HEALTH TIPS

ಹುಸಿಯಾ ನಿರೀಕ್ಷೆ- ಕಾಸರಗೋಡು ಲೋಕಸಭಾ ಕ್ಷೇತ್ರ : ಮಾಜಿ ಎಂಪಿ ಪುತ್ರನಿಗೆ ನಾಲ್ಕನೇ ಬಾರಿಯೂ ಎಂಪಿ ಟಿಕೆಟ್ ನಿರಾಕರಣೆ

ಕಾಸರಗೋಡು: ಕಾಸರಗೋಡು ಲೋಕಸಭಾ ಕ್ಷೇತ್ರಕ್ಕೆ ಐಕ್ಯರಂಗದ ಅಭ್ಯರ್ಥಿಯಾಗಿ ಮಾಜಿಲೋಕಸಭಾ ಸದಸ್ಯ ಎ.ಐ.ಸಿ.ಸಿ.ಸದಸ್ಯರಾಗಿದ್ದ ಐ.ರಾಮ ರೈ ಅವರ ಪುತ್ರ ಮಾಜಿ ಜಿಲ್ಲಾ ಕಾಂಗ್ರೆಸ್ಸ್ ಕಾರ್ಯದರ್ಶಿ ಹಾಲಿ ಕೆ.ಪಿ.ಸಿ.ಸಿ.ನಿರ್ವಾಹಕ ಸಮಿತಿ ಸದಸ್ಯ ನ್ಯಾಯವಾದಿ ಬಿ.ಸುಬ್ಬಯ ರೈ ಅವರಿಗೆ ಎಂಬುದಾಗಿ ಖಚಿತವಾಗಿತ್ತು.ಆದರೆ ಇದನ್ನು ಬದಲಾಯಿಸಿ ಪಕ್ಷದ ನಾಯಕ ಎ.ಐ.ಸಿ.ಸಿ.ಸದಸ್ಯ ಕೆ.ಪಿ.ಸಿ.ಸಿ.ವಕ್ತಾರ ಕೊಲ್ಲಂನ ರಾಜಮೋಹನ್ ಉಣ್ಣಿತ್ತಾನ್‍ಆವರಿಗೆ ಹೈ ಕಮಾಂಡ್ ಟಿಕೆಟ್ ನೀಡಿದೆ. ಇದರಿಂದ ಪಕ್ಷದೊಳಗೆ ಭಿನ್ನಮತಕ್ಕೆ ಕಾರಣವಾಗಿದೆ.ಕಾಸರಗೋಡಿನಲ್ಲಿ ಕನ್ನಡ ಸ್ಥಳೀಯ ಅಭ್ಯರ್ಥಿಯೋರ್ವರಿಗೆ ಟಿಕೆಟ್ ನೀಡಬೇಕೆಂಬುದಾಗಿ ಪಕ್ಷದಲ್ಲಿ ಬಲವಾದ ಒತ್ತಡವಿತ್ತು.ಮಾತ್ರವಲ್ಲದೆ ಐಕ್ಯರಂಗದ ಘಟಕ ಪಕ್ಷವಾದ ಮುಸ್ಲಿಂಲೀಗ್ ಕೂಡಾ ಇದನ್ನು ಬೆಂಲಿಸಿತ್ತು.ಆದರೆ ಹಠಾತ್ ಅಭ್ಯರ್ಥಿಯನ್ನು ಬದಲಿಸಿದ ಪಕ್ಷದ ನಿಲುವಿಗೆ ಪಕ್ಷದ ಕೆಲವು ನಾಯಕರು ಮುನಿಸಿ ರಾಜಿನಾಮೆಗೆ ಸಿದ್ಧರಾಗಿರುವುದಾಗಿ ಭಾನುವಾರ ತಿಳಿದುಬಂದಿದೆ. ಸುಬ್ಬಯ್ಯ ರೈ ಅವರು ನಾಲ್ಕನೇ ಬಾರಿ ಟಿಕೆಟ್ ವಂಚಿತರಾಗಿದ್ದು ಈ ಬಾರಿ ಇವರಿಗೆ ಟಿಕೆಟ್ ಸಿಗುವುದು ಖಚಿತವೆಂಬುದಾಗಿ ತೆರೆ ಮರೆಯ ಪ್ರಚಾರ ಆರಂಭವಾಗಿತ್ತು.ಕಾಸರಗೋಡಿನ ಕನ್ನಡಿಗರು ಜಾತಿಮತ ಪಕ್ಷ ಭೇಧವೆನ್ನದೆ ಸುಬ್ಬಯ್ಯ ರೈ ಅವರಿಗೆ ಮತ ನೀಡುವರೆಂಬ ವಿಸ್ವಾಸ ಬಲವಾಗಿತ್ತು.ಅಲ್ಲದೆ ಸ್ವತಃ ಸುಬ್ಬಯ್ಯ ರೈ ಅವರು ವಿಪಕ್ಷದ ಮಿತ್ರರಲ್ಲಿ ಟಿಕೆಟ್ ದೊರೆಯುವ ವಿಶ್ವಾಸದಲ್ಲಿ ಬೆಂಬಲ ಯಾಚಿಸಿದ್ದರು.ಆದರೆ ಕೊನೆಗೂ ಟಿಕೆಟ್ ತಪ್ಪಿ ಪಕ್ಷದಲ್ಲಿ ಭಿನ್ನಮತಕ್ಕೆ ಕಾರಣವಾಗಿದೆ. ಪಕ್ಷದ ಜಿಲ್ಲಾ ಮಟ್ಟದ ಕೆಲವು ನಾಯಕರು ಸುಬ್ಬಯ್ಯ ರೈ ಅವರಿಗೆ ಟಿಕೆಟ್ ನೀಡಲು ಅಡ್ಡಗಾಲು ಹಾಕಿರುವುದಾಗಿ ಕಾಂಗ್ರೆಸ್ಸ್ ಕುಂಬಳೆ ಬ್ಲಾಕ್ ಕಾರ್ಯದರ್ಶಿ ರವಿ ಪೂಜಾರಿ ಕೋಟೆಕ್ಕಾರ್ ಆರೋಪಿಸಿಸಿದ್ದಾರೆ.