ಯುವ ಭಾರತಿಯಿಂದ ಮನೋಹರ್ ಪರಿಕ್ಕರ್ ಅವರಿಗೆ ನುಡಿನಮನ
0
ಮಾರ್ಚ್ 25, 2019
ಉಪ್ಪಳ: ಮನೋಹರ ಪರಿಕ್ಕರ್ ಅವರು ದೇಶ ಕಂಡ ಮಹಾನ್ ರಾಜಕಾರಣಿ, ಆದರ್ಶ ವ್ಯಕ್ತಿಯಾಗಿದ್ದರು. ಸರಳತೆ, ಅಪಾರ ದೇಶಭಕ್ತಿಯನ್ನು ಅಳವಡಿಸಿಕೊಂಡಿದ್ದ ಪ್ರಾಮಾಣಿಕ ರಾಜ ರಾಜಕಾರಣಿ ಎಂದು ಕವಿ, ಸಾಹಿತಿ ಹರೀಶ್ ಸುಲಾಯ ಒಡ್ಡಂಬೆಟ್ಟು ತಿಳಿಸಿದರು
ಉಪ್ಪಳದ ಸಾಮಾಜಿಕ ಸಂಘಟನೆ ಯುವ ಭಾರತಿ ವತಿಯಿಂದ ಉಪ್ಪಳ ಅಯ್ಯಪ್ಪ ಮಂದಿರದಲ್ಲಿ ನಡೆದ ಇತ್ತೀಚೆಗೆ ನಮ್ಮನ್ನಗಲಿದ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ರವರಿಗೆ ನುಡಿನಮನವನ್ನು ಸಲ್ಲಿಸಿ ಅವರು ಮಾತನಾಡುತ್ತಿದ್ದರು.
ಒಬ್ಬ ರಾಜಕಾರಣಿ ಅಂದರೆ ಹೇಗಿರಬೇಕು ಅನ್ನುವುದನ್ನು ತಮ್ಮ ನಡೆ, ನುಡಿಗಳ ಮೂಲಕ ಅಕ್ಷರಶ: ಪಾಲಿಸಿದ ರಾಜಕಾರಣಿಗಳ ಪೈಕಿ ಮನೋಹರ್ ಪರಿಕ್ಕರ್‍ರವರು ಓರ್ವರು. ಆವರ ಆದರ್ಶ ಜೀವನ ಎಲ್ಲರಿಗೂ ಮಾದರಿಯಾಗಲಿ ಎಂದು ತಿಳಿಸಿದರು
ನುಡಿನಮನ ಕಾರ್ಯಕ್ರಮದಲ್ಲಿ ಯುವ ಭಾರತಿ ಅಧ್ಯಕ್ಷ ರತೀಶ್ ಉಪ್ಪಳ, ಬಿಜೆಪಿ ಮಂಗಲ್ಪಾಡಿ ಪಂಚಾಯತಿ ಪ್ರಧಾನ ಕಾರ್ಯದರ್ಶಿ ದಿನೇಶ್ ಚೆರುಗೋಳಿ ಉಪಸ್ಥಿತರಿದ್ದರು.

