HEALTH TIPS

ಚುನಾವಣಾ ನಿಯಂತ್ರಣ ಕೊಠಡಿ ಮಹಿಳೆಯರ ಕೈಗೆ

ಕಾಸರಗೋಡು: ಲೋಕಸಭೆ ಚುನಾವಣೆ ಸಿದ್ಧತೆ ಅಂಗವಾಗಿ ಆರಂಭಿಸಲಾದ ಜಿಲ್ಲೆಯ ನಿಯಂತ್ರಣ ಕೊಠಡಿಯನ್ನು ನಿಯಂತ್ರಿಸುತ್ತಿರುವುದು ಮಹಿಳೆಯರು. ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಸಹಿತ ದೂರುಗಳನ್ನು, ಮತದಾತರ ಸಹಯ ವಾಣಿ ಇತ್ಯಾದಿಗಳನ್ನು ನಿಯಂತ್ರಿಸುವ ಕಾಸರಗೋಡು ಜಿಲ್ಲಾಧಿಕಾರಿ ಕಚೇರಿಯಲ್ಲಿ ಚಟುವಟಿಕೆ ನಡೆಸುತ್ತಿರುವ ಈ ನಿಯಂತ್ರಣ ಕೊಠಡಿ ಕಿರಿಯ ವರಿಷ್ಠಾಧಿಕಾರಿಗಳಾದ ಇಬ್ಬರು ಮಹಿಳೆಯರ ನೇತೃತ್ವದಲ್ಲಿ ಚಟುವಟಿಕೆ ನಡೆಸುತ್ತಿದೆ. ರಾಜ್ಯದಲ್ಲಿ ಮಹಿಳೆಯರೇ ನೇತೃತ್ವ ನೀಡುತ್ತಿರುವ ಏಕೈಕ ನಿಯಂತ್ರಣ ಕೊಠಡಿ ಇದಾಗಿದೆ. ಕಿರಿಯ ವರಿಷ್ಠಾಧಿಕಾರಿಗಳಾದ ಸಿ.ಜಿ.ಶ್ಯಾಮಲಾ, ಮಂಗಳವಾರ ಎಂ.ದಾಸ್ ಎಂಬವರನ್ನು ನೋಡೆಲ್ ಅಧಿಕಾರಿಗಳಾಗಿ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ನೇಮಕಗೊಳಿಸಿದ್ದಾರೆ. ಗುಮಾಸ್ತರಾದ ಷೀಜಾ ಎ., ನಮಿತಾ ಎ., ಸಜೀತಾ ಪಿ.ಎ. ಎಂಬವರು ಈ ಕೊಠಡಿಯಲ್ಲಿ ಸಕ್ರಿಯರಾಗಿದ್ದಾರೆ. ಚುನಾವಣೆ ನೀತಿಸಂಹಿತೆ ಉಲ್ಲಂಘಿಸಿದ ಸಂಬಂಧ ದೂರು ಸ್ವೀಕರಿಸುವ ಸಿ-ವಿಜಿಲ್(ಸಿಟಿಝನ್ ವಿಜಿಲ್) ಆಪ್ಲಿಕೇಷನ್, 04994-255825, 04994-255676 ಎಂಬ ನಂಬ್ರಗಳಿಗೆ ಲಭಿಸುವ ದೂರುಗಳು, ಮತದಾರರ ಸಹಾಯ ವಾಣಿಯಾಗಿರುವ "1950" ಎಂಬ ನಂಬ್ರಕ್ಕೆ ಬರುವ ಸಾರ್ವಜನಿಕ ಸಂಶಯಗಳು ಇತ್ಯಾದಿಗಳ ಪರಿಹಾರ ಉದ್ದೇಶದಿಂದ ಈ ನಿಯಂತ್ರಣಕೊಠಡಿ ಚಟುವಟಿಕೆ ನಡೆಸುತ್ತಿದೆ. ಸಿ-ವಿಜಿಲ್ ಆಪ್ ನಲ್ಲಿ ಈ ವರೆಗೆ 32 ದೂರುಗಳು ಲಭಿಸಿವೆ. ಅವುಗಳಿಗೆ ಪರಿಹಾರ ಲಭಿಸಿದೆ. ಸಾರ್ವಜನಿಕ ಪ್ರದೇಶಗಳಲ್ಲಿ ಸ್ಥಾಪಿಸಲಾದ ಭಿತ್ತಪತ್ರ, ಬ್ಯಾನರ್, ಪತಾಕೆಗಳು ಇತ್ಯಾದಿ ಸಂಬಂಧ ದೂರುಗಳು ಸಿ-ವಿಜಿಲ್ನಲ್ಲಿ ಅಧಿಕವಾಗಿ ಲಭಿಸಿವೆ. ಚುನಾವಣೆ ನೀತಿಸಂಹಿತೆ ಉಲ್ಲಂಘನೆ ಕಂಡುಬಂದಲ್ಲಿ ಮೊಬೈಲ್ ಫೋನ್ ಕೆಮೆರದಲ್ಲಿ ಫೊಟೋ ಯಾ ವೀಡಿಯೋ ಚಿತ್ರೀಕರಿಸಿ ಸಿ-ವಿಜಿಲ್ ಗೆ ಕಳುಹಿಸಿದರೆ, ಆ ಮೂಲಕ ಜಿಲ್ಲಾ ಚುನಾವಣೆ ಕೇಂದ್ರಕ್ಕೆ ರವಾನಿಸಲಗುತ್ತದೆ. ತಕ್ಷಣ ಸ್ಕ್ವಾಡ್ ಪ್ರದೇಶಕ್ಕೆ ತಲಪಿ ಕ್ರಮ ಕೈಗೊಳ್ಳುತ್ತದೆ. ದೂರು ಅಪ್ ಲೋಡ್ ನಡೆಸಿದ ತಕ್ಷಣ ಯೂನಿಕ್ ಐಡಿ ಯೊಂದು ಲಭಿಸುತ್ತದೆ. ಈ ಮೂಲಕ ದೂರಿನ ಫೊಲೋಅಪ್ ಮೊಬೈಲ್ ನಲ್ಲೇ ಟ್ರಾಕ್ ನಡೆಸಬಹುದಾಗಿದೆ. ಒಬ್ಬರಿಗೆ ಒಂದಕ್ಕಿಂತ ಅಧಿಕ ದೂರುಗಳನ್ನು ದಾಖಲಿಸಬಹುದು ಎಂಬುದು ಈ ಸೌಲಭ್ಯದ ವಿಶೇಷತೆಯಾಗಿದೆ. ದೂರುದಾತನ ಮಾಹಿತಿಗಳನ್ನು ಗುಪ್ತವಾಗಿರಿಸಲಾಗುವುದು. ಮೊಬೈಲ್ ಫೋನ್ ನಲ್ಲಿ ಬಹಳ ಸುಲಭವಾಗಿ ಬಳಸಬಹುದಾದ ರೀತಿ ಆಪ್ ರಚಿಸಲಾಗಿದೆ. ನೀತಿಸಂಹಿತೆ ಉಲ್ಲಂಘನೆ ನಡೆದಿರುವ ಪ್ರದೇಶಗಳಲ್ಲಿ ನೇರವಾಗಿ ತೆರಳಿ ಚಿತ್ರ ಪಡೆದರೆ ಮಾತ ಆಪ್ ಮೂಲಕ ರವಾನಿಸಬಹುದಾಗಿದೆ. ಇತರರು ಪಡೆದ ಚಿತ್ರ ಪಡೆದು ಅಪ್ ಲೋಡ್ ನಡೆಸಲು ಸಾಧ್ಯವಿಲ್ಲ. ಈ ಮೂಲಕ ಹುಸಿದೂರುಗಳನ್ನು ದಾಖಲಿಸಲು ಸಾಧ್ಯವಿಲ್ಲ. ನಿರಂತರ 5 ನಿಮಿಷಗೋ ಕಾಲ ಮಾತ್ರ ಈ ಆಪ್ ಚಟುವಟಿಕೆ ನಡೆಸುತ್ತದೆ. ಮತ್ತೆ ಆಪ್ ತೆರೆದು ದೂರು 5 ನಿಮಿಷಗ:ಳ ವಧಿಯಲ್ಲಿ ಸೀಮಿತಗೊಳಿಸಿ ರವಾನಿಸಬೇಕಾಗುತ್ತದೆ. ಸಿ-ವಿಜಿಲ್ ಆಪ್ ಪ್ಲೇಸ್ಟೋರ್ ನಲ್ಲಿ ಲಭ್ಯವಿದೆ: ತಿತಿತಿ.ಛಿeo.ಞeಡಿಚಿಟಚಿ.gov.iಟಿ/home.hಣmಟ ಇತರ ರೂಪದ ಚುನಾವಣೆ ಸಂಬಂಧ ದೂರುಗಳಿದ್ದಲ್ಲಿ 04994-255825, 04994-255676 ಎಂಬ ನಂಬ್ರಗಳಲ್ಲಿ ನಡಬಹುದು. ಈ ದೂರುಗಳಿಗೂ ತಕ್ಷಣ ಪರಿಹಾರ ಲಭಿಸಲಿದೆ. ಮತದಾರರ ಸಹಾಯವಾಣಿ 1950 ನಂಬ್ರಕ್ಕೆ ಈಗಾಗಲೇ 175 ದೂರುಗಳು ಲಭಿಸಿವೆ. ಆನಿವಾಸಿ ಭಾರತೀಯರ ಮತದಾನ, ಗುರುತುಚೀಟಿ ಪಡೆಯುವಿಕೆ ಇತ್ಯಾದಿಗಳ ಮಾಹಿತಿ ನೀಡುವಲ್ಲಿ ಈ ನಿಯಂತ್ರಣ ಕೊಠಡಿಯ ಸದಸ್ಯೆಯರು ತಾಳ್ಮೆಯಿಂದ ವ್ಯವಹರಿಸುತ್ತಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries