ಕನ್ನಡ ಅರ್ಜಿ ವಿತರಣಾ ಅಭಿಯಾನ
0
ಮಾರ್ಚ್ 25, 2019
ಕಾಸರಗೋಡು: ಭಾಷಾ ಅಲ್ಪಸಂಖ್ಯಾತ ಪ್ರದೇಶ ಕಾಸರಗೋಡು, ಮಂಜೇಶ್ವರ ತಾಲೂಕು ವ್ಯಾಪ್ತಿಯ ಎಲ್ಲಾ ಇಲಾಖೆಗಳಲ್ಲಿ ದ್ವಿಭಾಷಾ ನೀತಿಯ ಪ್ರಕಾರ ಮಲಯಾಳದೊಂದಿಗೆ ಕನ್ನಡದ ಅರ್ಜಿಗಳನ್ನು ವಿತರಣೆ ಮತ್ತು ಮಾಹಿತಿ, ಉತ್ತರಗಳನ್ನು ನೀಡಬೇಕೆಂಬ ಬೇಡಿಕೆಯನ್ನು ಮುಂದಿಟ್ಟು ಕಾಸರಗೋಡು ಗ್ರಾಮ ಕಚೇರಿಯಲ್ಲಿ ಕನ್ನಡ ಅರ್ಜಿಗಳನ್ನು ಕೊಡುವುದರ ಮೂಲಕ ಅಭಿಯಾನ ಆರಂಭಿಸಲಾಯಿತು.
ಕನ್ನಡ ಹೋರಾಟ ಸಮಿತಿಯ ಪ್ರಧಾನ ಕಾರ್ಯದರ್ಶಿ ಭಾಸ್ಕರ ಕಾಸರಗೋಡು, ಕನ್ನಡ ಜಾಗೃತಿ ಸಮಿತಿಯ ಸಂಚಾಲಕ ಗುರುಪ್ರಸಾದ್ ಕೋಟೆಕಣಿ, ಸದಸ್ಯರಾದ ಶ್ರೀಕಾಂತ್ ಕಾಸರಗೋಡು, ದಯಾನಂದ ಬೆಳ್ಳೂರಡ್ಕ, ದಿವಾಕರ ಅಶೋಕನಗರ ಮೊದಲಾದವರ ನೇತೃತ್ವದಲ್ಲಿ ಗ್ರಾಮ ಕಚೇರಿ ಅಧಿಕಾರಿಗೆ ನೀಡಲಾಯಿತು.
ಪ್ರಸ್ತುತ ಕಚೇರಿಯಿಂದ ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡ ಅರ್ಜಿ ಪಡೆದು ವ್ಯವಹರಿಸಬೇಕೆಂದು ವಿನಂತಿಸಲಾಯಿತು.

