ಮಲ್ಲಿಕಾರ್ಜುನ ದೇವಳದ ಜಾತ್ರೆ-ಶ್ರೀ ಬಲಿ, ಶ್ರೀ ದೇವರ ಸವಾರಿ, ಸುಡುಮದ್ದಿನ ಪ್ರದರ್ಶನ
0
ಮಾರ್ಚ್ 22, 2019
ಕಾಸರಗೋಡು: ಇತಿಹಾಸ ಪ್ರಸಿದ್ಧ ಕಾಸರಗೋಡು ನಗರದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ಜಾತ್ರಾ ಮಹೋತ್ಸವದ ಅಂಗವಾಗಿ ಮಾ.22 ರಂದು ವಿವಿಧ ತಾಂತ್ರಿಕ, ವೈದಿಕ, ಧಾರ್ಮಿಕ ಹಾಗು ಸಾಂಸ್ಕøತಿಕ ಕಾರ್ಯಕ್ರಮ ಜರಗಿತು.
ಕಾರ್ಯಕ್ರಮದಂಗವಾಗಿ ಬೆಳಿಗ್ಗೆ ಉಷ:ಪೂಜೆ, ಶ್ರೀ ಬಲಿ, ನವಕ ಕಲಶ ಪೂಜೆ, ಕಲಶಾಭಿಷೇಕ, ಮಧ್ಯಾಹ್ನ ಮಹಾಪೂಜೆ, ಶ್ರೀ ಬಲಿ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ, ಸಂಜೆ ಅಮೈ ಶ್ರೀ ಕೃಷ್ಣ ಭಜನಾ ಮಂದಿರದಿಂದ ಭಜನೆ, ತಾಯಂಬಕ, ಶ್ರೀ ಪುರಂದರದಾಸ ಸಂಗೀತ ಕಲಾ ಮಂದಿರದವರಿಂದ ಶಾಸ್ತ್ರೀಯ ಸಂಗೀತ, ರಾತ್ರಿ ದೀಪಾರಾಧನೆ, ಶ್ರೀ ಭೂತಬಲಿ, ಕರಂದಕ್ಕಾಡು ಬೆಡಿಕಟ್ಟೆಗೆ ಶ್ರೀ ದೇವರ ಸವಾರಿ, ಸುಡುಮದ್ದಿನ ಪ್ರದರ್ಶನ, ಮಹಾಪೂಜೆ, ನಂತರ ಶ್ರೀ ದೇವರ ಶಯನ ಜರಗಿತು.
ಕರಂದಕ್ಕಾಡು ಬೆಡಿಕಟ್ಟೆ ಪರಿಸರದಲ್ಲಿ ಉತ್ತರ ಕೇರಳದ ಪ್ರಮುಖ ಕಲಾವಿದರನ್ನು ಜೊತೆಗೂಡಿಸಿ ಪಯ್ಯನ್ನೂರು ಮೆಲೋಡಿ ಆರ್ಕೆಸ್ಟ್ರಾ ಅವರಿಂದ ಭಕ್ತಿ ಗಾನಮೇಳ ಜರಗಿತು.

