ಕಾಸರಗೋಡು: ವಿದ್ಯಾರ್ಥಿಗಳ ವ್ಯಕ್ತಿತ್ವವನ್ನು ರೂಪಿಸುವುದೇ ಗುರುವಿನ ಕರ್ತವ್ಯ. ಶಿಕ್ಷಕ ದೇವರಿಗೆ ಸಮಾನ. ಎಳೆಯ ಮನಸ್ಸಿನಲ್ಲಿ ಉತ್ತಮ ಗುಣವನ್ನು ತುಂಬುವ ಶಿಲ್ಪಿಯಾಗಿರುವ ಶಿಕ್ಷಕ ಸಮಾಜದಲ್ಲಿ ತಾನು ಎತ್ತರಕ್ಕೇರುವ ಮೂಲಕ ತಲೆಮಾರನ್ನು ತನ್ನೊಂದಿಗೆ ಉತ್ತಮಗೊಳಿಸುತ್ತಾನೆ ಎಂದು ನಿವೃತ್ತ ಪ್ರಾಂಶುಪಾಲರಾದ ಪ್ರೊ. ಬಿ ಬಾಟಿಯ ಅಭಿಪ್ರಾಯಪಟ್ಟರು.
ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ವತಿಯಿಂದ ಈ ಅಧ್ಯಯನ ವರ್ಷದಲ್ಲಿ ಸೇವೆಯಿಂದ ನಿವೃತ್ತರಾಗುವ ಶಿಕ್ಷಕರಿಗೆ ಕಾಸರಗೋಡು ಬೀರಂತಬೈಲಿನ ಕನ್ನಡ ಅಧ್ಯಾಪಕ ಭವನದಲ್ಲಿ ಏರ್ಪಡಿಸಿದ ಬೀಳ್ಕೊಡುಗೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಸಂಘದ ಕೇಂದ್ರ ಅಧ್ಯಕ್ಷರಾದ ರವೀಂದ್ರನಾಥ್ ಕೆ ಆರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾಸರಗೋಡು ಜಿಲ್ಲಾ ಶಿಕ್ಷಣಾಧಿಕಾರಿ ನಂದಿಕೇಶನ್, ಕುಂಬಳೆ ಉಪಜಿಲ್ಲಾ ಸಹಾಯಕ ಶಿಕ್ಷಣಾಧಿಕಾರಿ ಕೈಲಾಸಮೂರ್ತಿ, ಕಾಸರಗೋಡು ಉಪಜಿಲ್ಲಾ ಸಹಾಯಕ ಶಿಕ್ಷಣಾಧಿಕಾರಿ ಅಗಸ್ಟಿನ್ ಬರ್ನಾಡ್, ಕರ್ನಾಟಕ ಸಮಿತಿ ಅಧ್ಯಕ್ಷ ನ್ಯಾಯವಾದಿ. ಮುರಳೀಧರ ಬಳ್ಳುಕ್ಕುರಾಯ ಉಪಸ್ಥಿತರಿದ್ದು ಶುಭಾಶಂಸನೆಗೈದರು. ಸಂಘದ ವಕ್ತಾರರಾದ ವಿಶಾಲಕ್ಷ ಪುತ್ರಕಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ಸಮಾರಂಭದಲ್ಲಿ ಶಿಕ್ಷಣಸೇವೆಯಲ್ಲಿ ಅಮೂಲ್ಯ ಸೇವೆಗೈದು ಅಗಲಿದ ಹಿರಿಯರಿಗೆ ಮೌನಪ್ರಾರ್ಥನೆ ಮೂಲಕ ನಮನ ಸಲ್ಲಿಸಲಾಯಿತು. ನಿವೃತ್ತರಾಗಲಿರುವ ಕುಂಬಳೆ ಉಪಜಿಲ್ಲಾ ಸಹಾಯಕ ಶಿಕ್ಷಣಾಧಿಕಾರಿ ಕೈಲಾಮೂರ್ತಿ, ಶಿಕ್ಷಕರಾದ ರಾಜಗೋಪಾಲ ಜಿ, ಶಾರದ ಅಡೆಕೋಡ್ಲು, ರಾಜೇಶ್ವರ ಸಿ ಎಚ್, ರಾಮ ಯು, ವಿಮಲ ಕೆಟಿ, ಉಷಾಕುಮಾರಿ ಪಿ ಆರ್, ವಿಷ್ಣು ಎ, ವಂದನ ಎನ್, ಅನಿತ ಕೆಪಿ, ಸುಂದರಿ, ಅಶೋಕ ಕೆ, ಸೀತಮ್ಮ, ಉಪೇಂದ್ರ ಬಿ, ಇಂದಿರ ಎನ್, ರಾಮಚಂದ್ರ ಎಂ, ಸುಜಾತ ಸಿಕೆ, ಉದಯಶಂಕರ ಟಿ, ಲೋಲಾಕ್ಷಿ, ಪಾಂಡುರಂಗ ಎಚ್, ಶ್ಯಾಮಲ ಪಿ, ಗೀತ ಎಚ್, ಚಂದ್ರಹಾಸ ಪಿ, ರೇವತಿ, ಪದ್ಮನಯನ ಎನ್ ಕೆ, ಚಂದ್ರಾವತಿ ಕೆ, ಗೋಪಾಲಕೃಷ್ಣ, ಲೂಯಿಸ್ ಮೊಂತೆರೋ, ರಾಮ, ಗೋಪಾಲಕೃಷ್ಣ ಭಟ್, ಶಾರದ ಎ, ದಿನೇಶ ಬಿ, ಐಡ ಸೋಫಿಯ ಡಿಸೋಜ, ಸುನಂದ, ಕೇಶವ, ಜೈಶಂಕರ, ಸೌಮ್ಯಲತ, ಲಕ್ಷ್ಮಿ, ಸುನೀತ, ಶ್ಯಾಮ ಭಟ್ ಕೆ, ಉಮಾಗೌರಿ, ಶಾಂತ ಎ, ನಿರ್ಮಲ ಕುಮಾರಿ, ಸದಾಶಿವ ಭಟ್, ಉಷಾಕುಮಾರಿ ಸಿ ಎಚ್, ಸೌಭಾಗ್ಯ, ಶ್ಯಾಮ ಭಟ್, ಮೀನಾಕ್ಷಿ ಎಚ್ ಎನ್, ಸರೋಜ ಪಿ, ಗೋಪಾಲಕೃಷ್ಣ ಭಟ್ ಕೆ, ಗಂಗಾಧರ ರೈ, ಶ್ರೀಕೃಷ್ಣ ಭಟ್, ಸಿಸ್ಟರ್ ಹಿಲ್ಡ ಕ್ರಾಸ್ತ, ಮಹಾಬಲೇಶ್ವರ ಭಟ್, ಮಹಾಲಿಂಗ ನಾಯ್ಕ್, ಶ್ಯಾಮಲದೇವಿ ಎಂ, ಸರೋಜ ಎನ್ ಕೆ, ಶ್ರೀಕೃಷ್ಣ ಭಟ್, ಪುರುಷೋತ್ತಮ ಪ್ರಸಾದ್, ಉಷಾದೇವಿ ಕೆ, ಮೇರಿ ಕ್ರಾಸ್ತ, ಶಿವಪ್ಪ ಪೂಜಾರಿ, ಸರಸ್ವತಿ ಜಿ ಅವರನ್ನು ಶಾಲು ಹೊದೆಸಿ ಸ್ಮರಣಕೆ ನೀಡಿ ಸನ್ಮಾನಿಸಲಾಯಿತು.
ಶಿಕ್ಷಕರಾದ ಶರತ್ ಕುಮಾರ್, ವೆಂಕಟಕೃಷ್ಣ ಭಟ್, ಶ್ಯಾಮ ಪ್ರಸಾದ್ ಕಲ್ಲಕಟ್ಟ, ಪ್ರದೀಪ್ ಕೆ ವಿ, ಮುಹಮ್ಮದ್ ರಫೀಕ್, ಪ್ರದೀಪ್ ಕುಮಾರ್ , ದಿನೇಶ ಬಿ, ಜಯಪ್ರಶಾಂತ್ ಪಾಲೆಂಗ್ರಿ, ಶಂಕರನಾರಾಯಣ ಭಟ್ ಬೀಡುಬೈಲು, ಜೀವನ್ ಕುಮಾರ್, ಸುಕೇಶ ಕೆ, ಅಶೋಕ್ ಕೊಡ್ಲಮೊಗರು, ಶಿವರಾಮ ಭಟ್, ಸತೀಶ್ ಶೆಟ್ಟಿ ಒಡ್ಡಂಬೆಟ್ಟು, ನಯನ ಪ್ರಸಾದ್,ದಯಾನಂದ, ಪುಷ್ಪರಾಜ್, ನವೀನ್ ಕುಮಾರ್, ಈಶ್ವರ ಕೆ, ರಾಜೇಶ್ ಉದಯಗಿರಿ, ಶರತ್ ಕುಮಾರ್, ಶ್ರೀಧರ ನಾಯಕ್, ಪುರುಷೋತ್ತಮ ಕುಲಾಲ್, ಅಬ್ದುಲ್ ರಹಿಮಾನ್, ವಾಣಿ ಪಿ ಎಸ್, ಸುನೀತ, ಭಾಗ್ಯಲಕ್ಷ್ಮಿ, ಶ್ವೇತ, ಚಂದ್ರಾವತಿ, ಪ್ರಭಾವತಿ, ಅಂಕಿತ, ಪದ್ಮಾವತಿ, ಶ್ಯಾಮಲ ಸನ್ಮಾನಿತರ ಪರಿಚಯ ಪತ್ರ ಓದಿದರು. ಸಂಘದ ಪ್ರಧಾನ ಕಾರ್ಯದರ್ಶಿ ಕುಮಾರ ಸುಬ್ರಹ್ಮಣ್ಯ ಸ್ವಾಗತಿಸಿ ಸಂಘಟನಾ ಕಾರ್ಯದರ್ಶಿ ಪ್ರದೀಪ್ ಕುಮಾರ್ ಶೆಟ್ಟಿ ಬೇಳ ವಂದಿಸಿದರು. ಕೋಶಾಧಿಕಾರಿ ಪದ್ಮಾವತಿ ಎಂ ನಿರೂಪಿಸಿದರು. ಯಕ್ಷಿತ ಪ್ರಾರ್ಥನೆ ಹಾಡಿದರು.