ಕೋಟೆಕ್ಕಾರಿನಲ್ಲಿ ಕ್ಷಯ ರೋಗ ದಿನಾಚರಣೆ ಮತ್ತು ಉಚಿತ ಆಯುರ್ವೇದ ವೈದ್ಯಕೀಯ ಶಿಬಿರ
0
ಮಾರ್ಚ್ 25, 2019
ಕುಂಬಳೆ: ಜ್ಞಾನದೀಪ ಆಟ್ರ್ಸ್ ಅಂಡ್ ಕಲ್ಚರಲ್ ಫಾರಂ ಕೋಟೆಕ್ಕಾರ್ ಹಾಗೂ ಪ್ರಾಥಮಿಕ ಅರೋಗ್ಯ ಕೇಂದ್ರ ಆರಿಕ್ಕಾಡಿ ಕುಂಬಳೆ ಇದರ ಸಹಯೋಗದೊಂದಿಗೆ ಭಾನುವಾರ ಕ್ಷಯ ರೋಗ ದಿನಾಚರಣೆ ಮತ್ತು ಉಚಿತ ಆಯುರ್ವೇದಿಕ್ ವೈದ್ಯಕೀಯ ಶಿಬಿರ ನಡೆಯಿತು.
ಕಾರ್ಯಕ್ರಮವನ್ನು ಹಿರಿಯ ಆರೋಗ್ಯ ಪರಿವೀಕ್ಷಕ ಶ್ರೀನಿವಾಸನ್ ದೀಪ ಪ್ರಜ್ವಲಿಸಿ ಉದ್ಘಾಟಿಸಿದರು. ಕುಂಬಳೆ ಗ್ರಾಮ ಪಂಚಾಯತಿ ಸದಸ್ಯ ಹರೀಶ್ ಗಟ್ಟಿ ಅಧ್ಯಕ್ಷತೆವಹಿಸಿದ್ದರು. ಶಾರದಾ ಅವರು ಕ್ಷಯ ರೋಗದ ಬಗ್ಗೆ ಸಾರ್ವಜನಿಕರು ಕೈಗೊಳ್ಳಬೇಕಾದ ಮುಂಜಾಗ್ರತಾ ಕಾರ್ಯಗಳ ಬಗ್ಗೆ ಜನಜಾಗೃತಿ ಮೂಡಿಸಿದರು. ಬಳಿಕ ನಡೆದ ಕಾರ್ಯಕ್ರಮದಲ್ಲಿ ಎರ್ನಾಕುಳಂ ಅತ್ತಾಣಿಯ ಕೇರಳ ಆಯುರ್ವೇದಿಕ್ ಲಿಮಿಟೆಡ್‍ನ ವತಿಯಿಂದ ನಡೆದ ಉಚಿತ ಆಯುರ್ವೇದಿಕ್ ಅರೋಗ್ಯ ತಪಾಸಣಾ ಶಿಬಿರದಲ್ಲಿ ನೂರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸಿ ಅರೋಗ್ಯ ತಪಾಸಣೆ ನಡೆಸಿದರು. ಡಾ. ಸಂಗೀತಾ ಸಚ್ಚಿದಾನಂದ ಕುಂಬಳೆ ಮತ್ತು ಡಾ. ಶ್ರೀಪ್ರಿಯ.ಯು ಅರೋಗ್ಯ ಶಿಬಿರಕ್ಕೆ ಮುಂದಾಳತ್ವ ನೀಡಿದರು. ಪ್ರಜ್ವಲ್ ಕುತ್ಯಾಳ ಸ್ವಾಗತಿಸಿ ಯತೀಶ್ ಕೋಟೆಕ್ಕಾರ್ ವಂದಿಸಿದರು.

