ಚುನಾವಣೆ : 27,28ರಂದು ತರಬೇತಿ
0
ಮಾರ್ಚ್ 26, 2019
ಕಾಸರಗೋಡು: ಲೋಕಸಭೆ ಚುನಾವಣೆ ಸಂಬಂಧ ಮತಗಟ್ಟೆ ಕರ್ತವ್ಯದ ಸಿಬ್ಬಂದಿಗೆ ತರಬೇತಿ ಮಾ.27,28ರಂದು ಪೆರಿಯ, ತ್ರಿಕರಿಪುರ ಪೋಲಿಟೆಕ್ನಿಕ್ ಕಾಲೇಜುಗಳಲ್ಲಿ ನಡೆಯಲಿದೆ.
ಈ ಸಂಬಂಧ ಸೂಚನೆ, ನೇಮಕ ಆದೇಶ ಈಗಾಗಲೇ ವಿತರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದ್ದಾರೆ. ಮಂಜೂರುಗೊಂಡಿರುವ ತರಬೇತಿ ಅವಧಿಯಲ್ಲಿ ಯಾರಾದರೂ ಮಗಟ್ಟೆ ಸಿಬ್ಬಂದಿ ತರಬೇತಿಗೆ ಹಾಜರಾಗಲು "ಪರೀಕ್ಷೆ ಕರ್ತವ್ಯ"ದಂಥಾ ಕಾರಣಗಳಿದ್ದರೆ ಇದೇ ತರಬೇತಿ ಕೇಂದ್ರಗಳಲ್ಲಿ ಬೇರೆ ಸೆಷನ್ಸ್ ಗಳಲ್ಲಿ ಭಾಗವಹಿಸುವ ರೀತಿ ವ್ಯವಸ್ಥೆ ಮಾಡಲಾಗುವುದು. ಪರೀಕ್ಷೆ ಕತ್ರ್ಯ ಸಹಿತ ಹೊಣೆಯಿರುವ ಸಿಬ್ಬಂದಿ ಪ್ರಸ್ತುತ ಜವಾಬ್ದಾರಿಯ ದಾಖಲೆಗಳನ್ನು ಮಾ.29ರಂದು ಬೆಳಗ್ಗೆ 9.30ಕ್ಕೆ ಪೆರಿಯ ಸರಕಾರಿ ಪಾಲಿಟೆಕ್ನಿಕ್ ನಲ್ಲಿ ನಡೆಯುವ ಹೆಚ್ಚುವರಿ ಬ್ಯಾಚ್ ನಲ್ಲಿ ಭಾಗವಹಿಸಬಹುದಾಗಿದೆ. ನಿಗದಿತ ಅವಧಿಯಲ್ಲಿ ಹಾಜರಾಗಲು ಸಾಧ್ಯವಾಗದೇ ಇರುವ ದಾಖಲೆಗಳನ್ನು ಪರಿಶೀಲನೆಗೆ ನಿಡದೇ ಇರುವ ಸಿಬ್ಬಂದಿ ವಿರುದ್ಧ 1951ರ ಜನಪ್ರಾತಿನಿಧ್ಯ ಕಾಯಿದೆ ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿರುವರು.

