ಎಡರಂಗದ ಕುಟುಂಬ ಸಂಗಮ
0
ಮಾರ್ಚ್ 26, 2019
ಮಂಜೇಶ್ವರ: ಎಡರಂಗದ 64ನೇ ಬೂತ್ ಸಮಿತಿಯ ನೇತೃತ್ವದಲ್ಲಿ ಸೋಮವಾರ ಚಿಗುರುಪಾದೆಯಲ್ಲಿ ನಡೆದ ಕುಟುಂಬ ಸಭೆಯನ್ನು ಸಿಪಿಎಂ ನೇತಾರರಾದ ಕೆ.ಆರ್ ಜಯನಂದ ಉದ್ಘಾಟಿಸಿದರು. ಕೇಶವ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮುಖಂಡರಾದ ಜಯರಾಮ ಬಲ್ಲಂಗುಡೇಲ್, ಗೋವಿಂದ ಹೆಗ್ಡೆ ಬೆಜ್ಜ, ಅರವಿಂದ ಚಿಗುರುಪಾದೆ, ಚಂದ್ರಶೇಖರ ಚಿಗುರುಪಾದೆ ಮೊದಲಾದವರು ಉಪಸ್ಥಿತರಿದ್ದರು. ಶ್ರೀನಿವಾಸ ಸ್ವಾಗತಿಸಿ, ರಾಘವ ವಂದಿಸಿದರು.

