ಮುಳ್ಳೇರಿಯದಲ್ಲಿ ಎನ್.ಡಿ.ಎ. ರೋಡ್‍ಶೋ
0
ಮಾರ್ಚ್ 26, 2019
ಮುಳ್ಳೇರಿಯ: ಲೋಕಸಭಾ ಚುನಾವಣೆಯ ಎನ್‍ಡಿಎ ಅಭ್ಯರ್ಥಿ ಬಿಜೆಪಿಯ ರವೀಶ ತಂತ್ರಿ ಕುಂಟಾರು ಅವರ ರೋಡ್‍ಶೋ ಮುಳ್ಳೇರಿಯದಲ್ಲಿ ಸೋಮವಾರ ಜರಗಿತು. ರೋಡ್‍ಶೋನಲ್ಲಿ ನೂರಾರು ಮಂದಿ ಭಾಗವಹಿಸಿದರು.
ಬಿಜೆಪಿ ರಾಷ್ಟ್ರೀಯ ಸಮಿತಿ ಸದಸ್ಯ ಎಂ.ಸಂಜೀವ ಶೆಟ್ಟಿ, ಜಿಲ್ಲಾ ಉಪಾಧ್ಯಕ್ಷೆ ಎಂ.ಜನನಿ, ರಾಜ್ಯ ಕೌನ್ಸಿಲ್ ಸದಸ್ಯ ಶಿವಕೃಷ್ಣ ಭಟ್, ಮಂಡಲ ಅಧ್ಯಕ್ಷ ಸುಧಾಮ ಗೋಸಾಡ, ಪ್ರಧಾನ ಕಾರ್ಯದರ್ಶಿ ಸುಕುಮಾರ ಕುದ್ರೆಪ್ಪಾಡಿ, ಮುಳ್ಳೇರಿಯ ಪಂಚಾಯತಿ ಅಧ್ಯಕ್ಷ ಕೆ.ವಸಂತ, ಬಿಎಂಎಸ್ ನೇತಾರರಾದ ಸದಾಶಿವ, ಲೀಲಾ ಕೃಷ್ಣನ್, ಪಂಚಾಯತ್ ಸದಸ್ಯರಾದ ವಿ.ಸ್ವಪ್ನಾ, ಗೋಪಾಲಕೃಷ್ಣ, ಶ್ರೀವಿದ್ಯಾ, ಸ್ಮಿತಾ, ರೇಣುಕಾ, ಬಾಲಕೃಷ್ಣ, ಬ್ಲಾಕ್ ಪಂಚಾಯತಿ ಸದಸ್ಯ ಶ್ರೀಧರ, ಬಿಜೆಪಿ ಕುಂಬ್ಡಾಜೆ ಪಂಚಾಯತಿ ಅಧ್ಯಕ್ಷ ರಾಜೇಶ್ ಶೆಟ್ಟಿ, ಆರ್‍ಎಸ್‍ಎಸ್ ಮುಖಂಡ ಕೆ.ಮಂಜುನಾಥ, ಬೆಳ್ಳೂರು ಪಂಚಾಯತಿ ಬೂತ್ ಸಮಿತಿ ಕಾರ್ಯದರ್ಶಿ ಜಯನಾಥ್ ಮೊದಲಾದವರಿದ್ದರು.

