ಕುರುಡಪದವು ಶ್ರೀ ಅಯ್ಯಪ್ಪ ಮಂದಿರಕ್ಕೆ ಧರ್ಮಸ್ಥಳದಿಂದ ಆರ್ಧಿಕ ನೆರವು
0
ಮಾರ್ಚ್ 25, 2019
ಉಪ್ಪಳ: ಕುರುಡಪದವು ಶ್ರೀ ಅಯ್ಯಪ್ಪ ಮಂದಿರಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ನೀಡಿದ 1ಲಕ್ಷ ರೂ, ನಿಧಿಯ ಮಂಜೂರು ಪತ್ರವನ್ನು ಜನಜಾಗೃತಿ ವೇದಿಕೆಯ ಜಿಲ್ಲಾಧ್ಯಕ್ಷ ಅಶ್ವಥ್ ಪೂಜಾರಿ ಲಾಲ್‍ಭಾಗ್ ಅವರು ಮಂದಿರ ಸಮಿತಿ ಪದಾಧಿಕಾರಿಗಳಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಭಜನಾ ಮಂದಿರದ ಗುರುಸ್ವಾಮಿ ಕೃಷ್ಣ ಮೂಲ್ಯ, ಆಡಳಿತ ಸಮಿತಿ ಗೌರವಾಧ್ಯಕ್ಷ ಈಶ್ವರ ಭಟ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಯೋಜನಾಧಿಕಾರಿ ಚೇತನ.ಎಂ, ಮೇಲ್ವಿಚಾರಕ ವಿಶ್ವನಾಥ ಗೌಡ, ಸೇವಾ ಪ್ರತಿನಿಧಿ ಹರೀಶ್ ಕುರಿಯ ಹಾಗೂ ಮಾಧವ ಮೂಲ್ಯ, ಮೋಹನ ಮೊದಲಾದವರು ಉಪಸ್ಥಿತರಿದ್ದರು.

