ಇಂದು ಎಂ.ಸಿ.ಎಂ.ಸಿ. ಕಚೇರಿ ಆರಂಭ
0
ಮಾರ್ಚ್ 26, 2019
ಕಾಸರಗೋಡು: ಲೋಕಸಭೆ ಚುನಾವಣೆ ಸಂಬಂಧ ಮೀಡಿಯಾ ಸರ್ಟಿಫಿಕೇಷನ್ ಮೋನಿಟರಿಂಗ್ ಸಮಿತಿಯ(ಎಂ.ಸಿ.ಎಂ.ಸಿ) ಕಚೇರಿ ಮತ್ತು ಮಾಧ್ಯಮಗಳ ನಿರೀಕ್ಷಣೆ ಕೇಂದ್ರ ಜಿಲ್ಲಾಧಿಕಾರಿ ಕಚೇರಿಯ ಮಾಹಿತಿ ಕೇಂದ್ರದಲ್ಲಿ ಇಂದು (ಮಾ.27) ಆರಂಭಗೊಳ್ಳಲಿದೆ. ಮುದ್ರಣ, ದೃಶ್ಯ, ಶ್ರಾವ್ಯ, ಸಾಮಾಜಿಕ ಮಧ್ಯಮಗಳಲ್ಲಿ ಪೇಡ್ ನ್ಯೂಸ್, ಅನುಮತಿ ಪಡೆಯದ ಜಾಹೀರಾತು, ಅಭ್ಯರ್ಥಿಯ ಉದ್ದೇಶ ಪೂರ್ವಕ ತೇಜೋವಧೆ ನಡೆಸುವ ಸುದ್ದಿಗಳು, ಜಾಹೀರಾತುಗಳು, ಯಾವುದೇ ಜನಾಂಗವನ್ನು ಅಪಮಾನಗೊಳಿಸುವ ರೀತಿಯ ಸುದ್ದಿಗಳು ಇತ್ಯಾದಿ ವಿರುದ್ಧ ಜನಪ್ರಾತಿನಿಧ್ಯ ಕಾಯಿದೆ ಪ್ರಕಾರ ಕ್ರಮಕೈಗೊಳ್ಳಲಾಗುವುದು. ಅಭ್ಯರ್ಥಿಗಳು, ಚುನಾವಣೆ ಏಜೆಂಟರು, ರಾಜಕೀಯಪಕ್ಷಗಳ ನೇತಾರರು, ಜನಪ್ರತಿನಿಧಿಗಳು ಮೊದಲಾದವರು ಅಡ್ಮಿನ್ ಆಗಿರುವ ಫೇಸ್ ಬುಕ್, ವಾಟ್ಸ್ ಆಪ್, ಟ್ವಿಟರ್, ಟೆಲಿಗ್ರಾಂ, ಇನ್ ಸಟಗ್ರಾಂ, ಲಿಂಕ್ ಡ್ ಇನ್, ಮೆಸೆಂಜರ್, ಎಫ್.ಎಂ. ರೇಡಿಯೋಗಳು ಇತ್ಯಾದಿಗಳೂ ನಿರೀಕ್ಷಣೆಯಲ್ಲಿರುವುವು.
ಇಂದು ಉದ್ಘಾಟನೆ
ಇಂದು(ಮಾ.27) ಬೆಳಗ್ಗೆ 11.15ಕ್ಕೆ ನಡೆಯುವ ಸಮಾರಂಭದಲ್ಲಿ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಉದ್ಘಾಟಿಸುವರು. ಚುನಾವಣೆ ವಿಭಾಗ ಸಹಾಯಕ ಜಿಲ್ಲಾಧಿಕಾರಿ ವಿ.ಪಿ. ಅಬ್ದುಲ್ರಹಮಾನ್, ಎಂ.ಸಿ.ಎಂ.ಸಿ. ಸದಸ್ಯರಾದ ಕಾಸರಗೋಡು ಆರ್.ಡಿ.ಒ.ಅಬ್ದು ಸಮದ್ ಪಿ.ಎ., ಜಿಲ್ಲಾ ಕಾನೂನು ಅಧಿಕಾರಿ ಕೆ.ಪಿ.ಉಣ್ಣಿಕೃಷ್ಣನ್, ಇನ್ ಫಾರ್ಮೆಟಿಕ್ ಆಫೀಸರ್ (ಎನ್.ಎ.ಸಿ.) ಕೆ.ರಾಜನ್, ಜಿ.ಬಿ.ವತ್ಸನ್ ಮಾಸ್ಟರ್, ಜಿಲ್ಲಾ ಕಾನೂನು ಅಧಿಕಾರಿ ಎಂ.ಸೀತಾರಾಮ, ಎಂ.ಸಿ.ಎಂ.ಸಿ. ಮೆಂಬರ್ ಸೆಕ್ರೆಟಿರಿ ಮಧುಸೂದನನ್ ಎಂ. ಮೊದಲಾದವರು ಉಪಸ್ಥಿತರಿರುವರು.

