. ಬೆಳಗ್ಗೆ 9.30ರಿಂದ ಮಧ್ಯಾಹ್ನ 1.30 ವರೆಗೆ ತರಗತಿಗಳು ನಡೆಯಲಿವೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries