ಮೊಗೇರ ಸರ್ವೀಸ್ ಸೊಸೈಟಿಯ ರಾಜ್ಯ ಸಮಿತಿಗೆ ನೂತನ ಪದಾಧಿಕಾರಿಗಳ ಆಯ್ಕೆ
0
ಮಾರ್ಚ್ 26, 2019
ಉಪ್ಪಳ: ಮೊಗೇರ ಸರ್ವೀಸ್ ಸೊಸೈಟಿಯ ಕೇರಳ ರಾಜ್ಯ ಸಮಿತಿಯ ಮಹಾಸಭೆಯು ರಾಜ್ಯ ಅಧ್ಯಕ್ಷ ಮಾಧವನ್ ವಯನಾಡು ಇವರ ಅಧ್ಯಕ್ಷತೆಯಲ್ಲಿ ಉಪ್ಪಳ ಪಚ್ಲಂಪಾರೆ ಬ್ರಹ್ಮಶ್ರೀ ಮೊಗೇರ ಸಭಾಂಗಣದಲ್ಲಿ ಇತ್ತೀಚೆಗೆ ಜರಗಿತು.
ರಾಜ್ಯ ಪ್ರಧಾನ ಕಾರ್ಯದರ್ಶಿ ಗಿರಿಜಾ ತಾರಾನಾಥ ಸ್ವಾಗತಿಸಿ, ಚಟುವಟಿಕಾ ವರದಿಯನ್ನು ಮಂಡಿಸಿದರು. ಸಮಿತಿಯ ಲೆಕ್ಕಪತ್ರ ಹಾಗೂ ಕರಡು ಮುಂಗಡಪತ್ರವನ್ನು ಅಂಗೀಕರಿಸಲಾಯಿತು. ಇದೇ ಸಂದರ್ಭದಲ್ಲಿ 2019-20ನೇ ಸಾಲಿನ ನೂತನ ಸಮಿತಿಗೆ ಪದಾಧಿಕಾರಿಗಳನ್ನು ಆಯ್ಕೆಮಾಡಲಾಯಿತು. ಕೆ.ಕೆ.ಸ್ವಾಮಿಕೃಪಾ ಅಧ್ಯಕ್ಷರಾಗಿ, ಮಾಧವನ್ ವಯಾನಾಡು ಹಾಗೂ ನಾರಾಯಣ ಸಿ.ಕೆ.ಚಿಗುರುಪಾದೆ ಉಪಾಧ್ಯಕ್ಷರು, ಗಿರಿಜಾ ತಾರಾನಾಥ ಕುಂಬಳೆ ಪ್ರ.ಕಾರ್ಯದರ್ಶಿ, ಸುಂದರ ಕಾಯಿಮಲೆ, ಶಿವರಾಮ ಮಾನಂದವಾಡಿ, ಸೋಮನಾಥ ಮಾಸ್ತರ್ ಗೋಳಿಯಡ್ಕ ಜೊತೆಕಾರ್ಯದರ್ಶಿಗಳು, ಶಿವರಾಮ ಪಾಡಿ ಚೆಂಗಳ ಕೋಶಾಧಿಕಾರಿ ಮತ್ತು ಚನಿಯಪ್ಪ ಮಾಸ್ತರ್ ಬಾಯಾರು, ಗಣೇಶ್ ಸಿ.ಕೆ.ಪಾಡಿ, ಐತ್ತಪ್ಪ ಪಂಜ, ಮಾಧವ ಮೀಯಪದವು, ಶಿವಕುಮಾರ ಕಜೆ ಬೆಳಿಂಜ, ಬಾಲಕೃಷ್ಣ ಗೋಳಿಕಟ್ಟೆ, ಕಲ್ಯಾಣಿ, ನಾರಾಯಣ ಕೆ.ಯು. ಉಪ್ಪಳ, ಗೋಪಾಲಕೃಷ್ಣ ಪಚ್ಲಂಪಾರೆ, ರಾಮ ಪಚ್ಲಂಪಾರೆ, ಅನುಶ್ ಎಚ್., ಭಾಗೀರಥಿ, ಹರಿಣಾಕ್ಷಿ, ಸದಾನಂದ ಪಾಡಿ ಪದಾಧಿಕಾರಿಗಳಾಗಿ ಆಯ್ಕೆಯಾದರು.
ಮಹಾಸಭೆಯಲ್ಲಿ ಜಿಲ್ಲಾಧ್ಯಕ್ಷ ಧರ್ಮದರ್ಶಿ ಬಾಬು ಯು. ಪಚ್ಲಂಪಾರೆ, ಗೌರವಾಧ್ಯಕ್ಷ ಕುಟ್ಟಿ ತೂಮಿನಾಡು, ದೈವಪಾತ್ರಿಗಳಾದ ಸದಾಶಿವ ಕಣ್ವತೀರ್ಥ, ಲಕ್ಷ್ಮಣ ಕೇದಕೆದಡಿ ಶುಭಹಾರೈಸಿದರು. ಮೋಹನ ಯು. ಮಂಜೇಶ್ವರ ನಿರೂಪಿಸಿ, ಗಣೇಶ ಸಿ.ಕೆ.ವಂದಿಸಿದರು.

