ಹಸುರು ನೀತಿಸಂಹಿತೆ : ಲಾಂಛನ ಬಿಡುಗಡೆ
0
ಮಾರ್ಚ್ 26, 2019
ಕಾಸರಗೋಡು: ಲೋಕಸಭೆ ಚುನಾವಣೆಯನ್ನು ಪ್ರಕೃತಿ ಸೌಹಾರ್ದವಾಗಿ ನಡೆಸುವ ನಿಟ್ಟಿನಲ್ಲಿ ಹಸುರು ಸಂಹಿತೆ ಜಾರಿಗೊಳಿಸುವ ಚುನಾವಣೆ ಆಯೋಗದ ಆದೇಶವನ್ನು ಪಾಲಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತೆ ಕ್ರಮ ಆರಂಭಿಸಿದೆ.
ಇದರ ಅಂಗವಾಗಿ ಜಿಲ್ಲಾ ಶುಚಿತ್ವ ಮಿಷನ್ ಆಶ್ರಯದಲ್ಲಿ ನಡೆಯುವ ಹಸುರು ಸಂಹಿತೆ ಚುನಾವಣೆಯ ಲಾಂಛನ ಬಿಡುಗಡೆ ಮಂಗಳವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆಯಿತು. ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಲಾಂಛನ ಬಿಡುಗಡೆಗೊಳಿಸಿದರು. ಸ್ವೀಪ್ ನೋಡೆಲ್ ಅಧಿಕಾರಿ ವಿ.ಮಹಮ್ಮದ್ ನೌಷಾದ್ ಅವರಿಗೆ ಲಾಛನ ಹಸ್ತಾಂತರಿಸಿದರು. ಜಿಲ್ಲಾ ಮಾಹಿತಿ ಅಧಿಕಾರಿ ಮಧುಸೂದನನ್ ಎಂ., ಹರಿತ ಕೇರಳಂ ಮಿಷನ್ ಜಿಲ್ಲಾ ಸಂಚಾಲಕ ಎಂ.ಪಿ.ಸುಬ್ರಹ್ಮಣ್ಯನ್, ಶುಚಿತ್ವ ಮಿಷನ್ ಜಿಲ್ಲಾ ಸಂಚಾಲಕ ಸಿ.ರಾಧಾಕೃಷ್ಣನ್ ಉಪಸ್ಥಿತರಿದ್ದರು.
ಜಿಲ್ಲೆಯಲ್ಲಿ ಸಾರ್ವಜನಿಕ ಚುನಾವಣೆ ವೇಳೆ ಹಸುರು ಸಂಹಿತೆ ಉಲ್ಲಂಘನೆ ಕಂಡುಬಂದಲ್ಲಿ 8547931565 ಎಂಬ ನಂಬ್ರ ಮೂಲಕ ಜಿಲ್ಲಾ ನೋಡೆಲ್ ಅಧಿಕಾರಿ (ಹಸುರು ನೀತಿ ಸಂಹಿತೆ) ಅವರ ಗಮನಕ್ಕೆ ತರಬೇಕು. ಚುನಾವಣೆ ಪ್ರಚಾರ ಕಾರ್ಯಕ್ರಮದಲ್ಲಿ ಆಹಾರ, ಕುಡಿಯುವ ನೀರು ಇತ್ಯಾದಿಗಳಿಗಾಗಿ ಎಲ್ಲ ರೀತಿಯ ಡಿಸ್ಪೋಸೆಬಲ್ ವಸ್ತುಗಳನ್ನು ಕೈಬಿಟ್ಟು ಸ್ಟೀಲ್ ಪಾತ್ರೆ, ಲೋಟ, ಬಾಳೆ ಎಲೆ ಇತ್ಯಾದಿ ಬಲಸಬೇಕು. ಕಾಗದ ವೇಸ್ಟ್ ಗಳ ಸಹಿತ ವಸ್ತುಗಳನ್ನು ಪ್ರತ್ಯೇಕ ಬಿನ್ ಗಳಲ್ಲಿ ಸಂಗ್ರಹಿಸಿ, ನಂತರ ಸ್ಕ್ರಾಚ್ ಡೀಲರ್ ಗೆ ಹಸ್ತಾಂತರಿಸಬೇಕು.

