ಮಹಾ ಮೃತ್ರ್ಯುಂಜಯೇಶ್ವರ ಕ್ಷೇತ್ರಕ್ಕೆ ಒಡಿಯೂರು ಶ್ರೀಗಳ ಭೇಟಿ
0
ಮಾರ್ಚ್ 25, 2019
ಮಂಜೇಶ್ವರ: ಪಾವೂರು ಕೊಪ್ಪಳದ ಶ್ರೀಮಹಾ ಮೃತ್ಯುಂಜಯೇಶ್ವರ ದೇವಸ್ಥಾನದಲ್ಲಿ ಮಾ. 4 ರಿಂದ ಯೋಗಾಚಾರ್ಯ ಪುಂಡರೀಕಾಕ್ಷ ಬೆಳ್ಳೂರು ಅವರ ನೇತೃತ್ವದಲ್ಲಿ ಹಮ್ಮಿಕೊಂಡಿರುವ 48 ದಿನಗಳ ಉದಯಾಸ್ತಮಾನ ಮೌನ ನಾಮಜಪದ .21 ನೇ ದಿನವಾದ ಭಾನುವಾರ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಿತು.
ಬೆಳಿಗ್ಗೆ ಗಣಪತಿ ಹವನ, ಬಳಿಕ ಪುಂಡರೀಕಾಕ್ಷ ಅವರಿಂದ ಮೌನ ನಾಮ ಜಪ ನೂರಕ್ಕಿಂತ ಹೆಚ್ಚು ಬಾರಿ ನಡೆಯಿತು. ಈ ಸಂದರ್ಭ ಉಪಸ್ಥಿತರಿದ್ದ ಭಕ್ತರಿಂದ ಸಾವಿರ ಸಂಖ್ಯೆಯಲ್ಲಿ ನಾಮ ಜಪ ನಡೆಯಿತು.
ಸಂಜೆ ಶ್ರೀ ಅರಸು ಕೃಪಾ ಜೈ ವೀರ ಮಾರುತಿ ವ್ಯಾಯಾಮ ಶಾಲೆ ಭಜನಾ ಮಂಡಳಿ ಮಾಡ ಮಂಜೇಶ್ವರ ಇವರು ಭಜನಾ ಸಂಕೀರ್ತನೆ ನಡೆಸಿದರು. ಸಂಜೆ 6.30 ಕ್ಕೆ ನಡೆದ ಸತ್ಸಂಗ ಕಾರ್ಯಕ್ರಮದಲ್ಲಿ ಒಡಿಯೂರು ಶ್ರೀಗುರುದೇವದತ್ತ ಸಂಸ್ಥಾನದ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು. ಪುಂಡರೀಕಾಕ್ಷ ಯೋಗಾಚಾರ್ಯ ಸತ್ಸಂಗ ನಡೆಸಿದರು. ಈ ಸಂದರ್ಭದಲ್ಲಿ ಗೋಪಾಲ ಶೆಟ್ಟಿ ಅರಿಬೈಲು, ಹಿಂದೂ ಮಹಾಸಭಾದ ಕರ್ನಾಟಕ ರಾಜ್ಯಾಧ್ಯಕ್ಷ ಲೋಹಿತ್ ಸುವರ್ಣ ಕೊಪ್ಪಳ, ಗೋಪಾಲ ಆಚಾರ್ಯ ಮಾಡ, ಒಡಿಯೂರು ಗ್ರಾಮ ವಿಕಾಸ ಯೋಜನೆಯ ವರ್ಕಾಡಿ ಘಟಕದ ಅಧ್ಯಕ್ಷ ಸದಾಶಿವ ಟೈಲರ್ ಸುಂಕದಕಟ್ಟೆ ಉಪಸ್ಥಿತರಿದ್ದು ಮಾತನಾಡಿದರು. ಆನಂದ ತಚ್ಚಿರೆ ಕಾರ್ಯಕ್ರಮ ನಿರ್ವಹಿಸಿದರು.

