HEALTH TIPS

ಕಯ್ಯಿಲ್ ಸೌತ್ ಕಡಪ್ಪುರ ಮತಗಟ್ಟೆಗೆ ಬೋಟ್-ಮೂಲಕ ಸಿಬ್ಬಂದಿ ಮತ್ತು ಸಾಮಾಗ್ರಿ ರವಾನೆ

ಕಾಸರಗೋಡು: ಕಯ್ಯಿಲ್ ಸೌತ್ ಕಡಪ್ಪುರ ಮತಗಟ್ಟೆಗೆ ಸಿಬ್ಬಂದಿ ಮತ್ತು ಸಾಮಾಗ್ರಿಗಳನ್ನು ಬೋಟ್ ಮೂಲಕ ತಲುಪಿಸಲಾಗುತ್ತದೆ. ವಲಿಯಪರಂಬ ಗ್ರಾಮ ಪಂಚಾಯತ್‍ನ ಕಯ್ಯಿಲ್ ಸೌತ್ ಕಡಪ್ಪುರ ಮತಗಟ್ಟೆ 159 ಇರುವುದು ಇಲ್ಲಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ. ವಲಿಪರಂಬ ಗ್ರಾಮ ಪಂಚಾಯತ್ ಇರುವುದು ಜಲಾವೃತ ಪ್ರದೇಶದಲ್ಲಿ. ಈ ಮತಗಟ್ಟೆಯಲ್ಲಿ ಇರುವುದೇ ಒಟ್ಟು 335 ಮಂದಿ ಮತದಾರರು. ಇವರಲ್ಲಿ 161 ಮಂದಿ ಪುರುಷರು, 174 ಮಂದಿಮಹಿಳೆಯರು. ವಲಿಯಪರಂಬ ಗ್ರಾಮ ಪಂಚಾಯತ್‍ನ ಪಾಂಡಿಯಾಳಕಡವು ಎಂಬಲ್ಲಿ ಈ ಕಯ್ಯಿಲ್ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಇದೆ. ಕಣ್ಣೂರು ಜಿಲ್ಲೆಯಲ್ಲಿ ಸೇರಿದ ರಾಂದಳಿ ಕಡವಿನಿಂದ ಪಾಂಡಿಯಾಳಕಡವಿಗೆ ಬೋಟಿಂಗ್ ಸರ್ವೀಸ್ ಇದೆ. ಮತಗಟ್ಟೆ ಕರ್ತವ್ಯದ ಸಿಬ್ಬಂದಿ ಈ ಮೂಲಕ ಮತಗಟ್ಟೆ ತಲಪಲಿದ್ದಾರೆ. ಬೋಟ್ ಮೂಲಕ ಬರುವ ಕಾರಣ ಶಾಲೆ ಬಳಿಯಲ್ಲೇ ಇಳಿಯುವ ಸೌಲಭ್ಯವೂ ಇದೆ. ರಸ್ತೆ ಮಾರ್ಗವಾಗಿ ಬರುವುದಿದ್ದರೆ ಶಾಲೆಯಿಂದ 3 ಕಿಮೀ ದೂರ ವರೆಗೆ ಮಾತ್ರ ವಾಹನ ತಲಪಲು ಸಾಧ್ಯ. ಮತಗಟ್ಟೆಗೆ ಸಾಮಾಗ್ರಿಗಳನ್ನು ತಲಪಿಸುವುದೂ ಕಷ್ಟಸಾಧ್ಯ ವಿಚಾರ. ಜೊತೆಗೆ ರಾಮಂದಳಿಯಿಂದ ವಲಿಯಪರಂಬಕ್ಕೆ ವಾಹನ ಮೂಲಕ ಬರುವುದಿದ್ದರೆ 20 ಕಿ.ಮೀ. ಅ„ಕ ಸಂಚಾರ ನಡೆಸಬೇಕಾದ ಸ್ಥಿತಿಯಿದೆ. ಬೋಟಿನಲ್ಲಿ ಸಂಚರಿಸುವುದಿದ್ದರೆ ಕೇವಲ 5 ನಿಮಿಷಗಳಲ್ಲಿ ತಲಪಲು ಸಾ`À್ಯವಿದೆ. ಈ ಕಾರಣದಿಂದ ಬೋಟ್ ಸರ್ವೀಸನ್ನೇ ಸಿಬ್ಬಂದಿ ಆಶ್ರಯಿಸಲಿದ್ದಾರೆ. ಕಣ್ಣೂರು ಜಿಲ್ಲೆಯ ರಾಮಂದಳಿ ಪ್ರದೇಶದಿಂದ ವಲಿಪರಂಬ ಪಂಚಾಯತನ್ನು ಸಂಪರ್ಕಿಸುವ ಕಡವಿಗೆ ಪಾಂಡಿಯಾಳಕಡವು ಎಂದು ಹೆಸರು. ಪಾಂಡಿಯಾಳ ಕಡವು ಮತ್ತು ವಲಿಯಪರಂಬ ಕಡವನ್ನು ಸಂಪರ್ಕಿಸುವ ಫೈಬರ್ ಬೋಟ್‍ನಲ್ಲಿ ಏಕಕಾಲಕ್ಕೆ 25 ಮಂದಿ ಪಯಣಿಸಬಹುದಾದ ಸೌಲ`À್ಯವಿದೆ. ವಲಿಯಪರಂಬ ಪಂಚಾಯತ್‍ನ ಜನ ಪ್ರಧಾನವಾಹಿನಿಗೆ ಸಂಪರ್ಕ ಸಾಧಿಸುವುದೇ ಬೋಟ್ ಸರ್ವೀಸ್ ಮೂಲಕ. ನಾಡದೋಣಿಗಳೂ ಇಲ್ಲಿ ಸರ್ವೀಸ್ ನಡೆಸುತ್ತವೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries