ಕರಾವಳಿ ಮತದಾನ ಸಂದೇಶ ಯಾತ್ರೆ ಆರಂಭ
0
ಮಾರ್ಚ್ 26, 2019
ಕಾಸರಗೋಡು: ಲೋಕಸಭಾ ಚುನಾವಣೆ ಸಂಬಂಧ ಜನಜಾಗೃತಿಗಾಗಿ ಮಂಗಳವಾರ ಕರಾವಳಿ ಮತದಾನ ಸಂದೇಶ ಯಾತ್ರೆ ನಡೆಸಲಾಯಿತು.
ಸ್ವೀಪ್ ಕಾರ್ಯಕ್ರಮ ವತಿಯಿಂದ ಲೋಕಸಭೆ ಚುನಾವಣೆಯಲ್ಲಿ ಎಲ್ಲ ಮತದಾರರು ಮತದಾನ ನಡೆಸುವಂತೆ ಪ್ರೇರೇಪಿಸುವ, "ನನ್ನ ಮತದಾನ ನನ್ನ ಹಕ್ಕು" ಎಂಬ ಸಂದೇಶದೊಂದಿಗೆ ಕರಾವಳಿ ಮತದಾನ ಸಂದೇಶ ಯಾತ್ರೆ ಪರ್ಯಟನೆ ನಡೆಸಿತು.
ನೆಲ್ಲಿಕುಂಜೆ ಕರಾವಳಿಯಲ್ಲಿ ಈ ಸಂಬಂಧ ನಡೆದ ಸಮಾರಂಭದಲ್ಲಿ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಯಾತ್ರೆ ಉದ್ಘಾಟಿಸಿದರು. ಕರಾವಳಿಯ ಕುದಿರ್ ಎಂಬಲ್ಲಿಂದ ಶಿಂಗಾರಿಮೇಳ ಸಹಿತ ಮತದಾನ ಜಾಗೃತಿ ಸಂದೇಶ ಫಲಕಗಳನ್ನು ಹೊತ್ತು ಮಹಿಳೆಯರ, ಮಕ್ಕಳ ಸಹಿತ ಆರಂಭಗೊಂಡ ಯಾತ್ರೆ ನೆಲ್ಲಿಕುಂಜೆ ಲೈಟ್ ಹೌಸ್ ಬಳಿ ಸಮಾರೋಪಗೊಂಡಿತು. ಸ್ವೀಪ್ ನೋಡೆಲ್ ಅಧಿಕಾರಿ ಮಹಮ್ಮದ್ ನೌಷಾದ್ ನೇತೃತ್ವ ವಹಿಸಿದ್ದರು. ಹಿರಿಯ ಸಹಕಾರಿ ಇನ್ಸ್ ಪೆಕ್ಟರ್ ಸತೀಶ್ ಸ್ವಾಗತಿಸಿದರು. ಬೈಜು ವಂದಿಸಿದರು.

