ಡಯಟ್ ನಲ್ಲಿ ಕಲ್ಚರಲ್ ಮತ್ತು ಎಜ್ಯುಕೇಶನ್ ಪೆಸ್ಟ್
0
ಮಾರ್ಚ್ 26, 2019
ಮಧೂರು: ನವಕೇರಳ ನಿರ್ಮಾಣದಂಗವಾಗಿ ಬಹುಮುಖ ಚರ್ಚೆ, ಕಾರ್ಯಯೋಜನೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಕೇರಳದ ವಿದ್ಯಾಭ್ಯಾಸ, ಸಂಸ್ಕಾರ ಮತ್ತು ಪರಿಸರ ಎಂಬ ವಿಷಯಗಳನ್ನು ಕೇಂದ್ರವಾಗಿರಿಸಿ ಮಾಯಿಪ್ಪಾಡಿಯಲ್ಲಿರುವ ಶಿಕ್ಷಕ ಶಿಕ್ಷಣ ತರಬೇತಿ ಕೇಂದ್ರ ಡಯಟ್ ನಲ್ಲಿ ಕಲ್ಚರಲ್ ಮತ್ತು ಎಜ್ಯುಕೇಶನ್ ಪೆಸ್ಟ್ ಎಂಬ ವಿನೂತನ ಕಾರ್ಯಕ್ರಮ ಗುರುವಾರ ಮತ್ತು ಶುಕ್ರವಾರ ನಡೆಯಿತು.
ಕಾರ್ಯಕ್ರಮದ ಅಂಗವಾಗಿ ಚಿತ್ರ ಪಾಠಶಾಲೆ, ವಿದ್ಯಾಭ್ಯಾಸ ಪಾಠಶಾಲೆ, ಸಿನಿಮಾ ಪಾಠಶಾಲೆ, ಕಾವ್ಯ ಹಾಗೂ ನಾಟಕ ಪಾಠಶಾಲೆ ಎಂಬ ವಿಭಾಗಗಳಲ್ಲಿ ವಿವಿಧಚಟುವಟಿಕೆಗಳು ನಡೆಯಿತು.
ಚಿತ್ರ ಪಾಠಶಾಲೆಯಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಜಯಪ್ರಕಾಶ ಶೆಟ್ಟಿ ಬೇಳ, ಶ್ಯಾಮಶಶಿ, ಪ್ರಕಾಶ್ ಪಿ, ಅರವಿಂದನ್ ಅವರುಗಳು ಭಾಗವಹಿಸಿದರು. ವಿದ್ಯಾಭ್ಯಾಸ ಕ್ಷೇತ್ರದಲ್ಲಿ ಚಿತ್ರರಚನೆಯ ಬಗ್ಗೆ ಅಮೋಘ ಕೈಚಳಕದಿಂದ ಚಿತ್ರರಚಿಸಿ, ಮಾಹಿತಿಗಳನ್ನು ನೀಡಿ ಅನುಭವಗಳನ್ನು ಹಂಚಿಕೊಂಡರು. ಈ ಸಂದರ್ಭ ಪ್ರಕೃತಿ ಸ್ನೇಹ, ಜನ ಸಮುದಾಯ, ಹವಾಮಾನಗಳು ವಿಷಯಗಳಾಗಿರುವ ಪ್ರಕೃತಿ ರಮಣೀಯ ಚಿತ್ರಗಳನ್ನು ರಚಿಸಲಾಯಿತು. ಅನಿಲ್ ಮಣಿಯರ ಸಂಯೋಜನೆ ನಡೆಸಿದರು.

