ಗೋವಾ ಸಿಎಂ ಮನೋಹರ್ ಪರಿಕ್ಕರ್ ವಿಧಿವಶ
0
ಮಾರ್ಚ್ 17, 2019
ನವದೆಹಲಿ: ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರು ವಿಧಿವಶರಾಗಿದ್ದಾರೆ.
ಅರ್ಬುದದಿಂದ ಹೈರಾಣರಾಗಿದ್ದ ಮನೋಹರ್ ಪರಿಕ್ಕರ್ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಸಂಜೆ ವಿಧಿವಶರಾಗಿದ್ದಾರೆ.
63 ವರ್ಷದ ಪರಿಕ್ಕರ್ ಅವರು ಕಳೆದ ಒಂದು ವರ್ಷದಿಂದ ಚಿಕಿತ್ಸೆ ಪಡೆಯುತ್ತಿದ್ದರು. ಇತ್ತೀಚೆಗಷ್ಟೇ ದೆಹಲಿಯ ಏಮ್ಸ್ ನಿಂದ ಚಿಕಿತ್ಸೆ ಪಡೆದು ವಾಪಸಾಗಿ ಸರ್ಕಾರ ನಡೆಸಿದ್ದರು. ನಿನ್ನೆ ದಿಢೀರ್ ಸುಸ್ತಾಗಿದ್ದರಿಂದ ಅವರಿಗೆ ಮತ್ತೆ ಚಿಕಿತ್ಸೆ ಮುಂದುವರೆಸಲಾಗಿತ್ತು. ಆದರೆ ದುರ್ದೈವ ವಿಧಿವಶರಾಗಿದ್ದಾರೆ.