ಇದು ವಂಚನೆಯಾಗಿದ್ದು ಪಕ್ಷದ ನಿಷ್ಠಾವಂತರಿಗೆ ಇದನ್ನು ಸಹಿಸಲು ಸಾದ್ಯವಿಲ್ಲ.ಪಕ್ಷಕ್ಕಾಗಿ ಸರ್ವಸ್ವವನ್ನೂ ತ್ಯಾಗ ಮಾಡಿದ ಮಾಜಿ ಲೋಕಸಭಾ ಸದಸ್ಯ ಐ.ರಾಮ ರೈ ಅವರ ಪುತ್ರಪಕ್ಷಕ್ಕಾಗಿ ಅಹರ್ನಿಶಿ ದುಡಿಯುತ್ತಿದ್ದು ಇವರು ಸರ್ವರ ಪ್ರೀತಿಗೆ ಪಾತ್ರರಾಗಿ ಚುನಾವಣೆಯಲ್ಲಿ ಗೆಲ್ಲುವ ವಾತವರಣವಿತ್ತು. ಆದುದರಿಂದ ಪಕ್ಷವು ಮರು ಪರಿಶೀಲಿಸಿ ಬಿ.ಸುಬ್ಬಯ್ಯರೈ ಅವರಿಗೆ ಟಿಕೆಟ್ ನೀಡಲು ಮುಂದಾಗಬೇಕೆಂಬುದಾಗಿ ರವಿ ಪೂಜಾರಿ ಪಕ್ಷದ ನಾಯಕರಲ್ಲಿ ಒತ್ತಾಯಿಸಿದ್ದಾರೆ. ಪ್ರಭಾವೀ ಮನೆತನ: ನ್ಯಾಯವಾದಿ ಸುಬ್ಬಯ್ಯ ರೈಯವರು ತುಳುನಾಡಿನಲ್ಲೇ ಖ್ಯಾತಿವೆತ್ತ ಕೆಲವೇ ಮನತನಗಳಲ್ಲಿ ಒಂದಾಗಿರುವ ಇಚ್ಲಂಪಾಡಿ ಮನೆತನಕ್ಕೆ ಸೇರಿದವರು. ಇಚ್ಲಂಪಾಡಿ ಮನೆಯು ಕುಂಬಳೆ ಪರಿಸರದಲ್ಲಿ ಅತ್ಯಂತ ಶ್ರೀಮಂತ ಮನೆಯಾಗಿ, ನಾಲ್ಕು ಸೂತ್ರ(ಆವರಣ)ದ ಮನೆಯಾಗಿ ಶತಮಾನಗಳಿಂದ ಖ್ಯಾತವಾಗಿದ್ದು, ಕುಂಬಳೆಯ ಅರಸರಾದ ಮಾಯಿಪ್ಪಾಡಿಯ ಅರಸರು ಪಟ್ಟವೇರುವ ಮೊದಲು ಇಚ್ಲಂಪಾಡಿ ಮನೆಗೆ ತರಳಿ ಕೆಲವು ವಿಧಿ ವಿಧಾನಗಳನ್ನು ನಿರ್ವಹಿಸುತ್ತಿದ್ದರು ಎಂಬ ವಾಡಿಕೆ ಇರುವುದು ಇತಿಹಾಸದಲ್ಲಿ ದಾಖಲಿಸಲ್ಪಟ್ಟಿದೆ. ಬಿಜೆಪಿ ನಿರಾಳ: ನ್ಯಾಯವಾದಿ ಸುಬ್ಬಯ್ಯ ರೈ ಯವರಿಗೆ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ದೊರಕಿದ್ದರೆ ಅದು ಬಿಜೆಪಿಗೆ ಭಾರೀ ಅಡ್ಡಪರಿಣಾಮಗಳಿಗೆ ಕಾರಣವಾಗುತ್ತಿತ್ತು. ಮಂಜೇಶ್ವರ ತಾಲೂಕು ಸಹಿತ ಕಾಸರಗೋಡು ವ್ಯಾಪ್ತಿಯಲ್ಲಿ ಗಣ್ಯ ಮನೆತನವಾದ ಇಚ್ಲಂಪಾಡಿ ಮನೆಗೆ ಸೇರಿದವರಾಗಿರುವ ಸುಬ್ಬಯ್ಯ ರೈಯವರಿಗೆ ಮನೆತನದ ಗೌರವ ಅಭಿಮಾನಗಳಿಂದ ಬಿಜೆಪಿ ಸಹಿತ ಎಡಪಕ್ಷಗಳ ಮತಗಳು ಚಲಾವಣೆಯಾಗುವ ಸಾಧ್ಯತೆಗಳಿತ್ತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries